ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಬಿ.ಎ.ಕುಂಬಾರ ಭಾರಿ ಗೆಲುವು
ಲೋಕದರ್ಶನ ವರದಿ
ಚಿಕ್ಕೋಡಿ 12: ತೀವ್ರ ಕುತೂಹಲ ಮೂಡಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಿಕ್ಕೋಡಿ ತಾಲೂಕಾ ಘಟಕಕ್ಕೆ ನಡೆದ ಚುನಾವಣೆಯಲ್ಲಿ ಭಾರಿ ಮತಗಳ ಅಂತರದಿಂದ ಬಿ.ಎ.ಕುಂಬಾರ ಆಯ್ಕೆಯಾಗಿದ್ದಾರೆ.
ಇಲ್ಲಿನ ಸರ್ಕಾರಿ ನೌಕರರ ಸಭಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆರೋಗ್ಯ ಇಲಾಖೆಯ ಬಿ.ಎ.ಕುಂಬಾರ ಹಾಗೂ ಶಿಕ್ಷಣ ಇಲಾಖೆಯ ಶಿವಾಜಿ ಬೆಳಗಾವಿ ಸ್ಪರ್ಧೆ ನಡೆಸಿದ್ದರು.
ಒಟ್ಟು 25 ಮತಗಳಲ್ಲಿ ತೀವ್ರ ಹಣಾಹಣಿಯಲ್ಲಿ ಆರೋಗ್ಯ ಇಲಾಖೆಯ ಬಿ.ಎ. ಕುಂಬಾರ ಅವರು 18 ಮತಗಳು ಪಡೆದು ಜಯ ಸಾಧಿಸಿದರೇ ಪ್ರತಿಸ್ಪರ್ಧಿ ಶಿವಾಜಿ ಬೆಳಗಾವಿ ಕೇವಲ 7 ಮತಗಳನ್ನು ಪಡೆದು ಹೀನಾಯವಾಗಿ ಸೋಲೊಪ್ಪಿಕೊಂಡರು.
ಚುನಾವಣೆ ಫಲಿತಾಂಶ ಹೊರಬರುತ್ತಿದ್ದಂತೆ ಬಿ.ಎ.ಕುಂಬಾರ ಅಭಿಮಾನಿ ಬಳಗ ಗುಲಾಲು ಎರಚಿ ಪಟಾಕಿ ಹೊಡೆದು ಸಂಭ್ರಮ ವ್ಯಕ್ತಪಡಿಸಿದರು.