ಸೌಂದತ್ತಿ

ಬಸವಣ್ಣನವರ ಸಂದೇಶಗಳನ್ನು ಮೈಗೂಡಿಸಿಕೊಳ್ಳಿ: ಡಾ. ಚಿನಗುಡಿ

ಬಸವಣ್ಣನವರ ಸಂದೇಶಗಳನ್ನು ಮೈಗೂಡಿಸಿಕೊಳ್ಳಿ: ಡಾ. ಚಿನಗುಡಿ

ಲೋಕದರ್ಶನ ವರದಿ 

ಸವದತ್ತಿ 12: ಬಸವಾದಿ ಶರಣರ ತತ್ವದಡಿಯಲ್ಲಿ ಕಾಯಕ ಮತ್ತು ದಾಸೋಹದ ಪ್ರವೃತ್ತಿಯನ್ನು ನಾವು ರೂಢಿಸಿಕೊಳ್ಳಬೇಕಿದ್ದು, ಗುರು ಬಸವಣ್ಣನವರು ಸಮಾಜಕ್ಕೆ ನೀಡಿದ ಸಂದೇಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಡಾ.ಬಾಳಪ್ಪ ಚಿನಗುಡಿ ಹೇಳಿದರು. 

ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸವದತ್ತಿ ಬಸವ ಭಕ್ತರಿಂದ ಹಮ್ಮಿಕೊಂಡ ಮಾಸಿಕ ಹುಣ್ಣಿಮೆಯ 17ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲ್ಯಾಣ ಕ್ರಾಂತಿ ವಿಜಯೋತ್ಸವ ವಿಷಯ ಕುರಿತು ಅವರು ಮಾತನಾಡಿದರು. 

12ನೇ ಶತಮಾನದಲ್ಲಿ ಅನುಭಾವ ಮಂಟಪವನ್ನು ಕಟ್ಟುವದೆ ಒಂದು ಕ್ರಾಂತಿಯಾಗಿತ್ತು. ಗುರು ಬಸವಣ್ಣನವರು ಅಂದು ಸಮಾಜದಲ್ಲಿ ಸಮಾನತೆಯನ್ನು ತರುವ ನಿಟ್ಟಿನಲ್ಲಿ ಹುಟ್ಟು ಹಾಕಿದ ಕ್ರಾಂತಿಯೇ ಅದಾಗಿದೆ ಎಂದರು.  

ಶರಣರು ಮತ್ತು ದಾಸೋಹಿಗಳಿಂದ ಶರಣ ಸಂಗಮದ ಬಸವಧ್ವಜದ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. 

ದಾಸೋಹಿಗಳಾದ ಶರಣ ಜಗದೀಶ ಹಳೇಮನಿ ಹಾಗೂ ಶಂಕರ ಹಳೇಮನಿ ದಂಪತಿಗಳನ್ನು ಮತ್ತು ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. 

ನಿಂಗಪ್ಪ ಮೀಶಿ, ನಾಗಪ್ಪ ಬೆಳ್ಳಿಕೊಪ್ಪಿ, ಮಹೇಶ ಮುಂಗರವಾಡಿ, ಗಣಪತಿ ಸೋಗಿ, ಎಲ್‌.ಎಸ್‌.ನಾಯಕ, ನಾಗಪ್ಪ ಬೆಂಡಿಗೇರಿ ಉಪಸ್ಥಿತರಿದ್ದರು. 

ಬಿ.ಎಸ್‌.ಕಪ್ಪಣ್ಣವರ ಸ್ವಾಗತಿಸಿದರು. ಎಸ್‌.ಜಿ.ತೋಟಗಿ ಹಾಗು ಎಚ್‌.ಡಿ.ಭಜಂತ್ರಿ ನಿರೂಪಿಸಿದರು. ಬಸವರಾಜ ಪುಟ್ಟಿ ವಂದಿಸಿದರು. 


ಸುದ್ದಿ ಓದಿ