ಹಿರೇಮಣಕಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಲೋಕದರ್ಶನ ವರದಿ
ಶಿಗ್ಗಾವಿ : ತಾಲೂಕಿನ ಹಿರೇಮಣಕಟ್ಟಿ ಗ್ರಾಮ ಪಂಚಾಯತಿಯಲ್ಲಿ ಜರುಗಿದ ಅದ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಲ್ಲಿ ಅದ್ಯಕ್ಷರಾಗಿ ಯಲ್ಲವ್ವಾ ಶಿದ್ದಪ್ಪ ಹರಿಜನ ಹಾಗೂ ಉಪಾಧ್ಯಕ್ಷರಾಗಿ ನವೀನ ವಿ ಹುಡೇದ ಅವರನ್ನು ಆಯ್ಕೆ ಮಾಡಲಾಗಿದೆ.
ಅದ್ಯಕ್ಷರನ್ನು ಎಸ್.ಸಿ ಮೀಸಲಾತಿಯಲ್ಲಿ ಆಯ್ಕೆಯಾದರೆ ಇನ್ನೊಂದು ಕಡೆ ಉಪಾಧ್ಯಕ್ಷರ ಆಯ್ಕೆಯಲ್ಲಿ ಪೈಪೋಟಿ ನಡೆಯಿತು. ಪೈಪೋಟಿಯಲ್ಲಿ ಇಬ್ಬರು ಪೈಪೋಟಿ ಆಕಾಂಕ್ಷಿಗಳು ಅಲ್ಲಾಸಾಬ ಹಂಚಿನಾಳ 4 ಸದಸ್ಯರು ಒಪ್ಪಿಗೆ ನೀಡಿದರೆ. ನವೀನ ಹುಡೆದ ಅವರಿಗೆ 5 ಜನ ಸದಸ್ಯರು ಒಪ್ಪಿಗೆ ನೀಡಿ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದರು. ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು