ಕಾಗವಾಡ

ವಿದ್ಯುತ್ ಅವಘಡ 20 ಎಕ್ಕರ ಕಬ್ಬಿನ ಗದ್ದೆ ಬೆಂಕಿಗಾಹುತಿ

ವಿದ್ಯುತ್ ಅವಘಡ 20 ಎಕ್ಕರ ಕಬ್ಬಿನ ಗದ್ದೆ ಬೆಂಕಿಗಾಹುತಿ

ಕಾಗವಾಡ: ವಿದ್ಯುತ್ ಶಾರ್ಟ್‌ ಸರ್ಕಿಟ್‌ನಿಂದಾಗಿ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಅಪಾರ ಪ್ರಮಾಣದಲ್ಲಿ ಕಬ್ಬಿನ ಬೆಳೆ ಹಾನಿಯಾಗಿರುವ ಘಟನೆ ಬುಧವಾರ ದಿ. 05 ರಂದು ತಾಲೂಕಿನ ಉಗಾರ ಬಿ.ಕೆ. ಗ್ರಾಮದಳ ಸರಹದ್ದಿನಲ್ಲಿ ಸಂಭವಿಸಿದೆ. 

ಮದ್ಯಾಹ್ನದ ಸುಡು ಬಿಸಿಲಿನ ವೇಳೆಗೆ ವಿದ್ಯುತ್ ಶಾರ್ಟ್‌ ಸರ್ಕಿಟ್‌ನಿಂದಾಗಿ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ನೋಡು ನೋಡುತ್ತಿದ್ದಂತೆಯೇ ಸುಮಾರು 20 ಎಕ್ಕರ ಕಬ್ಬಿನ ಗದ್ದೆ ಸುಟ್ಟು ಕರಕಲಾಗಿದೆ. ಉಗಾರ ಬಿ.ಕೆ. ಗ್ರಾಮದ ಭರತೇಶ ಖಂಡೇರಾಜುರೆ, ಚಂದ್ರಕಾಂತ ಕಿವಾಟೆ, ಧರೆಪ್ಪ ಕುಸನಾಳೆ ಮಲ್ಲು ಕುರುಬರ, ಅಣ್ಣು ಕುರಬರ ಹಾಗೂ ಮಹಾದೇವ ಕುರುಬರ ಇವರಿಗೆ ಸೇರಿದ ಸುಮಾರು 20 ಎಕರೆ ಕಬ್ಬು ಸುಟ್ಟು ಕರಕಲಾಗಿವೆ. ಸುಮಾರು 25 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. 

ಕಬ್ಬಿನ ಗದ್ದೆಗೆ ಬೆಂಕಿ ಅವಘಡ ಸಂಬವಿಸುತ್ತಿದ್ದಂತೆ ಉಗಾರ ಹಾಗೂ ಅಥಣಿ ಅಗ್ನಿಶಾಮಕ ದಳಕ್ಕೆ ದೂರವಾಣಿಯ ಮೂಲಕ ತಿಳಿಸುತ್ತಿದ್ದಂತೆ ಅವರು ಆಗಮಿಸಿ ಅಗ್ನಿ ನಂದಿಸಲು ಪ್ರಯತ್ನಿಸಿದರಾದರೂ ಅಷ್ಟೊತ್ತಿಗೆ ಸಾಕಷ್ಟು ಕಬ್ಬು ಸುಟ್ಟು ಅಪಾರ ಪ್ರಮಾಣದ ಹಾನಿಯಾಗಿತ್ತು. ಆದರೂ ಸಹ ಅಗ್ನಿಶಾಮಕದಳದವರು ಪಕ್ಕಲ್ಲಿದ್ದ ಹಲವಾರು ಎಕರ ಪ್ರದೇಶಕ್ಕೆ ಬೆಂಕಿ ಹತ್ತದಂತೆ ನೀರು ಹೊಡೆಯುವುದರ ಮೂಲಕ ಹೆಚ್ಚಿನ ಅನಾಹುತಗಳಾಗದಂತೆ ತಡೆಯುವಲ್ಲಿ ಯಶಸ್ವಿಯಾದ ರು. 

ಕಬ್ಬಿನ ಗದ್ದೆಯ ಮೇಲಿಂದ ಹಾದು ಹೋದ ಹಳೆಯ ವಿದ್ಯುತ್ ತಂತಿಗಳು ನೇತಾಡುತ್ತಿರುವುದರಿಂದ ಒಂದಕ್ಕೊಂದು ತಾಗಿ ಶಾರ್ಟ ಸರ್ಕಿಟ್‌ನಿಂದ ಬೆಂಕಿ ತಗುಲಿದೆ. ತಮ್ಮ ಹೊಲದಲ್ಲಿರುವ ತಂತಿಗಳು ಕೆಳ ಮಟ್ಟದಲ್ಲಿ ನೇತಾಡುತ್ತಿರುವುದೇ ಅಗ್ನಿ ಅವಘಡಕ್ಕೆ ಕಾರಣ ಎಂದು ಅಲ್ಲಿಯ ರೈತರು ದೂರಿದ್ದಾರೆ. ಸ್ಥಳಕ್ಕೆ ಹೆಸ್ಕಾಂ ಇಲಾಖೆಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಭೇಟ್ಟಿ ನೀಡಿ ಪರೀಶೀಲಿಸಿದರು. ಈ ಕುರಿತು ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