ರಾಷ್ಟ್ರೀಯ

ದಕ್ಷಿಣ ಕಾಶ್ಮೀರದಲ್ಲಿ ಉಗ್ರರು -ಭದ್ರತಾ ಪಡೆನಡುವೆ ಗುಂಡಿನ ಕಾರ್ಯಾಚರಣೆ

ದಕ್ಷಿಣ ಕಾಶ್ಮೀರದಲ್ಲಿ ಉಗ್ರರು -ಭದ್ರತಾ ಪಡೆನಡುವೆ  ಗುಂಡಿನ  ಕಾರ್ಯಾಚರಣೆ
ಪ್ರಾತಿನಿಧ್ಯ ಉದ್ದೇಶಕ್ಕಾಗಿ ಮಾತ್ರ ಚಿತ್ರ

ಶ್ರೀನಗರ, ಆಗಸ್ಟ್ 9 :ದಕ್ಷಿಣ ಕಾಶ್ಮೀರ ಜಿಲ್ಲೆಯ ಕುಲ್ಗಂನಲ್ಲಿ ಭಾನುವಾರ ಶೋಧನಾ ಕಾರ್ಯ ನಡೆಯುವಾಗ  (ಸಿಎಎಸ್ಒ)  ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಸೇನಾ  ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ), ರಾಷ್ಟ್ರೀಯ ರೈಫಲ್ಸ್ (ಆರ್‌ಆರ್) ಮತ್ತು ಸಿಆರ್‌ಪಿಎಫ್ ಪಡೆಗಳು ಉಗ್ರರ ಉಪಸ್ಥಿತಿಯ ಬಗ್ಗೆ ಸುಳಿವು ದೊರೆತ ಕೂಡಲೆ ಜಂಟಿ ಕಾರ್ಯಾಚರಣೆ ನಡೆಸಿವೆ ಎಂದು  ಸೇನಾ ವಕ್ತಾರರು ಹೇಳಿದ್ದಾರೆ. 

ಎಲ್ಲಾ ನಿರ್ಗಮನ ದ್ವಾರಗಳನ್ನು ಮುಚ್ಚಿ  ಭದ್ರತಾ ಪಡೆಗಳು ನಿರ್ದಿಷ್ಟ ಪ್ರದೇಶದತ್ತ ಸಾಗುತ್ತಿರುವಾಗ,  ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಮನಬಂದಂತೆ  ಗುಂಡು ಹಾರಿಸಿದ್ದಾರೆ ಇದಕ್ಕೆ  ಪ್ರತಿಯಾಗಿ ಭದ್ರತಾ ಪಡೆಗಳು ಪ್ರತಿ ಕಾರ್ಯಚರಣೆ ನಡೆಸಿ ಸೂಕ್ತ  ಪ್ರತೀಕಾರ ತೀರಿಸಿದ್ದಾರೆ ಎಂದು  ಅವರು ಹೇಳಿದರು.

 ಇಬ್ಬರು ಮೂರು ಉಗ್ರರನ್ನು ಈ ಪ್ರದೇಶದಲ್ಲಿ ಅಡಗಿಕೊಂಡಿದ್ದಾರೆ ಈ ನಡುವೆ  ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ  ತೊಂದರೆಯಾಗದಂತೆ ಹೆಚ್ಚುವರಿ ಭದ್ರತಾ ಪಡೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ಪಕ್ಕದ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

ಸುದ್ದಿ ಓದಿ