ಚಿಕ್ಕೋಡಿ

ಸುವ್ಯವಸ್ಥಿತವಾಗಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಸಕಲ ಸಿದ್ಧತೆ

ಸುವ್ಯವಸ್ಥಿತವಾಗಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಸಕಲ ಸಿದ್ಧತೆ

ಚಿಕ್ಕೋಡಿ 14: ಕೊರೊನಾ ಎರಡನೆ ಅಲೆ ಭೀಕರತೆ ಮತ್ತು ಮೂರನೆ ಅಲೆ ಮಕ್ಕಳಿಗೆ ಬರುತ್ತದೆ ಎಂಬ ತಜ್ಞರ ಅಭಿಪ್ರಾಯದಂತೆ ಎರಡೆ ದಿನದಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ನಡೆಸಲು ಸರ್ಕಾರ ತಿರ್ಮಾನಿಸಿದೆ. ಇದರಿಂದ ರಾಜ್ಯದ ಗಡಿ ಆಚೆ ಇರುವ ಮಕ್ಕಳನ್ನು ಸುರಕ್ಷಿತವಾಗಿ ಪರೀಕ್ಷೆಗೆ ಕರೆದುಕೊಂಡ ಬರಲು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ತಿಳಿಸಿದರು. 

ಇಲ್ಲಿನ ಡಿಡಿಪಿಐ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆಗೆ ದೊಡ್ಡ ಚಾಲೇಂಜ ಆಗಿದೆ. ಯಾವುದೇ ಮಕ್ಕಳಿಗೆ ಅನಾನುಕೂಲವಾಗದಂತೆ ಪರೀಕ್ಷೆ ನಡೆಸಲು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. 

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಂಟು ವಲಯದಲ್ಲಿ 30156 ಬಾಲಕರು, 14893 ಬಾಲಕಿಯರು ಸೇರಿ ಒಟ್ಟು 45049 ಮಕ್ಕಳು ಪರೀಕ್ಷೆಗೆ ಹಾಜರಾಗಲಿದ್ದು, 12 ವಿದ್ಯಾರ್ಥಿಗೆ ಒಂದು ಕೊಠಡಿಯಂತೆ ಜಿಲ್ಲೆಯಲ್ಲಿ 4012 ಕೊಠಡಿ ಸ್ಥಾಪನೆ ಮಾಡಲಾಗಿದೆ. 221 ಪರೀಕ್ಷಾ ಕೊಠಡಿಯಲ್ಲಿ ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಕೊರೊನಾ ಮುಂಜಾಗೃತ ದೃಷ್ಠಿಯಿಂದ 53299 ಮಾಸ್ಕ, 255 ಥರ್ಮಲ; ಸ್ಕಾನರ್, 1790 ಲೀಟರ ಸ್ಯಾನಿಟೈಜರ ವ್ಯವಸ್ಥೆ ಕಲ್ಪಿಸಲಾಗಿದೆ. 

ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು 7 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಂಡು ಅವರಿಗೆ ನಾಲ್ಕು ಬಾರಿ ಆನಲೈನ್ ಮೂಲಕ ತರಬೇತಿ ನೀಡಲಾಗಿದೆ. ಜಿಲ್ಲೆಯ ಒಂಭತ್ತು ಕಡೆಗಳಲ್ಲಿ ಕೋವಿಡ್ ಕೇರ್ ಸೆಂಟರ ಸ್ಥಾಪಿಸಲಾಗಿದೆ ಎಂದರು. 

ಬದಲಾದ ಪರೀಕ್ಷಾ ಪ್ರಶ್ನೆ ಪತ್ರಿಕೆ: ಕೊರೊನಾ ಹಿನ್ನಲ್ಲೆಯಲ್ಲಿ ಹತ್ತನೆ ತರಗತಿ ಪರೀಕ್ಷೆ ಎರಡನೆ ದಿನದಲ್ಲಿ ನಡೆಸಿ ಮಕ್ಕಳಿಗೆ ಅನಾನುಕೂಲವಾಗದಂತೆ ಶಿಕ್ಷಣ ಇಲಾಖೆ ಎರಡು ದಿನದಲ್ಲಿ ಆರು ವಿಷಯಗಳ ಪರೀಕ್ಷೆ ನಡೆಸಲಿದೆ. ಒಂದು ಪರೀಕ್ಷೆಗೆ 40 ಅಂಕಗಳಂತೆ ಬಹು ಆಯ್ಕೆಯ ಪ್ರಶ್ನೆ ಪತ್ರಿಕೆಗೆ ಮೂರು ಗಂಟೆ ಸಮಯ ನಿಗದಿ ಪಡಿಸಿದೆ. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ 15 ನಿಮಿಷ ಹೆಚ್ಚುವರಿ ಕಾಲಾವಕಾಶ ನಿಗದಿ ಪಡಿಸಿದೆ.  

ಪ್ರತಿಯೊಂದು ವಿಷಯವೂ ಪ್ರತ್ಯೇಕವಾದ ಓಎಂಆರ್ ಹೊಂದಿರುವುದರಿಂದ ವಿಭಿನ್ ಬಣ್ಣಗಳಲ್ಲಿ ಹೊಂದಿದೆ. ಕನ್ನಡ ಮತ್ತು ಗಣಿತ ವಿಷಯ ಪಿಂಕ ಕಲರ್, ಇಂಗ್ಲೀಷ ಮತ್ತು ವಿಜ್ಞಾನ ವಿಷಯ ಆರೆಂಜ್ ಕಲರ್, ಹಿಂದಿ ಮತ್ತು ಸಮಾಜ ಗ್ರೀನ್ ಕಲರ್ ಹೀಗೆ ಮೂರು ಬಣ್ಣಗಳಿಂದ ಸಿದ್ಧಪಡಿಸುವುದರಿಂದ ಮಕ್ಕಳಿಗೆ ಗೊಂದಲ ಆಗದಂತೆ ಶಿಕ್ಷಣ ಇಲಾಖೆ ಈ ರೀತಿ ಕ್ರಮಕೈಗೊಂಡಿದೆ ಎಂದರು. 

ಶಿಕ್ಷಣಾಧಿಕಾರಿ ಎ.ಸಿ.ಗಂಗಾಧರ​‍್ಪ, ಪರೀಕ್ಷೆ ನೋಡಲ್ ಅಧಿಕಾರಿ ಅರಿಹಂತ ಬಿರಾದಾರ ಮುಂತಾದವರು ಇದ್ದರು. 


ಸುದ್ದಿ ಓದಿ