ದೇಶಭಕ್ತಿಯನ್ನು ಪ್ರೇರೆಪಿಸುವ ಚಟುವಟಿಕೆಗಳಿಗೆ ಪ್ರೋತ್ಸಾಹ:ಬಸವರಾಜ್ ಬಿಸಲಹಳ್ಳಿ
ಬಳ್ಳಾರಿ :ಜು (17)ರಂದು ನಗರದಲ್ಲಿ ಹಮ್ಮಿಕೊಂಡಿರುವ ಶ್ರೀ ಮಹಾದೇವ ಎಜುಕೇಶನ್ ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್ ಬಳ್ಳಾರಿ ಇವರ ವತಿಯಿಂದ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ವಂಕಿ ಸಣ್ಣ ರುದ್ರಪ್ಪ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಿತು.
ನಂತರ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ಭಾವೈಕ್ಯತೆ ಮೈಗೂಡಿಸಿಕೊಂಡರೆ, ದೇಶ ಸುಭದ್ರ ಮತ್ತು ಸಮೃದ್ಧಿಯಾಗಿ ಇರುತ್ತದೆ ಹಾಗೂ ಇಂತಹ ಕಾರ್ಯಕ್ರಮಗಳಿಂದ ಮಕ್ಕಳ ಮನೋವಿಕಾಸ ಬದಲಾಗುತ್ತದೆ ಎಂದು ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸತೀಶ್ ಎ ಹಿರೇಮಠ್, ಹೇಳಿದರು.
ಸ್ಮಿಯಾಕ್ ಟ್ರಸ್ಟ್ ವತಿಯಿಂದ 76ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ಬಳ್ಳಾರಿಯ ವುಂಕಿ ಸಣ್ಣರುದ್ರ್ಪ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟಿನ ಗೌರವಾಧ್ಯಕ್ಷ ಬಸವರಾಜ್ ಬಿಸಿಲಹಳ್ಳಿಯವರು ಸಮಾಜದ ಬದಲಾವಣೆಗೆ ಇಂದಿನ ವಿದ್ಯಾರ್ಥಿಗಳಿಗೆ ದೇಶಭಕ್ತಿಯನ್ನು ಪ್ರೇರೆಪಿಸುವ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಮ್ಮ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ತಿಂಗಳಲ್ಲಿ ಭಾರತ ಮಾತೆಗೆ ಭಾವೈಕ್ಯತೆಯ ಆರತಿ ದೇಶಭಕ್ತಿ ಸಮೂಹ ಗೀತಗಾಯನ ಮತ್ತು ನೃತ್ಯ ರೂಪಕಗಳ ಪ್ರದರ್ಶನವನ್ನು ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ಇತರ ಜಿಲ್ಲೆಗಳ ಕಲಾವಿದರು/ ವಿದ್ಯಾರ್ಥಿಗಳಿಂದ ಆಯೋಜಿಸಲಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಅಣ್ಣಿ ವಿರುಪಾಕ್ಷಪ್ಪ ರವರು ಸ್ಪರ್ಧೆಗೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.
2022-23 ಸಾಲಿನಲ್ಲಿ ರಾಜ್ಯಕ್ಕೆ 4ನೇ ರಾಂಕ್ ಮತ್ತು ಜಿಲ್ಲೆಗೆ ಪ್ರಥಮ ರಾಂಕ್ ಪಡೆದ ಕು. ಸಹನ ಚೆಲ್ಲೂರು, ಪಿಯುಸಿ ವಾಣಿಜ್ಯ ವಿಭಾಗ, ಬಿಪಿಎಸ್ ಸಿ ಪಿಯು ಕಾಲೇಜು, ಮತ್ತು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಯಿಂದ ಮಾಸ್ಟರ್ಸ ಇನ್ ಲೈಬ್ರರಿ ಸೈನ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ ಕು. ವಸುಧಾ ಬಿ.ಹೆಚ್. ಬಿಸಿಲಹಳ್ಳಿ, ಬಳ್ಳಾರಿಗೆ ಕೀರ್ತಿಯನ್ನು ತಂದಿರುವ ಈ ಪ್ರತಿಭೆಗಳಿಗೆ ಅಭಿನಂದಿಸಲಾಯಿತು.
438 ವಿದ್ಯಾರ್ಥಿಗಳು ಮತ್ತು ಇತರರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಯಿತು. ವಿಜೇತರಿಗೆ ಮುಂದಿನ ತಿಂಗಳಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು.
ವೇದಿಕೆಯಲ್ಲಿ ಶರಣ ಬಸವರಾಜ್, ಡಾ. ವೈ. ಸುಮ, ಭ್ರಮರಾಂಭ, ಮಲ್ಲನಗೌಡ ಕಿತ್ತೂರು, ನಾಗೇಶ್ವರ ರಾವ್ ಹಾಗೂ ಸುಧೀಂದ್ರ ನಾಡಿಗೇರ, ಸುಮಾ ನಾಡಿಗೇರ, ಕೆ ಕೋದಂಡ ರಾಮ, ಜಿ ಹರಿಪ್ರಸಾದ್, ಅನುಪಮ, ಶ್ರೀದೇವಿ ದಂಡಿನ, ವಿಜಯಲಕ್ಷ್ಮಿ, ಗಾಯಕಿ ರೇಣುಕಾ, ನಜೀರ್ ಪಾಷಾ, ಏಕಾಂತ, ಲಕ್ಷ್ಮಣ ಜಾಧವ್, ವೀರಭದ್ರ ಗೌಡ, ನವೀನ್, ಶರ್ಮಸ್ ಅಲಿ, ವಿಜಯಕುಮಾರ್, ನೇತಿ ರಘುರಾಮ ಸ್ಪರ್ಧೆಗಳನ್ನು ನಿರ್ವಹಿಸಿದರು.ದೀಪಕ್ ಪ್ರಾರ್ಥನೆ ಸಲ್ಲಿಸಿದರು. ಚೆಲ್ಲೂರು ನಿರೂಪಿಸಿ ವಂದಿಸಿದರು.