ನಮ್ಮ ಪ್ರಾಚೀನ ಕ್ರೀಡೆಗಳಿಗೆ ಒತ್ತು: ಕೇಂದ್ರ ಸಚಿವ ಜೋಶಿ
ಶಿಗ್ಗಾವಿ 25: ನಮ್ಮ ಪ್ರಾಚೀನ ಕ್ರೀಡೆಗಳಿಗೆ ಒತ್ತು ನೀಡುವ ಮೂಲಕ ನಮ್ಮ ಪುರಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಳ್ಳಬೇಕಾದ ಪರಿಸ್ಥಿತಿ ಬಂದೊಂದಿಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ನಡೆದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಂಸದ ಸಾಂಸ್ಕೃತಿಕ ಕಾರ್ಯಕ್ರಮದಡಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ಶಿಗ್ಗಾವಿ-ಸವಣೂರ ಕ್ಷೇತ್ರದ ಯುವಕರಿಗೆ ಏರಿ್ಡಸಿದ್ದ ಕಬಡ್ಡಿ ಪಂದ್ಯಾವಳಿಯನ್ನು ವೀಕ್ಷಿಸಿ ಸ್ಪರ್ಧಾಳುಗಳಿಗೆ ಹಸ್ತಲಾಘವ ಮಾಡಿ ಮಾತನಾಡಿದ ಅವರು ಗ್ರಾಮೀಣ ಕ್ರೀಡೆ ಆಗಿರುವ ಕಬಡ್ಡಿ ನೂರಾರು ವರ್ಷಗಳ ಪುರಾತನ ಕ್ರೀಡೆಯಾಗಿದ್ದು ಇದನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ವಹಿಸಿಕೊಂಡಿದ್ದರ ಫಲವಾಗಿ ಆಯಾ ಸಂಸದರ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಗ್ರಾಮೀಣ ಯುವಕರಲ್ಲಿನ ಪ್ರತಿಭೆ ಅನಾವರಣ, ದೈಹಿಕ ಸಾಮಾರ್ಥ್ಯ ವೃದ್ಧಿಗೊಳಿಸಲು ಪೂರಕವಾದ ಗ್ರಾಮೀಣರ ಕ್ರೀಡೆಗಳಿಗೆ ಉತ್ತೇಜನ ನೀಡಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕ್ರೀಡೆಯನ್ನು ಆಯೋಜಿಸಿಲಾಗಿದೆ ಇದಕ್ಕೆ ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ನೀಡಿದವರು ಹಾವೇರಿ ಅಮೆಚೂರ್ ಕಬಡ್ಡಿ ಅಸೋಸಿಯೇಷನದವರು ಎಂದರು.
76 ತಂಡಗಳು ಕಬಡ್ಡಿ ಪಂದ್ಯಾವಳಿಗೆ ಭಾಗವಹಿಸಿದ್ದವು, ಪ್ರತಿಯೊಂದು ತಂಡಕ್ಕೂ ಟೀಶರ್ಟ ಉಚಿತ, ಊಟದ ವ್ಯವಸ್ಥೆ ಹಾಗೂ ಪರಾಭವ ಗೊಂಡು ಪ್ರತಿ ತಂಡಕ್ಕೂ 2 ಸಾವಿರ ಪ್ರೋತ್ಸಾಹ ಧನ ಮತ್ತು ಪ್ರಮಾಣಪತ್ರ ನೀಡಿದ್ದು ವಿಶೇಷ.
ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಮುಖಂಡ ಶ್ರೀಕಾಂತ ದುಂಡಿಗೌಡ್ರ, ಯುವ ಮೋರ್ಚಾ ರಾಜ್ಯ ಪದಾಧಿಕಾರಿ ನರಹರಿ ಕಟ್ಟಿ, ಪುರಸಭೆ ಸದಸ್ಯ ರಮೇಶ ವನಹಳ್ಳಿ, ತಿಪ್ಪಣ್ಣ ಸಾತಣ್ಣನವರ, ದೇವಣ್ಣಾ ಚಾಕಲಬ್ಬಿ, ಡಾ.ಮಲ್ಲೇಶಪ್ಪ ಹರಿಜನ, ಹನುಮಂತಪ್ಪ ಮಾದರ, ನವೀನ ಸಾಸನೂರ, ವಿಶ್ವನಾಥ ಗಾಣಿಗೇರ, ಪ್ರತೀಕ ಕೊಳೇಕರ, ಸಚೀನ ಮಡಿವಾಳರ, ಚೇತನ ಕಲಾಲ, ಸೇರಿದಂತೆ ಇತರರಿದ್ದರು.