ಬೈಲಹೊಂಗಲ

ಉದ್ಯೋಗ ಖಾತ್ರಿಯಿದ್ದು ಕೂಲಿಕಾರ್ಮಿಕರು ವಲಸೆ ಹೋಗಬೇಕಿಲ್ಲ: ಪಿಡಿಓ ಆಶಾ

ಉದ್ಯೋಗ ಖಾತ್ರಿಯಿದ್ದು ಕೂಲಿಕಾರ್ಮಿಕರು ವಲಸೆ ಹೋಗಬೇಕಿಲ್ಲ: ಪಿಡಿಓ ಆಶಾ

ಬೈಲಹೊಂಗಲ 23: ಕೂಲಿಕಾರ್ಮಿಕರು ಬೇರೆ-ಬೇರೆ ನಗರಗಳಿಗೆ ವಲಸೆ ಹೋಗದೆ ಇದ್ದೂರಲ್ಲೆ ಉದ್ಯೋಗ ಖಾತ್ರಿ ಕೆಲಸ ಇದೆ. ಎಲ್ಲರೂ ಕೆಲಸಕ್ಕೆ ಬನ್ನಿ ನಿಗದಿತ ಸಮಯದಲ್ಲಿ ಕೂಲಿ ಪಡೆದುಕೊಳ್ಳಬೇಕೆಂದು ಗ್ರಾ.ಪಂ.ಪಿಡಿಓ ಆಶಾ ಆರ್ ಕರೆ ನೀಡಿದರು.  

ಸಮೀಪದ ಹೊಳಿಹೊಸೂರ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕೂಲಿಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಉದ್ಯೋಗ ಖಾತ್ರಿ ದುಡಿಮೆಯ ಖಾತ್ರಿ ಅಭಿಯಾನದಲ್ಲಿ ಅವರು ಮಾತನಾಡಿದರು.   

ನಿಮ್ಮ ಮಕ್ಕಳನ್ನು ಸಂರಕ್ಷಣೆ ಮಾಡಲು ನಮ್ಮ ಗ್ರಾಪಂ ವತಿಯಿಂದ ಕೂಸಿನ ಮನೆ ಕೇಂದ್ರಗಳನ್ನು ಪ್ರಾರಂಭಿಸುತ್ತಿದ್ದು, ಯಾವುದೇ ತೊಂದರೆ ಇಲ್ಲದೇ ಮಕ್ಕಳನ್ನು ಬಿಟ್ಟು ಸಹ ಧೈರ್ಯವಾಗಿ ಉದ್ಯೋಗ ಖಾತ್ರಿ ಕೆಲಸ ಮಾಡಬಹುದು. ಪ್ರತಿ ಕುಟಂಬಕ್ಕೆ 100 ದಿವಸ್ ಕೆಲಸ ಸಿಗುತ್ತದೆ. ಇದರಿಂದ 31,600 ರೂ.ಕೂಲಿ ಪಡೆಯಬಹುದು ಇದರಲ್ಲಿ ನಿಮ್ಮ ಕುಟುಂಬ ನಿರ್ವಹಣೆಯನ್ನು ಮಾಡಿಕೊಳ್ಳಬಹುದು. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಗ್ರಾಮದ ನಿವಾಸಿಗಳು ಹಾಗೂ ನರೇಗಾ ಕೂಲಿಕಾರ್ಮಿಕರು ಮತದಾನವನ್ನು ಮಾಡಬೇಕು ಎಂದರು.  

ಇದೇ ವೇಳೆ ಗ್ರಾಮದ ಮನೆ ಮನೆಗಳಿಗೆ ತೆರಳಿ ಉದ್ಯೋಗ ಖಾತ್ರಿ ಕೆಲಸಕ್ಕೆ ಬನ್ನಿ ಎಂದು ತಿಳಿಸುವುದರ ಜೊತೆಗೆ ಮತದಾನ ಜಾಗೃತಿ ಮಾಡಿದರು. ಗ್ರಾಮದ ಶತಾಯುಷಿಗಳಿಗೆ ಮತದಾನ ಮಾಡುವುದರ ಬಗ್ಗೆ ತಿಳುವಳಿಕೆ ನೀಡಿದರು.  

ತಾಪಂ ಐಇಸಿ ಸಂಯೋಜಕ ಎಸ್‌.ವ್ಹಿ.ಹಿರೇಮಠ ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.  

ಆಡಳಿತ ಸಹಾಯಕಿ ಭಾರತಿ ದೊಡಗೌಡರ ಮಾತನಾಡಿ, ಗ್ರಾಮದಲ್ಲಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಪ್ರಮಾಣ ಶೇ 42.77ರಷ್ಟು  ಕಡಿಮೆ ಇದೆ. ಮಹಿಳೆಯರು ಪ್ರಸ್ತುತ ಎಲ್ಲಾ ರಂಗದಲ್ಲಿ ಮುಂದೆ ಬರುತ್ತಿದ್ದು, ಈ ನರೇಗಾ ಕೆಲಸಕ್ಕೆ ಬರುವಂತಹ ಮಹಿಳೆಯರು ಗ್ರಾಪಂಗೆ ನೇರವಾಗಿ ಭೇಟಿ ನೀಡಿ ನಮೊನೆ 06 ರಲ್ಲಿ ಅರ್ಜಿ ಕೊಡಿ ಅದರ ಮೂಲಕ ನಿಮಗೆ 15 ದಿನಗಳ ಒಳಗೆ ಕೆಲಸವನ್ನು ನೀಡಲಾಗುವುದು ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ಗ್ರಾಪಂ ಸಿಬ್ಬಂದಿ ಧರ್ಮರಾಜ ನಾಯ್ಕರ, ರುದ್ರಮ್ಮಾ ದೊಡವಾಡ, ನಬೀಸಾಬ ಹುಲಮನಿ, ಬಾಳೇಶ ಕುಂಬಾರ ಹಾಗೂ ನರೇಗಾ ಕೂಲಿಕಾರರು ಹಾಜರಿದ್ದರು. 


ಸುದ್ದಿ ಓದಿ