ಮದರಖಂಡಿ ಗ್ರಾಮ ಪಂಚಾಯಿತಿ ರಸ್ತೆ ಜಾಗೆ ಒತ್ತುವರಿ ತಹಶೀಲ್ದಾರ, ತಾ.ಪಂ ಇಒ ಜಂಟಿ ತೆರವು ಕಾರ್ಯಾ ಚರಣೆ
ಜಮಖಂಡಿ : 23: ತಾಲೂಕಿನ ಮದರಖಂಡಿ ಗ್ರಾಮ ಪಂಚಾಯಿತಿಯ ಸುಮಾರು 18 ಗುಂಟೆಯಷ್ಟು ಮುಖ್ಯ ರಸ್ತೆ ಜಾಗೆಯನ್ನು ಕೆಲವು ಪಟ್ಟಭದ್ರ ಹಿತಾಸಕ್ತಿ ಶಕ್ತಿಗಳು ಒತ್ತುವರಿ ಮಾಡಿಕೊಂಡಿದನ್ನು. ತಹಶೀಲ್ದಾರ ಮತ್ತು ತಾ,ಪಂ ಇಒ ಜಂಟಿಯಾಗಿ ತೆರವು ಕಾಯರ್ಾಚರಣೆಯನ್ನು ನಡೆಸಿದರು.
ನಗರದ ತಾಲೂಕ ಪಂಚಾಯತ ಕಚೇರಿ ಮುಖ್ಯದ್ವಾರ ಆವರಣದ ಬಳಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಡಿಎಸ್ಎಸ್ ಸಂಘಟನೆ ಮತ್ತು ಹುಲಿಕೊಡಿ ಗ್ರಾಮಸ್ಥರ ಹೋರಾಟಕ್ಕೆ ಸ್ಪಂದಿಸಿದ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಸರ್ವೇ ನಂ-23ರ ಕ್ಷೇತ್ರ 10-30 ಎ.ಗುಂ ಜಮೀನಿನಲ್ಲಿ ನಿರ್ಮಾಣಗೊಂಡಿದ್ದು, ಒತ್ತುವರಿ ಮಾಡಿದ ಮಾಲೀಕರಿಗೆ ಈಗಾಗಲೇ 1,2,3ನೇ ನೋಟಿಸ್ ನೀಡಿದ್ದು, ಗಡುವು ಮೀರಿದರೂ ಕಂದಾಯ ಇಲಾಖೆ,ತಾಪಂ ಇಲಾಖೆ ಕಾನೂನು ಸಲಹೆಗಾರರಿಂದ ಒತ್ತುವರಿ ಮಾಡಿರುವುದು ದೃಢಪಟ್ಟದನ್ನು ಅರಿತ ಅಧಿಕಾರಿಗಳು ತೆರವು ಮಾಡುವ ಸಮಯದಲ್ಲಿ ಅಲ್ಲಿನ ಒತ್ತುವರಿ ಮಾಡಿಕೊಂಡಿರುವ ಜನರು ತಹಶೀಲ್ದಾರ ಹಾಗೂ ತಾ,ಪಂ, ಇಒ ಅಧಿಕಾರಿಗಳ ನಡುವೆ ವಾಗ್ವಾದ, ಮಾತಿನ ಘರ್ಷನೆ ನಡೆಯಿತು.
ತಹಶೀಲ್ದಾರ ಸದಾಶಿವ ಮಕ್ಕೋಜಿ ಮತ್ತು ತಾ,ಪಂ,ಇಒ ಗುರುಶಾಂತ ಬಳ್ಕೊಂಡಗಿ ಅವರು ಯಾವುದಕ್ಕೂ ಮಣಿಯದೇ ಜೆಸಿಪಿ ಮೂಲಕ ಮನೆಯ ಕಂಪೌಡ ಗೋಡೆಯನ್ನು ಹಾಗೂ ರಸ್ತೆಯ ಮೇಲೆ ಒತ್ತುವರಿ ಮಾಡಿರುವ ಜಾಗೆಯನ್ನು ತೆರವು ಮಾಡಿದರು. ಇನ್ನು ಅಲ್ಲಿ ಇರುವ ಖಾಸಗಿ ಶಿಕ್ಷಣ ಸಂಸ್ಥೆಯು ಹಾಗೂ ಕುಸ್ತಿ ಗರಡಿ ಮನೆಯವರು ನ್ಯಾಯಾಲಯಕ್ಕೆ ತಡೆಯಾಜ್ಞೆ ತಂದಿರುವ ಹಿನ್ನಲೆ ಎರಡು ಜಾಗೆಯನ್ನು ತೆರವು ಮಾಡದೆ. ನ್ಯಾಯಾಲಯದಿಂದ ತೀರ್ಪು ಬರುವರೆಗೆ ತೆರವು ಕಾರ್ಯಾಚರಣಿ ಮಾಡಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ತಾಲೂಕ ಪಂಚಾಯತ ಆವರಣದಲ್ಲಿ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದ ಡಿಎಸ್ಎಸ್ ಹಾಗೂ ಹುಲಿಕೊಡಿ ಗ್ರಾಮಸ್ಥರಿಗೆ ತಹಶೀಲ್ದಾರ ಸದಾಶಿವ ಮಕ್ಕೋಜಿ ಮತ್ತು ತಾ,ಪಂ,ಇಒ ಗುರುಶಾಂತ ಬಳ್ಕೊಂಡಗಿ ಅವರು ಸತ್ಯಾಗ್ರಹವನ್ನು ಹಿಂಪಡೆಯಲು ಹೋರಾಟಗಾರರಿಗೆ ತಿಳಿಸಿದರು.
ನಮ್ಮ ಧರಣಿ ಹೋರಾಟಕ್ಕೆ ಸ್ಪಂದಿಸಿದ ತಾಲೂಕ ಅಧಿಕಾರಿಗಳು. ನಮ್ಮ ಬೇಡಿಕೆಯನ್ನು ಇಡೇರಿಸಿದಕ್ಕೆ ಡಿ,ಎಸ್,ಎಸ್ ಸಮಿತಿ ಮತ್ತು ಹುಲಿಕೊಡಿ ಗ್ರಾಮಸ್ಥರ ಪರವಾಗಿ ಡಿಎಸ್ಎಸ್ ಜಿಲ್ಲಾ ಸಂಚಾಲಕ ಪರುಶರಾಮ ಕಾಂಬಳೆ ಧನ್ಯವಾದಗಳನ್ನು ತಿಳಿಸಿದರು.
ಎಸ್.ಕೆ.ಕಾಂಬಳೆ, ಶೇಖರ ಭಜಂತ್ರಿ, ಕಲ್ಲಪ್ಪ ತೇಲಿ,ಪಿ.ಆರ್. ಭಜಂತ್ರಿ, ರಾಮೂ ಮೀಸಿ, ರಾಚಪ್ಪ ಬೀಳಗಿ, ಚನ್ನಪ್ಪ ಜಿಡ್ಡಿಮನಿ, ಬಸವರಾಜ ದೊಡಮನಿ, ಸದಾಶಿವ ಐನಾಪೂರ, ಆನಂದ ನಾಯಿಕ, ಸೋಮು ನ್ಯಾಮಗೌಡ, ಜಗದೀಶ ಮಧರಖಂಡಿ, ಪ್ರವೀಣ ಕಾಂಬಳೆ,ತಿಪ್ಪಣ್ಣ ಜಕ್ಕಣ್ಣವರ ಮತ್ತು ಮಹಿಳೆಯರು ಇದ್ದರು.