ಮುದ್ದೆಬಿಹಾಲ್

ಗ್ರಾಮ ಪಂಚಾಯಿತಿ ಪಿಡಿಓ ನೋಡಲ್ ಅಧಿಕಾರಿಗಳ ತುರ್ತು ಸಭೆ

ಗ್ರಾಮ ಪಂಚಾಯಿತಿ ಪಿಡಿಓ ನೋಡಲ್ ಅಧಿಕಾರಿಗಳ ತುರ್ತು ಸಭೆ

ಮುದ್ದೇಬಿಹಾಳ 29: ಇಲ್ಲಿಯವರೆಗೆ ಯಾವೂದೇ ಸರಕಾರ ವಸತಿ ಯೋಜನೆ ಸೌಲಭ್ಯ ಪಡೆದುಕೊಳ್ಳದೇ ಇರುವ ನಿಜವಾದ ಕಡು ಬಡವರಿಗೆ ನಿಯಮಾನುಸಾರ ಅರ್ಹ ಫಲಾನಿಭವಿಗಳನ್ನು ಆಯ್ಕೆ ಮಾಡಿ ಬಸವ ವಸತಿ ಯೋಜನೆ ಯಶಸ್ವಿಗೊಳಿಸಲು ಆಯಾ ಗ್ರಾಮ ಪಂಚಾಯಿತಿ ಸಂಬಂಧ ಪಟ್ಟ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಒಂದು ವೇಳೆ ಲೋಪಗಳು ಅವೈಜ್ಞಾನಕ ಕಂಡು ಬಂದರೆ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಶಾಸಕ ಸಿ ಎಸ್ ನಾಡಗೌಡ (ಅಪ್ಪಾಜಿ) ಹೇಳಿದರು.  

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಜೆ ನಡೆದ ಬಸವ ವಸತಿ ಯೋಜನೆಯ ಫಲಾನುಭವಿ ಆಯ್ಕೆ  ಕುರಿತು ಮತಕ್ಷೇತ್ರದ ಗ್ರಾಮಗಳ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ನೋಡಲ್ ಅಧಿಕಾರಿಗಳ  ತುರ್ತು ಸಭೆ ನಡೆಸಿ ಅವರು ಮಾತನಾಡಿದರು. 

ಈಗಾಗಲೇ  ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಎಲ್ಲ ಗ್ಯಾರಂಟಿಗಳನ್ನ ಜಾರಿಗೊಳಿಸುವ ಮೂಲಕ ಉತ್ತಮ ಆಡಳಿತ ನಡೆಸುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಬಡವರಿಗೆ ವಸತಿ ಯೋಜನೆ ನೀಡುವ ಮೂಲಕ ಮತ್ತೊಂದು ಅಭಿವೃದ್ಧಿಗೆ ಮುನ್ನುಡಿ ಬರೆಯಲು ಮುಂದಾಗಿದೆ. 

ಸಧ್ಯ ಇಂಗಳಗೇರಿ, ಗುಡ್ನಾಳ, ಅಡವಿಹುಲಗಬಾಳ ಈ ಮೂರು ಗ್ರಾಮಗಳಲ್ಲಿ  ಫಲಾನುಭವಿಗಳ ಅಯ್ಕೆ ಮಾಡಲು ಸಾದ್ಯವಾಗಿಲ್ಲ ಎಂದರೆ ಅಲ್ಲಿ ತೊಂದರೆ ಇದೇ ಎಂದರ್ಥ ಕಾರಣ ಆ ಮೂರು ಪಂಚಾಯಿತಿಗಳ ಅಧಿಕಾರಿಗಳು ಯಾರು ತೊಂದರೆ ಕೊಡುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ ಹಾಗಾಗಿ ಪೋಲಿಸ್ ಬಂದೋಭಸ್ತ ಪಡೆದು ಗ್ರಾಮ ಸಭೆ ನಡೆಸಿ ನಿಜವಾದ ಕಡು ಬಡವರಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. 

