ರಾಷ್ಟ್ರೀಯ

ಇಮ್ಯಾನುಯೆಲ್ಲೆ ಚಾರ್ಪೆಂಟಿಯರ್ , ಜೆನ್ನಿಫರ್ ಗೆ ರಾಸಾಯನ ವಿಜ್ಞಾನ ಕ್ಷೇತ್ರದ ನೊಬೆಲ್ ಪ್ರಶಸ್ತಿ

ಇಮ್ಯಾನುಯೆಲ್ಲೆ ಚಾರ್ಪೆಂಟಿಯರ್ , ಜೆನ್ನಿಫರ್ ಗೆ ರಾಸಾಯನ ವಿಜ್ಞಾನ ಕ್ಷೇತ್ರದ ನೊಬೆಲ್ ಪ್ರಶಸ್ತಿ

ಒಸ್ಲೋ , ಅಕ್ಟೋಬರ್ 7: ಈಗಾಗಲೇ ಅನೇಕ ವಿಷಯಗಳಲ್ಲಿ ನೋಬೆಲ್ ಪ್ರಶಸ್ತಿಗಳಲ್ಲಿ ಪ್ರಶಸ್ತಿ ಪಡೆದಂತ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದ ನೋಬೆಲ್ ಸಮಿತಿ, ಇದೀಗ 2020ನೇ ಸಾಲಿನ ರಾಸಾಯನ ವಿಜ್ಞಾನ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಗಳಿಸಿರುವಂತ ಪಟ್ಟಿಯನ್ನು ಘೋಷಿಸಿದೆ. 

2020ರ ಸಾಲಿನ ರಸಾಯನ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿಯನ್ನು ಇಮ್ಯಾನುಯೆಲ್ಲೆ ಚಾರ್ಪೆಂಟಿಯರ್ ಮತ್ತು ಜೆನ್ನಿಫರ್ ಎ. ಡೌಡ್ನಾ ಅವರಿಗೆ ಜಿನೋಮ್ ಎಡಿಟಿಂಗ್ ವಿಧಾನದ ಅಭಿವೃದ್ಧಿಗಾಗಿ ನೀಡಲಾಗಿರುವುದಾಗಿ ಘೋಷಿಸಿದೆ. 

ಈ ಕುರಿತಂತೆ ನೋಬೆಲ್ ಪ್ರಶಸ್ತಿ ಆಯ್ಕೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದು, 2020ರ ರಸಾಯನ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿಗೆ ಇಮ್ಯಾನುಯೆಲ್ಲೆ ಚಾರ್ಪೆಂಟಿಯರ್ ಮತ್ತು ಜೆನ್ನಿಫರ್ ಎ. ಡೌಡ್ನಾ ಅವರು ಆಯ್ಕೆಯಾಗಿದ್ದಾರೆ  ಎಂಬುದಾಗಿ ತಿಳಿಸಿದೆ. 

ಸುದ್ದಿ ಓದಿ