ವಾಣಿಜ್ಯ ನಗರಿ ರಾಣೇಬೆನ್ನೂರಲ್ಲಿ ಸಂಭ್ರಮದ ಈದ್ ಮಿಲಾದ್
ಲೋಕದರ್ಶನ ವರದಿ
ರಾಣೇಬೆನ್ನೂರು 20: ವಾಣಿಜ್ಯ ನಗರದಲ್ಲಿ ಮುಸ್ಲಿಂ ಭಾಂದವರ ಭಾವೈಕ್ಯತೆ ಸಾರುವ ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ರವರ ಈದ್ ಮಿಲಾದ್ ಕಾರ್ಯಕ್ರಮವು ಅತ್ಯಂತ ಸಡಗರ ಸಂಭ್ರಮಗಳೂಂದಿಗೆ ಸರ್ಕಾರದ ನಿಯಮಾವಳಿಗಳನ್ನು ಅನುಸರಿಸಿ ಸಮುದಾಯದ ಬಾಂದವರು ಆಚರಿಸಿದರು.
ಮಂಗಳವಾರ ಮುಂಜಾನೆಯಿಂದಲೇ ಯುವ ಸಮುದಾಯ ಅತ್ಯಂತ ಪ್ರೀತಿ ವಿಶ್ವಾಸ ಭಾವೈಕ್ಯತೆಯೂಂದಿಗೆ ಆಚರಣೆಗೆ ಮುಂದಾದ ಬಾಂದವರು ಇಲ್ಲಿನ ಇಸ್ಲಾಂಪುರ್ ಗಲ್ಲಿಯಿಂದ ಹಜರತ್ ಜಮಾಲ್ಶಾವಲಿ ದರ್ಗಾದವರೆಗೆ ಮಕ್ಕಾ-ಮದಿನಾ ಸ್ತಬ್ದ ಚಿತ್ರದ ಮೂಲಕ ಮೇರವಣಿಗೆ ಸಾಗಿ ಖಬರಸ್ಥಾನ, ಎಡಿಬಿ ರಸ್ತೆ ,ಬಸ್ ನಿಲ್ದಾಣ ಇಸ್ಲಾಂಪೂರ್ ಓಣಿ ಎಂಜಿ ರಸ್ತೆ ಮೂಲಕ ಸಾಗಿ ಜನತಾ ಬಜಾರ್ ಬಳಿಯ ಇತಿಹಾಸ ಪ್ರಸಿದ್ದ ದರ್ಗಾ ತಲುಪಿ ಅಲ್ಲಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೂಳ್ಳುವುದರ ಮೂಲಕ ಸಂಭ್ರಮದ ಆಚರಣೆ ಮಾಡಿದರು. ಮೇರವಣಿಗೆಯಲ್ಲಿ ವಿವಿಧ ದರ್ಗಾಗಳ ಧಾರ್ಮಿಕ ಮುಖಂಡರು, ಸಮಾಜದ ಗಣ್ಯರು, ಯುವ ಮುಖಂಡರು ಪಾಲ್ಗೂಂಡಿದ್ದರು. ಈದ್ ಮಿಲಾದ್ ನಿಮಿತ್ತ ಸಮಾಜದ ಮುಖಂಡರು ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿನ ನೂರಾರು ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ತಮ್ಮ ಮಾನವೀಯ ಸೇವಾ ಕಾರ್ಯವನ್ನು ಮೇರೆದರು. ಮುಖಂಡರಾದ ಶೇರುಖಾನ್ ಕಾಬೂಲಿ, ನೂರುಲ್ಲಾ ಖಾಜಿ, ಇರ್ಫಾನ್ ದಿಡಗೂರ, ಇರ್ಶಾದ್ ಬಳ್ಳಾರಿ, ನೂರುಲ್ಲಾ ರಾಣೆಬೆನ್ನೂರ, ಅಮಾನುಲ್ಲಾ ಹಾವೇರಿ, ಬಾಷಾಸಾಬ್ ನೀಲಗಾರ, ಅಹ್ಮದ್ ಕಿಲ್ಲೇದಾರ, ಬಶೀರ್ ಅಹ್ಮದ್, ಮಹಬೂಬಸಾಬ ಪಾಟೀಲ, ಇಮ್ರಾನ್ ಹಕೀಂ, ಮಾಬೂಸಾಬ ಕಿಲ್ಲೇದಾರ, ತನವೀರ್ ಕಠಾರಿ, ಅಜರುದ್ದೀನ್ ಭಾವಿಕಟ್ಟಿ ಸೇರಿದಂತೆ ಸಮಾಜದ ಅನೇಕ ಗಣ್ಯರು ಯುವ ಮುಖಂಡರು ಮುಂಚೂಣಿಯಲ್ಲಿ ಪಾಲ್ಗೊಂಡಿದ್ದರು.