ಈ ಹಿಂದೆ ಸಣ್ಣ ವಯಸ್ಸಿನವರಿಗೆ  ಈಗಾಗಲೆ ಮನೆ ವಸತಿ ಯೋಜನೆ ಪಡೆದವರಿಗೆ ಆಯ್ಕೆ ಮಾಡಲಾಗಿದೆ ಎಂಬ ದೂರುಗಳು ಕೇಳಿಬಂದಿವೆ ಅಂತವರನ್ನು ಕೈಬಿಟ್ಟು ನಿರ್ಗತಿಕರು ದುಡಿಯಲು ಶಕ್ತಿಯಿಲ್ಲದವರು, ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿ ಜೊತೆಗೆ ಈಹಿಂದೆ ವಸತಿ ಯೋಜನೆ ಸೌಲಭ್ಯ ಪಡೆದುಕೊಂಡವರನ್ನು ಯಾವೂದೇ ಮುಲಾಜಿಲ್ಲದೆ ಅವರ ಹೆಸರುಗಳನ್ನು ತೆಗೆದು ನಿಜವಾದ ಬಡವರಿಗೆ ಸೇರೆ​‍್ಡ ಮಾಡುವ ಮೂಲಕ ಆಯ್ಕೆ ಪ್ರಕ್ರೀಯೆ ಮಾಡಬೇಕು. 

ಮತಕ್ಷೇತ್ರದ ಬಹುತೇಕ ಎಲ್ಲ ಗ್ರಾಮಗಳಲ್ಲಿ ಸಾರ್ವಜನಿಕ ಸ್ಥಳಗಳನ್ನು ಗೌಂಟಾನು ಜಾಗೆಗಳನ್ನು ಒಬ್ಬೋಬ್ಬ ಖಾಸಗಿ ವಯಕ್ತಿಕ ವ್ಯಕ್ತಿಗೆ ಉತಾರ ಕೊಟ್ಟಿರುವ ಮಾಹಿತಿಗಳು ಕೇಳಿ ಬಂದಿವೆ ಒಂದುವೇಳೆ ಹಾಗೇನಾದರೂ ಕಂಡುಬಂದರೆ ಅಂತವರ ಕಟ್ಟಡಗಳನ್ಬು ಬುಲ್ಡೋಜರ್ ಹಚ್ಚಿ ತೆರವುಗೊಳಿಸಬೇಕಾಗುತ್ತದೆ. 

ಇಡಿ ತಾಲೂಕಿನಲ್ಲಿಯೆ ತಂಗಡಗಿ ಗ್ರಾಮ ಪಂಚಾಯಿತಿಯಲ್ಲಿ ಯಾವೂದೇ ಲೋಪವಿಲ್ಲದೇ ಚೀಟಿ ಎತ್ತಿ ಲಾಟರಿ ಮೂಲಕ ಪಾರದರ್ಶಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದ ಪಿಡಿಓ ಪಿ ಎಸ್ ಕಸನಕ್ಕಿಯವರ ಕಾರ್ಯವನ್ನು ಶ್ಲಾಘಸಿದರಲ್ಲದೇ ಧನ್ಯವಾದಗಳು ತಿಳಿಸಿದರು. ಇನ್ನೋಮ್ಮೆ ಗ್ರಾಮಗಳಲ್ಲಿ ಡಂಗುರು ಸಾರಿ ಗ್ರಾಮ ಸಭೆ ನಡೆಸಲು ಮೂಕಿಹಾಳ ಪಿಡಿಓ ಶಂಕರ ತಳವಾರ ಅವರಿಗೆ ಸೂಚಿಸಿದರು. 

ಮತಕ್ಷೇತ್ರದ ಒಟ್ಟು 31 ಗ್ರಾಮ ಪಂಚಾಯಿತಿಗಳಲ್ಲಿ 6 ಗ್ರಾಮ ಪಂಚಾಯಿತಿಗಳಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ತಿವೃ ವಿರೋಧ ಹಾಗೂ ತೊಂದರೆಯಾಗುತ್ತಿರುವ  ಮಾಹಿತಿ ತಿಳಿದಿದೆ ಈ ನಿಟ್ಟಿನಲ್ಲಿ ಬಸವ ವಸತಿ ಯೋಜನೆ ಪಾರದರ್ಶಕ ಹಾಗೂ ಲೋಪವಿಲ್ಲದಂತೆ ಆಯ್ಕೆ ಮಾಡಲು ಮುಂಬರುವ ಡಿ.9ರಂದು ಎಲ್ಲ ಪಿಡಿಓ ಅಧಿಕಾರಿಗಳ ಫಲಾನುಭವಿಗಳ ಸಭೇ ನಡೆಸಿ ಅಂತಿಮ ಪಟ್ಟಿ ತಯಾರಿಸಿ ಸರಕಾರಕ್ಕೆ ಕಳುಹಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಅಷ್ಟರಲ್ಲಿಯೇ ಸಂಪೂರ್ಣ ವರದಿ ಸಲ್ಲಿಕೆ ಸಿದ್ಧಪಡಿಸಿಕೊಳ್ಳಬೇಕು ಎಂದು ಸೂಚಿಸಿದರು. 

