ಉ.ಕ ಬಂದ್; ಪರ ವಿರೋಧ ಪ್ರತಿಭಟನೆ
ಬೆಳಗಾವಿ : ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಗುರುವಾರ ದಿನದಂದು ಕರೆ ನೀಡಲಾಗಿದ್ದ ಉ.ಕ ಬಂದ್ ಹಿನ್ನಲೆಯಲ್ಲಿ ಉತ್ತರ ಕನರ್ಾಟಕ ಪರ ವಿರೋಧವಾಗಿ ವಿನೂತನ ಪ್ರತಿಭಟನೆ ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿ ಕಚೇರಿಯು ಇಂದು ಸಾಕ್ಷಿಯಾಯಿತು.
ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಎಂದು ಒಂದೇ ಸ್ಥಳದಲ್ಲಿ ಕುಳಿತ ಉತ್ತರ ಕನರ್ಾಟಕ ಅಭಿವೃದ್ಧಿಯಾಗಲೇ ಬೇಕು. ಆದರೆ ಪ್ರತ್ಯೇಕ ರಾಜ್ಯದ ಮಾತು ಬೇಡವೇ ಬೇಡ ಎಂದು ಕರವೇ ಘಟಕದವರು ಪ್ರತಿಭಟನೆ ನಡೆಸಿದರೆ, ಉ.ಕ. ಅಭಿವೃದ್ಧಿಯಾಗದಿದ್ದರೆ ನಾವು ಪ್ರತ್ಯೇಕ ರಾಜ್ಯ ಕೇಳಲು ಹಿಂಜರಿಯುವುದಿಲ್ಲ ಎಂದು ಉತ್ತರ ಕನರ್ಾಟಕ ಹೋರಾಟ ಸಮಿತಿಯವರು ಎದುರು ಬದುರು ಪ್ರತಿಭಟನೆ ನಡೆಯಿತು.
ಉತ್ತರ ಕನರ್ಾಟಕ ಬಂದ್ಗೆ ಕರೆ ನೀಡಿದ ದಿನ ಬೆಳಗಾವಿಯಲ್ಲಿ ಬಂದ್ ನಡೆಯಲೇ ಇಲ್ಲ. ಆದರೆ ಪ್ರತಿಭಟನೆಗಳ ಕಾವು ಮಾತ್ರ ಏರಿತ್ತು. ಕರವೇ ಘಟಕದವರು ಹಾಗೂ ಉತ್ತರ ಕನರ್ಾಟಕ ಹೋರಾಟ ಸಮಿತಿ ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿಭಿನ್ನ ನಿಲುವುಗಳೊಂದಿಗೆ ಗುರುವಾರ ಎದುರು ಬದುರು ನಿಂತು ತಮ್ಮ ಘೋಷಣೆಗಳನ್ನು ಕೂಗಿದರು.
ಒಂದು ಗಂಟೆಗೂ ಹೆಚ್ಚು ಕಾಲ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಎರಡು ಸಂಘಟನೆ ಮುಖಂಡರು ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು. ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಉ.ಕ. ಪ್ರತ್ಯೇಕ ರಾಜ್ಯದ ಮಾತು ಆಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಆದರೆ ಉತ್ತರ ಕನರ್ಾಟಕ ಹೋರಾಟ ಸಮಿತಿ ಕಾರ್ಯಕರ್ತರು ಅಭಿವೃದ್ಧಿ ಇಲ್ಲವೇ ಪ್ರತ್ಯೇಕ ರಾಜ್ಯ ಎಂದು ಘೋಷಣೆ ಕೂಗಿ ತಮ್ಮ ಅಸಮಾಧಾನ ಹೊರಹಾಕಿದರು.
