ಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕು
ತಾಳಿಕೊಟಿ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮ ಪಂಚಾಯತ ಎರಡನೇಯ ಅವಧಿಗೆ ಜರುಗಿದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಮಲ್ಲನಗೌಡ ಪಾಟೀಲ(ಬೊಮ್ಮನಹಳ್ಳಿ) ಹಾಗೂ ಉಪಾಧ್ಯಕ್ಷೆಯಾಗಿ ಬರಮವ್ವ ಸಿ ಕಾಳಗಿ(ಬೋಳವಾಡ) ಅವಿರೋಧವಾಗಿ ಆಯ್ಕೆಯಾದರು.
ಶನಿವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಮಲ್ಲನಗೌಡ ಪಾಟೀಲ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬರಮವ್ವ ಸಿ ಕಾಳಗಿ ಅವರು ಮಾತ್ರ ನಾಮಪತ್ರ ಸಲ್ಲಿಸಿರುವುದರಿಂದ ಇವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾದ ಸಮಾಜಕಲ್ಯಾಣ ಇಲಾಖೆಯ ನಿರ್ದೇಶಕ ಉಮೇಶ ಲಮಾಣಿ ಘೋಷಿಸಿದರು. ಚುನಾವಣಾ ಸಹಾಯಕರಾಗಿ ಪಿಡಿಓ ಎನ್ ಎಸ್ ದೊಡಮನಿ ಕಾರ್ಯ ನಿರ್ವಹಿಸಿದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡೂ ಸಾಮಾನ್ಯ ವರ್ಗಕ್ಕೆ ಮಿಸಲಾಗಿದ್ದವು. ಚುನಾವಣಾ ಪ್ರಕ್ರೀಯೆಯಲ್ಲಿ ಗ್ರಾಪಂ.ನ ಎಲ್ಲ 13ಜನ ಸದಸ್ಯರೂ ಭಾಗವಹಿಸಿದ್ದರು. ನಂತರ ನಡೆದ ವಿಜಯೋತ್ಸವದಲ್ಲಿ ಮುಖಂಡರಾದ ಮಡುಸಾಹುಕಾರ ಬಿರಾದಾರ, ನಿಂಗಣ್ಣ ಕಲಬುರ್ಗಿ, ಶಂಕರಲಿಂಗ ಚೌಧರಿ, ಜಗನ್ನಾಥ ಮಸರಕಲ್ಲ, ಶಿವು ಕಲಬುರ್ಗಿ, ಉಮೇಶ ಬೂದಿಹಾಳ, ಅಪ್ಪು ಕುಳಗೇರಿ, ತಿರುಪತಿ ಮಸರಕಲ್ಲ, ಸಿದ್ದು ಕಟ್ಟಿಮನಿ, ಶ್ರೀಶೈಲ ದ್ವಾರನಹಳ್ಳಿ, ಬಾಳಾಸಾಹೇಬಗೌಡ ಮತ್ತೀತರರು ಪಾಲ್ಗೊಂಡಿದ್ದರು.