ಒಂದು ವೇಳೆ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಲೋಪದೋಷವಾದರೆ ಪಾರದರ್ಶಕವಾಗಿಲ್ಲ ವೆಂದು ಸಾರ್ವಜನಿಕರು ದೂರು ಕೊಟ್ಟರೆ ತಕ್ಷಣವೇ ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ನಿಜವಾಗಲು ಲೋಪವಾಗಿದ್ದು ಕಂಡುಬಂದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗಿವುದು. ಆಯ್ಕೆ ಮಾಡಿದ ಬಗ್ಗೆ ಗ್ರಾಮ ಪಂಚಾಯತಿ ಕಚೇರಿಗಳ ನೋಟಿಸ್ ಬೋರ್ಡಿಗೆ ಅಂಟಿಸಿ ಸಾರ್ವಜನಿಕ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ ಅಂತಿಮ ಆಯ್ಕೆ ಮಾಡಿ ಎಂದರು. 

ಸಧ್ಯ ಮತಕ್ಷೇತ್ರದಲ್ಲಿ ಈ ಬಾರಿ ಸಂಪೂರ್ಣ ಮಳೆ ಕಳೆದುಕೊಂಡು ರೈತರು ಸಾರ್ವಜನಿಕರು ಕಂಗಾಲಾಗಿದ್ದಾರೆ ಮಾತ್ರವಲ್ಲದೇ ಬರಗಾಲ ಎದುರಾಗಿದೆ  ಸಧ್ಯ ಡಿಸೆಂಬರ, ಜನೇವರಿ, ಯವರೆಗೂ ಯಾವೂದೇ ನೀರಿನ ತೊಂದರೆಯಾಗುವುದಿಲ್ಲ ಆದರೇ ಪೇಬ್ರವರಿಯಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೇ ಕಾರಣ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜನರಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಉಲ್ಗಣವಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಲ್ಲಿ ಬೋರುಗಳು, ಮೋಟಾರುಗಳು, ಶುದ್ಧ ಕುಡಿಯುವ ನೀರಿನ ಘಟಕಗಳ ಕೆಟ್ಟು ನಿಂತು ಹೋಗಿದ್ದರೆ ಅವುಗಳನ್ನು ದುರಸ್ಥಿಗೊಳಿಸಿಕೊಳ್ಳಬೇಕು. ಸಧ್ಯ ತಾಲೂಕಿನಲ್ಲೆಡೆ ಜೆಜೆಎಂ ಸ್ಕೀಂಗಳು ಸಂಪೂರ್ಣ ಗುಣಮಟ್ಟ ಕಳೆದುಕೊಂಡಿದೆ ಮಾತ್ರವಲ್ಲದೇ ಅವೈಜ್ಞಾನಿಕ ಕಾಮಗಾರಿ ನಡೆಸಲಾಗಿದೆ ಅದರ ಬಗ್ಗೆ ಕ್ರಮ ಕೈಗೊಂಡಿಲ್ಲ. ನಾಗರಬೆಟ್ಟ ಏತ ನಿರಾವರಿ ಯೋಜನೆ ಮೆಂಟೆನನ್ಸ್‌ ಸಮರ​‍್ಕವಾಗಿ ನಿರ್ವಹಿಸಬೇಕು. ಪಿಡಿಓಗಳಿಗೆ ಜೆಜೆಎಂ ಸ್ಕೀಂ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು ಎಂದು ತಾಲೂಕಾ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿ ಎಇಇ  ಹಿರೇಗೌಡರಿಗೆ ಸೂಚಿಸಿದರು. 

ಈ ವೇಳೆ ತಹಶಿಲ್ದಾರ ಬಲರಾಮ ಕಟ್ಟಿಮನಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯುವರಾಜ ಹನಗಂಡಿ, ಯೋಜನಾ ನಿರ್ಧೇಶಕ ಖೂಬಾಶಿಂಗ ಜಾಧವ, ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ಪಿಡಿಓಗಳು, ಸಿಬ್ಬಂದಿಗಳು ಅಧಿಕಾರಿಗಳು ಇದ್ದರು. 


ಸುದ್ದಿ ಓದಿ