ಮತದಾರರ ಪಟ್ಟಿ ಪರಿಷ್ಕರಣೆ :2023 ರ ಜಾಗೃತಿ ಅಭಿಯಾನ
ರಾಣೆಬೆನ್ನೂರು ನ 10 ಮತದಾರರು ಪ್ರಜಾಪ್ರಭುತ್ವದ ವ್ಯವಸ್ಥೆಯ ನಿರ್ಮಾಪಕರು ಯಾರು ಮತದಾನದಿಂದ ಮತ್ತು ಮತದಾರರ ಪಟ್ಟಿಯಿಂದ ಹೊರ ಗುಳಿಯಬಾರದು ಎಂದು ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ಆರ್. ಮಲ್ಲಾಡದ ಕರೆ ನೀಡಿದರು. ಅವರು ಬುಧವಾರ ಇಲ್ಲಿನ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2023 ರ ಜಾಗೃತಿ ಜಾತ ಉದ್ಘಾಟಿಸಿ ಮಾತನಾಡಿದರು. ಮತದಾರರ ಅನುಕೂಲತೆಗಾಗಿ ಸರಕಾರ ಚುನಾವಣೆ ಪೂರ್ವದಲ್ಲಿಯೇ ಎಲ್ಲರಲ್ಲಿಯೂ ಈ ಕುರಿತು ಜಾಗೃತಿ ಮೂಡಿಸಲು ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಅಭಿಯಾನದ ಮೂಲಕ ಜನಸಾಮಾನ್ಯರಲ್ಲಿ, ಯುವಕರಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದವರಲ್ಲಿ ಜಾಗೃತಿಗೊಳಿಸುತ್ತದೆ ಅಂತಹ ಕಾರ್ಯಕ್ರಮ ಇದಾಗಿದ್ದು, ಕೂಡಲೇ ಮತದಾರರ ಪಟ್ಟಿಯಿಂದ ಹೊರಗುಳಿದವರು ಸೇರೆ್ಡ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ತಹಸೀಲ್ದಾರ್ ಶಂಕರ್ ಜಿ.ಎಸ್ ಅವರು ಮಾತನಾಡಿ, ಮತದಾನದಿಂದ ಹೊರಗುಳಿದ ಮತದಾರರು, ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಲು ವೂಟಾರ್ ಹೆಲ್ಪ್ ಲೈನ್ ಮತ್ತು ಮೊಬೈಲ್ ಆಪನ್ನು ಬಳಸಲು ತಮ್ಮ ವಾರ್ಡ್ಗಳಲ್ಲಿರುವ, ಹಾಗೂ ಗ್ರಾಮದಲ್ಲಿರುವ ಬಿ ಎಲ್ ಓ ಮೂಲಕ ತಮ್ಮ ಹೆಸರನ್ನು ನೊಂದಾಯಿಸಲು ಅವಕಾಶವಿದ್ದು ಸಂಪರ್ಕಿಸಿ ನೊಂದಾಯಿಸಿಕೊಳ್ಳಲು ಕೋರಿದರು. ತಾ.ಪಂ ಆವರಣದಿಂದ ಆರಂಭವಾದ, ಮತದಾರರ ಜನ ಜಾಗೃತಿ ಜಾತ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಅರಿವು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮದ ಮುಂಚೂಣಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಎಚ್ ಪಾಟೀಲ್, ಸಹಾಯಕ ನಿರ್ದೇಶಕಿ ಶ್ರೀಮತಿ ಡಿ ಡಿ. ಗೊಂದಿ, ತಾ.ಪಂ ವ್ಯವಸ್ಥಾಪಕ, ಗಂಗಾಧರ ಹೆಚ್.ಕೆ,, ಐಇಸಿ ಸಂಯೋಜಕ ಡಿ ಬಿ ಅಂಗೂರ್,ತೋಟಗಾರಿಕೆ ತಾಂತ್ರಿಕ ಸಹಾಯಕ ನಿರ್ದೇಶಕ ಶಿವರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.