ಬೈಲಹೊಂಗಲ

ದಿ.10 ರಂದು ಖಾಲಿ ಗಾಡಾ ಓಡಿಸುವ ಭಾರಿ ಜಂಗೀ ಶರತ್ತು

ದಿ.10 ರಂದು ಖಾಲಿ ಗಾಡಾ ಓಡಿಸುವ ಭಾರಿ ಜಂಗೀ ಶರತ್ತು

ಬೈಲಹೊಂಗಲ 09: ಪಟ್ಟಣದ ಶ್ರೀ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಶ್ರೀ ಮರಡಿ ಬಸವೇಶ್ವರ ತರುಣ ಸಂಘದ ವತಿಯಿಂದ ಶುಕ್ರವಾರ ದಿ.10 ರಂದು ಮುರಕೀಭಾವಿ ರಸ್ತೆಯ ಸಾಧುನವರ ಎಸ್ಟೆಟ ಹತ್ತಿರ ಬೆಳಿಗ್ಗೆ 9 ಗಂಟೆಗೆ ಜೋಡಿ ಎತ್ತುಗಳಿಂದ ಖಾಲಿ ಗಾಡಾ ಓಡಿಸುವ ಭಾರಿ ಜಂಗೀ ಶರತ್ತು ಹಮ್ಮಿಕೊಳ್ಳಲಾಗಿದೆ.  

ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮಿಜಿ , ನಯಾನಗರದ ಅಭಿನವ ಸಿದ್ದಲಿಂಗ ಸ್ವಾಮಿಜಿ ಸಾನಿಧ್ಯ ವಹಿಸುವರು, ಮಾಜಿ ಶಾಸಕ ಜಗದೀಶ ಮೆಟಗುಡ್ಡ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಶಾಸಕ ಮಹಾಂತೇಶ ಕೌಜಲಗಿ, ಚಿತ್ರನಟ ಶಿವರಂಜನ ಬೋಳನ್ನವರ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮನ್ನವರ, ಕಿತ್ತೂರು ರಾಣಿ ಚನ್ನಮ್ಮ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಡಾ.ವ್ಹಿ.ಎಸ್‌.ಸಾಧುನವರ,ಪತ್ರಕರ್ತ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ,  ಡಿವೈಎಸ್‌ಪಿ ಶಿವಾನಂದ ಕಟಗಿ, ಪ್ರಗತಿಪರ ರೈತರಾದ ಶಿವಾನಂದ ಹೊಸೂರ, ಈಶ್ವರ ಕೊಪ್ಪದ ಆಗಮಿಸುವರು. 

ಪ್ರಥಮ ಬಹುಮಾನ ರೂ.30.0001, ದ್ವೀತಿಯ ಬಹುಮಾನ 25.0001, ತೃತಿಯ ಬಹುಮಾನ 15.001  ಸೇರಿದಂತೆ ಇನ್ನು ಅನೇಕ ತರಹದ ಬಹುಮಾನಗಳಿವೆ. ಹೆಚ್ಚಿನ ಮಾಹಿತಿಗಾಗಿ ಸುಭಾಸ ತುರಮರಿ 9880261101, ಬಸವರಾಜ ದೊಡಮನಿ 9844578078 ಸಂಪರ್ಕಿಸಲು ಕೋರಲಾಗಿದೆ. 


ಸುದ್ದಿ ಓದಿ