ಸಮಾಜ ಸೇವಕರನ್ನು ಪ್ರೋತ್ಸಾಹಿಸಿ: ಶಾಸಕ ನಾಡಗೌಡ
ತಾಳಿಕೋಟಿ 25: ತಾವು ಮಾಡಿದ ಕಾರ್ಯಗಳಿಗೆ ಯಾವುದೇ ರೀತಿಯ ಪ್ರಸಾರವನ್ನು ಬಯಸದೆ ನಿಸ್ವಾರ್ಥ ಮನೋಭಾವದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿರುವ ಮಹನೀರನ್ನು ಗುರುತಿಸಿ ಅವರನ್ನು ಗೌರವಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ಮುದ್ದೇಬಿಹಾಳ ಶಾಸಕ ಸಿ .ಎಸ್. ನಾಡಗೌಡ ಅಪ್ಪಾಜಿ ಹೇಳಿದರು.
ತಾಲೂಕಿನ ಹಂದ್ರಾಳ ಗ್ರಾಮದ ಸೋಮೇಶ್ವರ ದೇವಸ್ಥಾನದ ಪುನರ್ಜೀವನ ಗೋಪುರ ಕಳಸಾರೋಹಣ ಹಾಗೂ ಸರ್ಕಾರಿ ನೂತನ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ವಿಶ್ವನಾಥ ಬಿರಾದರ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದರು.
ಹಿಂಜನಿಯರ ವಿಶ್ವನಾಥ ಬಿರಾದಾರ ಅವರು ತಮ್ಮ ಹುಟ್ಟೂರಿನ ಕುರಿತು ಇಟ್ಟುಕೊಂಡಿರುವ ಪ್ರೀತಿ ಹಾಗೂ ಅಭಿಮಾನದಿಂದಾಗಿಯೇ ಇಷ್ಟೆಲ್ಲಾ ಸೇವೆಯನ್ನು ಮಾಡುತ್ತಿದ್ದಾರೆ ಅವರೆಂದೂ ಪ್ರಚಾರವನ್ನು ಬಯಸಿದ ವ್ಯಕ್ತಿಯಲ್ಲ ನಾನು ಬಹಳ ದಿನಗಳಿಂದ ಅವರ ಈ ಸೇವೆಯನ್ನು ನೋಡುತ್ತಿದ್ದೇನೆ ನಿರ್ಮಲ ಮನಸ್ಸಿನಿಂದ ಮಾಡಿದ ಸೇವೆಯೇ ದೇವರಿಗೆ ಸಲ್ಲುತ್ತದೆ ಭಗವಂತ ಅವರಿಗೆ ಇನ್ನಷ್ಟು ಸೇವೆ ಮಾಡುವ ಶಕ್ತಿ ನೀಡಲಿ ಎಂದು ಹಾರೈಸಿದರು.
ಜಾತ್ರಾ ಸಮಿತಿ ವತಿಯಿಂದ ಅಭಿಯಂತರ ವಿಶ್ವನಾಥ್ ಬಿರಾದಾರ ದಂಪತಿಗಳನ್ನು ಪೂಜ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಮಯದಲ್ಲಿ ಪಡೇಕನೂರದ ಪರಮಪೂಜ್ಯ ಮಲ್ಲಿಕಾರ್ಜುನ ಶ್ರೀಗಳು ಗಣ್ಯರಾದ ಸಂಗನಗೌಡ ಪಾಟೀಲ ನಡಹಳ್ಳಿ. ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ .ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ. ಡಾ. ಬಸವರಾಜ ಅಸ್ಕಿ ಕೊಣ್ಣೂರ. ಶ್ರೀಕಾಂತ್ ಬಿರಾದಾರ ಸಿ.ಬಿ .ಅಸ್ಕಿ. ವಿಜಯಲಕ್ಷ್ಮಿ ಬಿರಾದಾರ ಎನ್.ಎಸ್ .ರಾಮಗಿರಿ ಮಠ. ಎಸ್. ಎಸ್ .ಬೀರಲ್ದಿನ್ನಿ ಇದ್ದರು.