ಬಳ್ಳಾರಿ

ನೀಟ್ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿ ಮಾಲಪಾಟಿ ಆದೇಶ

ನೀಟ್ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿ ಮಾಲಪಾಟಿ ಆದೇಶ

ಬಳ್ಳಾರಿ 06: ಜಿಲ್ಲೆಯಲ್ಲಿ ಮೇ 07 ರಂದು ಮಧ್ಯಾಹ್ನ 02 ರಿಂದ ಸಂಜೆ 05.20 ರವರೆಗೆ ನೀಟ್ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಅವರು ಆದೇಶಿಸಿದ್ದಾರೆ. 

ನಗರದ ಸಿರುಗುಪ್ಪ ರಸ್ತೆಯ ಶ್ರೀ ಚೈತನ್ಯ ಟೆಕ್ನೋ ಶಾಲೆ, ಕಪ್ಪಗಲ್ ರಸ್ತೆಯ ಡ್ರೀಮ್ ವರ್ಲ್ಡ್‌ ಶಾಲೆ, ಸಂಜಯ್‌ಗಾಂಧಿ ನಗರದ ಸಂಜಯ್‌ಗಾಂಧಿ ಪಾಲಿಟೆಕ್ನಿಕ್ ಕಾಲೇಜ್, ಅಲ್ಲೀಪುರದ ಬಳ್ಳಾರಿ ಇನ್ಸಿ-್ಟಟ್ಯೂಟ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ಕಾಲೇಜ್, ತಾಳೂರು ರಸ್ತೆಯ ಬಾಲಬಾರತಿ ಕೇಂದ್ರೀಯ ವಿದ್ಯಾಲಯ,  ಹವಂಭಾವಿಯ ಹೊಸ ಶ್ರೀ ಚೈತನ್ಯ ಪಿಯು ಕಾಲೇಜ್, ಕೌಲ್‌ಬಜಾರ್ ಕೇಂದ್ರೀಯ ವಿದ್ಯಾಲಯ ಸೇರಿ ಒಟ್ಟು 07 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಒಳಗಿನ ಆವರಣವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿದ್ದಾರೆ. 

ಅನಧೀಕೃತ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶವನ್ನು ನಿಷೇಧಿಸಿದೆ ಹಾಗೂ ಆ ದಿನದಂದು ಮಧ್ಯಾಹ್ನ 01 ರಿಂದ ಸಂಜೆ 05.30 ರವರೆಗೆ ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತಲಿನ ಝೆರಾಕ್ಸ್‌ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶದಲ್ಲಿ ತಿಳಿಸಿದೆ. 

ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಮನವಿ 

ಬಳ್ಳಾರಿ 06: ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮುಲ್ಲಂಗಿ ಬೀದಿಯ ರಸ್ತೆ ಪಕ್ಕದಲ್ಲಿ ಸುಮಾರು 30-35 ವರ್ಷದ ಅಪರಿಚಿತ ವ್ಯಕ್ತಿಯು ಮೇ 02 ರಂದು ಮೃತಪಟ್ಟಿದ್ದು, ವಾರಸುದಾರರು ಪತ್ತೆಯಾಗಿರುವುದಿಲ್ಲ. ವಾರಸುದಾರರ ಪತ್ತೆಗಾಗಿ ಸಹಕರಿಬೇಕು ಎಂದು ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಚಹರೆ ಗುರುತು: ಎತ್ತರ ಸುಮಾರು 5.4ಅಡಿ, ಗುಂಡು ಮುಖ, ತೆಳುವಾದ ಮೈಕಟ್ಟು, ಕಪ್ಪು ಕೂದಲು ಗೋಧಿ ಮೈಬಣ್ಣ, ಉದ್ದನೆ ಮೂಗು, ಕುರುಚಲು ಗಡ್ಡ  ಇರುತ್ತದೆ  ಹೊಂದಿರುತ್ತಾನೆ.  ನೀಲಿ ಮತ್ತು ಕಪ್ಪು ಬಣ್ಣದ ತುಂಡು ತೋಳಿನ ಟೀ ಶರ್ಟ್‌, ಪಾಚಿ ಬಣ್ಣದ ನಿಕ್ಕರ್ ಧರಿಸಿರುತ್ತಾನೆ.  ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬ್ರೂಸ್ ಪೇಟೆ ಪೊಲೀಸ್ ಠಾಣೆಯ ದೂ. 08392-272022, ಪಿ.ಐ ಮೊ.9480803045, ಬಳ್ಳಾರಿ ನಗರ ಡಿ.ಎಸ್‌.ಪಿ. ಮೊ.9480803020 ಗೆ ಸಂಪರ್ಕಿಸಬಹುದು. 




ಸುದ್ದಿ ಓದಿ