ಅಥಣಿ

ಮಲಾಬಾದ ಗ್ರಾಮದ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

ಮಲಾಬಾದ ಗ್ರಾಮದ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

ಅಥಣಿ: ಮಲಾಬಾದ ಗ್ರಾಮದ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ವಿನೋದಾ ಅಲಗೊಂಡ ಕುಳ್ಳೊಳ್ಳಿ, ಉಪಾಧ್ಯಕ್ಷರಾಗಿ ಸುಖದೇವಿ ಸದಾಶಿವ ವಾಘಮೋರೆ ಆಯ್ಕೆಯಾಗಿದ್ದಾರೆ. 

ಮಾಜಿ ಅಧ್ಯಕ್ಷ ಬೀರಪ್ಪ ಉಗಾರೆ ಮಾತನಾಡಿ, ನನ್ನ ಅಧಿಕಾರವಧಿಯಲ್ಲಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಲಾಬಾದ ಹಾಗೂ ಬೆವನೂರ ಗ್ರಾಮಗಳಲ್ಲಿ ಜನಪರ ಹಾಗೂ ಕಾರ್ಯಗಳನ್ನು ಅನುಷ್ಠಾನ ಗೊಳಿಸಿದ ಪರಿಣಾಮ ಎರಡನೇ ಅಬಧಿಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಜೆಯಾಗಿದ್ದಾರೆ ಎಂದರು.   

    30  ತಿಂಗಳ ನಮ್ಮ ಜನಪರ ಆಡಳಿತ ಮೆಚ್ಚಿ ರಾಜ್ಯ ಸರಕಾರ ನಮ್ಮ ಪಂಚಾಯತಿಗೆ ಅಮೃತ ಗ್ರಾಮ ಯೋಜನೆಯಡಿ 25 ಲಕ್ಷ ಬಹುಮಾನ ನೀಡಿದ್ದು, ಈ ಅವಧಿಯಲ್ಲಿಯೂ ಸಹ ಮಲಾಬಾದ ಗ್ರಾಮ ಪಂಚಾಯತಗೆ ಇನ್ನೆರಡು ಬಹುಮಾನಗಳು ಬಂದೇ ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ನಮ್ಮ ಮನವಿಗೆ ಸ್ಪಂದಿಸಿ ಚುನಾವಣೆಯಲ್ಲಿ ಸಹಕರಿಸಿದ ಗ್ರಾಮ ಪಂಚಾಯತ ಸದಸ್ಯರನ್ನು ಹಾಗೂ ಗ್ರಾಮದ ಹಿರಿಯರನ್ನು ಅಭಿನಂದಿಸಿದರು.  

   ಗ್ರಾಮದ ಮುಖಂಡ ರವಿಬನಸೋಡೆ ಮಾತನಾಡಿ,  ಈ ಚುನಾವಣೆ ಮಾಜಿ ಸಚಿವ ಶ್ರೀಮಂತ ಪಾಟೀಲ ಇವರ ಮಾರ್ಗದರ್ಶನದಲ್ಲಿ ಹಾಗೂ ಮಾಜಿ ಅಧ್ಯಕ್ಷ ಬೀರಪ್ಪ  ಉಗಾರೆ ನೇತೃತ್ವದಲ್ಲಿ ನಡೆದಿದ್ದು, ಮೊದಲಿನ ಅವಧಿಯಂತೆ ಈ ಅವಧಿಯಲ್ಲಿಯೂ ಸಹ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿ ಉತ್ತಮ ಆಡಳಿತ ನೀಡುತ್ತದೆ ಎಂದು ವಿಶ್ವಾಸ ವ್ಯಕ್ತ ಪಡೆಸಿದ ಅವರು ಪಂಚಾಯತ ಆಡಳಿತಕ್ಕೆ ಗ್ರಾಮಸ್ಥರೆಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.   

    ಮಂಜುನಾಥ ಪಾಟೀಲ, ಬಸಗೌಡ ಪಾಟೀಲ, ಧರೆಪ್ಪ ಕಲಮಡಿ, ಸಿದ್ಧಾರೂಢ ಪಾಟೀಲ, ಗಜು ಪೂಜಾರಿ, ಮಾರುತಿ ಕಿರಳೆ, ಸಿದರಾಯ ಗಸ್ತಿ, ಮಲ್ಲಪ್ಪ ಕುಳ್ಳೊಳ್ಳಿ, ಬಸು ಕುಳ್ಳೊಳ್ಳಿ,  ಆನಂದ ಹೊನಖಾಂಡೆ, ಅಲಗೊಂಡ ಕುಳ್ಳೊಳ್ಳಿ, ತಾತು ಪವಾರ, ಸದಾಶಿವ ಮಸಾಳೆ, ಆಕಾಶ ಕಾಂಬಳೆ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಸಂಗೀತಾ ಕಾಕಾಸಾಬ ಮಾಳಿ,  ಪ್ರಭಾಕರ ಪಾಟೀಲ, ಮಂಜುಳಾ ಶಿದರಾಯ ಗಸ್ತಿ, ಅನೀಲ ಯಮಗಾರ, ವರ್ಷಾ  ಶಿವಾಜಿ ಪವಾರ, ದ್ರಕ್ಷಾಯಣಿ ಪ್ರಕಾಶ ಕಿರಳೆ ಭಾಗವಹಿದ್ದರು. ಚುನಾವಣಾ ಅಧಿಕಾರಿಯಾಗಿ ಸಣ್ಣ ನೀರಾವರಿ ಇಲಾಖೆಯ ಶ್ರೀಕಾಂತ ಮಾಕಾಣಿ, ಸಹಾಯಕರಾಗಿ ಪಂಚಾಯತ ಅಭಿವೃದ್ಧಿ ಅಧಿಕಾರಿ ವಿದ್ಯಾ ಸೂರ್ಯವಂಶಿ ಕಾರ್ಯನಿರ್ವಹಿಸಿದರು 

ಸುದ್ದಿ ಓದಿ