ಹೊಸ ಸೌಹಾರ್ದ ಸಹಕಾರಿಗಳಿಗಾಗಿ ಪ್ರವೇಶ ತರಬೇತಿ

ಹೊಸ ಸೌಹಾರ್ದ ಸಹಕಾರಿಗಳಿಗಾಗಿ ಪ್ರವೇಶ ತರಬೇತಿ

ಬೆಳಗಾವಿ 21: ಸೌಹಾರ್ದ ಸಹಕಾರಿಗಳು ತಮ್ಮ ಸಹಕಾರಿಗಳಲ್ಲಿ ಠೇವುಣಿಗಳನ್ನು ಸ್ವೀಕರಿಸುತ್ತಿದ್ದು, ಸರಿಯಾದ ಉದ್ದೇಶಕ್ಕೆ ಬಳಕೆ ಮಾಡಬೇಕಾಗಿರುತ್ತದೆ. ಸಹಕಾರಿಗಳು ಪಡೆದು ಠೇವಣಿಗಳನ್ನು ಸರಿಯಾದ ರೂಪದಲ್ಲಿ ಉಪಯೋಗಿಸಿದ್ದಲ್ಲಿ ಸಹಕಾರಿಗಳ ಬೆಳವಣಿಗೆಯು ಉತ್ತಮವಾಗಿ ಲಾಭದತ್ತ ಸಾಗುತ್ತದೆ. ಅದಲ್ಲದೇ ಸಾಲಗಳನ್ನು ಸಹ ವೇಳೆ ಸರಿಯಾಗಿ ಪಾವತಿ ಮಾಡುವ ಗ್ರಾಹಕರಿಗೆ ನೀಡಬೇಕು ಅಂತಹ ಗ್ರಾಹಕರಿಗೆ ಸಾಲ ನೀಡಿದ್ದಲ್ಲಿ ಸಾಲವು ಮರುಪಾವತಿಯಾಗತ್ತದೆ ಎಂದು ಬೆಳಗಾವಿ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎ ಆರ್ ಮಂಟೂರ ತಿಳಿಸಿದರು.

ನಗರದ ಮಧುಬನ ಹೋಟಲ ಗೋವಾವೇಸದಲ್ಲಿ ದಿ. 21ರಂದು ಬೆಳಗಾವಿ ಪ್ರಾಂತದ ಬೆಳಗಾವಿ, ಬಾಗಲಕೋಟ, ವಿಜಯಪುರ, ಗದಗ, ಧಾರವಾಡ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೊಸದಾಗಿ ನೋಂದಣಿಗೊಂಡ ಸೌಹಾರ್ದ ಸಹಕಾರಿಗಳಿಗಾಗಿ ಏರ್ಪಡಿಸಲಾಗಿದ್ದ ಪ್ರವೇಶ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಹಕಾರ ಇಲಾಖೆಯ ನಿವೃತ್ತ ಅಪರ ನಿಬಂಧಕ ನಾಗರಾಜಯ್ಯ ಮಾತನಾಡುತ್ತ ಸಂಯುಕ್ತ ಸಹಕಾರಿಗಳು ಹೊಸ ಸಹಕಾರಿಗಳಿಗಾಗಿ ಪ್ರವೇಶ ತರಬೇತಿಯನ್ನು ಹಮ್ಮಿಕೊಂಡಿದ್ದು ಸಂತೋಷದ ವಿಷಯವಾಗಿದೆ. ಹೊಸ ಸಹಕಾರಿಗಳು ಕನರ್ಾಟಕ ಸೌಹಾರ್ದ ಸಹಕಾರಿಗಳ ಕಾಯ್ದೆ 1997ರಡಿ ನೋಂದಣಿಗೊಂಡು ಒಂದು ವರ್ಷ ಕಳೆದಿದೆ. ತಾವು ಸಹಕಾರಿ ಕಾರ್ಯಚಟುವಟಿಕೆಯ ಬಗ್ಗೆ ತಿಳಿದುಕೊಂಡು ಉತ್ತಮವಾಗಿ ನಿರ್ವಹಿಸಬೇಕಾಗಿರುತ್ತದೆ. ಸಹಕಾರಿಗಳು ಒಂದು ವರ್ಷದಲ್ಲಿ ಮುಚ್ಚದೆ ಉತ್ತರೋತ್ತವಾಗಿ ಹೆಮ್ಮರವಾಗಿ ಬೆಳೆದು ಸದಸ್ಯರ ಉತ್ತಮ ಸೇವೆಯನ್ನು ನೀಡಬೇಕು. ಅದಲ್ಲದೇ ಸಹಕಾರಿಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಸಹಕಾರಿಯ ಸಿಬ್ಬಂದಿಗಳು ಕಾಲಕಾಲಕ್ಕೆ ಸಭೆಗಳನ್ನು ಜರುಗಿಸಿ ಪ್ರಮಾಣಿಕವಾಗಿ ಸದಸ್ಯರಿಗೆ ಸೇವೆ ನೀಡಿದ್ದಲ್ಲಿ ಸಹಕಾರಿಯು ಉತ್ತಮವಾಗಿ ಬೆಳೆಯುತ್ತದೆ ಎಂದು ತಿಳಿಸಿದರು. 

ಪ್ರಾಸ್ತವಿಕ ನುಡಿಯನ್ನು ಸಂಯುಕ್ತ ಸಹಕಾರಿಯ ಪ್ರಾಂತೀಯ ಅಧಿಕಾರಿ ಶ್ರೀಕಾಂತ ಬರುವೆ ನುಡಿದರು. ನಿರೂಪಣೆಯನ್ನು ಸಂಯುಕ್ತ ಸಹಕಾರಿಯ ಸಿಬ್ಬಂದಿ ವೆಂಕಟೇಶ ರಾಠೋಡ ಮತ್ತು ವಂದನಾರ್ಪಣೆಯನ್ನು ಸಂಯುಕ್ತ ಸಹಕಾರಿಯ ಸಿಬ್ಬಂದಿ ಕಲ್ಮೇಶ ಇವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಂಯುಕ್ತ ಸಹಕಾರಿ ಸಿಬ್ಬಂದಿಗಳು ಮತ್ತು ಸೌಹಾರ್ದ ಸಹಕಾರಿಗಳ ಪ್ರತಿನಿಧಿಗಳು ಹಾಜರಿದ್ದರು. 

ಸುದ್ದಿ ಓದಿ