ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅತ್ಯಂತ ಶ್ಲಾಘನೀಯ: ಚನ್ನಪ್ಪನವರ
ರಾಣೇಬೆನ್ನೂರು 04: ಸಮಾಜದಲ್ಲಿ ಸಮಾನತೆ ಕಾಣಬೇಕಾದರೆ ಮಕ್ಕಳು ವಿದ್ಯಾವಂತರಾಗಿ ಸಮಾಜಕ್ಕೆ ತಮ್ಮದೆಯಾದ ಕೂಡುಗೆಯನ್ನು ನೀಡಬೇಕಾಗುತ್ತದೆ ಅಂತಹ ಮಕ್ಕಳು ನಮ್ಮ ನೇಕಾರ ಸಮಾಜದಿಂದ ಹೂರಬರಬೇಕಾಗಿದೆ ಅದಕ್ಕಾಗಿಯೇ ಪಟ್ಟಸಾಲಿ ನೇಕಾರ ನೌಕರರ ಸಂಘವು ದತ್ತಿ ನಿಧಿಯನ್ನು ಸಂಗ್ರಹಿಸಿ ಅದರ ಮೂಲಕ ಮಕ್ಕಳಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವ ಕಾರ್ಯವು ಅತ್ಯಂತ ಶ್ಲಾಘನೀಯವಾಗಿದೆ ಎಂದು ಸವದತ್ತಿ ನಗರಸಭೆ ಮುಖ್ಯಾಧಿಕಾರಿ ಪಿ.ಎಂ.ಚನ್ನಪ್ಪನವರ ಹೇಳಿದರು.
ಅವರು ರವಿವಾರ ಇಲ್ಲಿನ ಸಾಲೇಶ್ವರ ಕಲ್ಯಾಣಮಂಟಪದಲ್ಲಿ ಪಟ್ಟಸಾಲಿ(ನೇಕಾರ) ಸಮಾಜದ ನೌಕರರ ಸಂಘವು ಆಯೋಜಿಸಿದ್ದ ವಾರ್ಷಿಕ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳ ಪ್ರತಿಬಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೂಂಡು ಮಾತನಾಡಿದರು. ಯಾವುದೇ ಸಮಾಜವು ತಮ್ಮ ಮಕ್ಕಳ ಭವಿಷ್ಯತ್ತನ್ನು ಉಜ್ವಲಗೂಳಿಸಲು ಸದಾ ಕಾಲ ಚಿಂತಿಸುತ್ತದೆ ಅಂತೆಯೇ ಪಟ್ಟ ಸಾಲಿ ಸಮಾಜವು ಸಹ ಮಕ್ಕಳಲ್ಲಿ ಪ್ರಗತಿ ಕಂಡು ಸಂತೋಷಪಡುವುದರ ಜೂತೆಗೆ ಸಮಾಜದ ಅಭಿವೃದ್ದಿಯನ್ನು ಬಯಸುತ್ತದೆ ಸಾಧನೆ ಮಾಡಲು ಮೂದಲು ಮನಸ್ಸುಬೇಕು ಮನಸ್ಸಿದ್ದರೆ ಮಾರ್ಗ ಇದ್ದೆ ಇದೆ ಎನ್ನುವುದಕ್ಕೆ ಈ ಕಾರ್ಯಕ್ರಮವು ಸಾಕ್ಷಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲೆಕ್ಕಪರಿಶೂದಕರಾದ ಗೋಪಾಲ ಗುತ್ತಲ ಅವರು ಕಳೆದ 8 ವರ್ಷಗಳಿಂದ ಮಕ್ಕಳ ಪ್ರತಿಬೆಗೆ ಪ್ರೋತ್ಸಾಹಿಸುವುದಕ್ಕಾಗಿಯೇ ಧಾನಿಗಳಿಂದ ಹಣ ಸಂಗ್ರಹಿಸಿ ದತ್ತಿ ಸ್ಥಾಪಿಸಲಾಗಿದೆ. ಪಾಲಕರು ಮಕ್ಕಳಿಗೆ ಈ ಕುರಿತು ಮಾಹಿತಿ ನೀಡಿ ಸಹಾಯ ಪಡೆದು ಸಮಾಜದಲ್ಲಿ ಮತ್ತಷ್ಟು ಸಾಧನೆ ಮಾಡಲು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ ಗುತ್ತಲ ಅವರು ಪ್ರತಿ ವರ್ಷವು ನಡೆಯುವ ಇಂತಹ ಅಪರೋಪದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಅಂದಾಗ ಮಾತ್ರ ಕಾರ್ಯಕ್ರಮ ಅಯೋಜಕರಿಗೆ ಸ್ಪೋರ್ತಿ ಬರಲು ಸಾಧ್ಯವಾಗುತ್ತದೆ ಎಂದರು. ಡಾಽಽ ಹೆಚ್.ಕೆ. ಕದರಮಂಡಲಗಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ನಗರದ ಪ್ರೆಸ್ಸ್ಗ್ರೀನ್ಅಗ್ರಿ ಮಾಲೀಕರಾದ ಕರಬಸಪ್ಪ ಜಾಡರ, ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ ಡಾಽಽ ಬಸವರಾಜ ಕೇಲಗಾರ, ನಗರಸಭೆ ನಿವೃತ್ತ ನೌಕರರಾದ ಶಿವಪ್ಪ ವಿಭೂತಿ, ಲಕ್ಷ್ಮಣ ಸಾಲಿ, ದೇವೇಂದ್ರ್ಪ ಎನ್, ಸೇರಿದಂತೆ ಸಮಾಜದ ಮತ್ತಿತರ ಗಣ್ಯರು ಮುಖಂಡರು ಪಾಲ್ಗೂಂಡಿದ್ದರು. ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೂ.ಡಾಽ. ಹೆಚ್.ರಾಜೇಶ್ವರಿ, ಬಿ.ಎಸ್.ಎನ್.ಎಲ್ ಉದ್ಯೋಗಿ ಎಲ್.ಡಿ.ದುರ್ಗದ ಕಾರ್ಯದರ್ಶಿ ರಾಮಣ್ಣ ವಾಲಿ ಮತ್ತು ಎಸ್.ಎಸ್.ಎಲ್.ಸಿ, ಪಿಯುಸಿ ಸಾಧಕ ನೂರಾರು ವಿಧ್ಯಾರ್ಥಿಗಳನ್ನು ನಗದು ಮೋತ್ತ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಮಂಜುಳಾ ಶಿವಮೂಗ್ಗಿ ಪ್ರಾರ್ಥಿಸಿದರು, ಶ್ರೀರಾಮ ಭಂಡಾರಿ ಸ್ವಾಗತಿಸಿದರು, ಶಿಕ್ಷಕ ತಿಪ್ಪೇಸ್ವಾಮಿ ಹಳ್ಳದ ದಂಡಿ ನಿರೂಪಿಸಿ ವಂದಿಸಿದರು.