ಶಿಗ್ಗಾವ್

ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನಗೌಡ್ರ ಪಾಟೀಲ ಆಯ್ಕೆ: ಸನ್ಮಾನ

ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನಗೌಡ್ರ ಪಾಟೀಲ ಆಯ್ಕೆ: ಸನ್ಮಾನ

ಶಿಗ್ಗಾವಿ 17: ಪಟ್ಟಣದ ವಾಲ್ಮೀಕಿ ಭವನದಲ್ಲಿ ತಾಲೂಕಾ ವಾಲ್ಮೀಕಿ ಬೇಡ ನಾಯಕ ಹಿತಾಭಿವೃದ್ಧಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನಗೌಡ್ರ ಪಾಟೀಲ ಅವರನ್ನ ಸಮಾಜದ ಮುಖಂಡರ ಸಮ್ಮುಖದಲ್ಲಿ ಆಯ್ಕೆ ಮಾಡಲಾಗಿದ್ದು ಜೊತೆಗೆ ಎಲ್ಲ ಸದಸ್ಯರನ್ನು ಮುಖಂಡರು, ಸಾರ್ವಜನಿಕರು ಸನ್ಮಾನಿಸಿ ಗೌರವಿಸಿದರು. 

ಗೌರವಾಧ್ಯಕ್ಷರಾಗಿ ಸಹದೇವಪ್ಪ ದಾವಣಗೆರೆ, ಉಪಾಧ್ಯಕ್ಷರಾಗಿ ಗದಿಗೆಪ್ಪ ಓಲೇಕಾರ, ಬಸವರಾಜ ಅಯ್ಯಣ್ಣವರ, ಪ್ರಧಾನ ಕಾರ್ಯದರ್ಶಿ ಕಿರಣ ಅಯಣ್ಣವರ, ಕಾರ್ಯದರ್ಶಿಯಾಗಿ ಸಂತೋಷ ತಾರಿಹಾಳ, ಕಾರ್ಯಧ್ಯಕ್ಷರಾಗಿ ಶಿವಾನಂದ ಓಲೇಕಾರ, ಮುತ್ತಣ್ಣ ಕಲಕಟ್ಟಿ, ಮಹೇಶ ತಳವಾರ, ಚಂದ್ರು ಆಚೆಬಣದ, ಈರಪ್ಪ ತಳವಾರ ಅವರು ಆಯ್ಕೆಯಾದರು. 

ನಂತರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನಗೌಡ್ರ ಪಾಟೀಲ ಮಾತನಾಡಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಮಾಜದ ಸೇವೆ ಮಾಡುವ ಅವಕಾಶ ಸಿಕ್ಕಿದ್ದು, ಇತರ ಸಮಾಜಗಳಂತೆ ವಾಲ್ಮೀಕಿ ಸಮಾಜವು ಬೆಳವಣಿಗೆಯಾಗಬೇಕು. ಅದಕ್ಕೆ ಸಮಾಜದ ಹಿರಿಯ ಮುಖಂಡರು ಸಹಕಾರ ಮುಖ್ಯವಾಗಿದೆ. ಅದರಿಂದಾಗಿ ಸಮಾಜ ಸರ್ವಾಂಗೀಣ ಬೆಳವಣಿಗೆಯಾಗಲು ಸಾಧ್ಯವಿದೆ. ನನ್ನ ಅವಧಿಯಲ್ಲಿ ಸರ್ವರ ಸಹಕಾರದೊಂದಿಗೆ ಸಮಾಜದ ಏಳ್ಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು. 

ಮುಖಂಡರಾದ ರಾಮು ತಳವಾರ, ಪ್ರಕಾಶ ಕ್ಯಾಲಕೊಂಡ, ಅಶೋಕ ಓಲೇಕಾರ, ಯಲ್ಲಪ್ಪ ನವಲೂರ, ಮಂಜಪ್ಪ ತಳವಾರ, ಬಸಪ್ಪ ಓಲೇಕಾರ, ಭೀಮಣ್ಣ ಬನ್ನೂರ, ಕರೆಪ್ಪ ಸೇರಿದಂತೆ ವಾಲ್ಮೀಕಿ ಸಮಾಜದ ಅನೇಕ ಮುಖಂಡರು ಇದ್ದರು. 


ಸುದ್ದಿ ಓದಿ