ಇದಕ್ಕೂ ಮೊದಲು ಗುರುವಾರ ಬೆಳಿಗ್ಗೆ ಪ್ರತ್ಯೇಕ ರಾಜ್ಯಕ್ಕ ಆಗ್ರಹಿಸಿ ಕನರ್ಾಟಕ ಬಂದ್ ಕರೆ ಹಿನ್ನೆಲೆ ಬೆಳಗಾವಿಯಲ್ಲಿ ಕನರ್ಾಟಕ ಬಂದ್ಗೆ ವಿರೋಧ ವ್ಯಕ್ತಪಡಿಸಿದ ಕನರ್ಾಟಕ ಬಂದ್ ಇಲ್ಲಾ ಅಂತಾ ಹೂ ನೀಡುವುದ ಮೂಲಕ ಬಂದ್ಗೆ ವಿರೋಧ. ಪ್ರಯಾಣಿಕರಿಗೆ, ಅಂಗಡಿ ಮಾಲೀಕರಿಗೆ, ಹಾಗೂ ಆಟೋ ಚಾಲಕರಿಗೆ ಸೇರಿದಂತೆ ಬಸ್ ನಿಲ್ದಾಣ ಸೇರಿದ ಜನರಿಗೆ ಹೂ ವಿತರಣೆಯನ್ನು ಕನರ್ಾಟಕ ನವ ನಿಮರ್ಾಣ ಸೇನೆಯು ಬಾಬು ಸಂಗೋಡಿ ನೇತೃತ್ವದಲ್ಲಿ ಹಾಗೂ ಕರವೇ ಮಹಾದೇವ ತಳವಾರೆ ದೀಪಕ ಗುಡಗನಟ್ಟಿ ಅವರ ಮುಂದಾಳತ್ವದಲ್ಲಿ ಹೂ ವಿತರಣೆ ಮಾಡಲಾಯಿತು. ರೈತರ ಪ್ರತಿಭಟನೆ ಮಾರ್ಗಕ್ಕೆ ಅನುಮತಿ ನೀಡಿದ ಪೊಲಿಸ್ ಕಮಿಷನರ್ ಡಿಸಿ ರಾಜಪ್ಪ ಉತ್ತರ ಕನರ್ಾಟಕ ರೈತ ಸಂಘದ ಜಿಲ್ಲಾದ್ಯಕ್ಷ ಮಹಾದೇವ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ರೈತರು ನಗದ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ಪ್ರತಿಭಟನೆ ಮೆರವಣಿಗೆ ಉದ್ದೇಸಿದ್ದರು. ಇದಕ್ಕೆ ಒಪ್ಪದ ಪೊಲೀಸರ ಆಯುಕ್ತ ಬೆಳಗಾವಿ ಕೋಟೆ ಕೆರೆ ಕಿಲ್ಲಾ ಬಳಿಯ ಅಶೋಕ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಡಿಸಿ ಕಚೇರಿಯವರೆಗೆ ಮೆರವಣಿಗೆಗೆ ಅನುಮತಿ ನೀಡಿದ್ದರು. ಸೂಚಿಸಿದ ಮಾರ್ಗ ಬಿಟ್ಟು ಬೇರೆಕಡೆ ಪ್ರತಿಭಟನೆ ಮಾಡಿದ್ರೆ ಕಾನೂನು ಕ್ರಮಕೈಗೋಳ್ಳುವದಾಗಿ ಪ್ರತಿಭಟನೆ ನೀರತ ರೈತರಿಗೆ ಪೊಲೀಸ ಆಯುಕ್ತರು ಎಚ್ಚರಿಕೆ ನೀಡಿದ್ದರು.ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಭೀಮಪ್ಪ ಗಡಾದ, ಅಡಿವೇಶ ಇಟಗಿ, ಪ್ರಧಾನ ಕಾರ್ಯದಶರ್ಿ ಶ್ರೀಕಾಂತ ಮಾಧು ಭರಮನ್ನವರ ಇತರರು ಇದ್ದರು. ಅದರಂತೆ ಕರವೇ ಘಟಕದಲ್ಲಿ ಜಿಲ್ಲಾಧ್ಯಕ್ಷ ಮಹಾದೇವ ತಳವಾರ, ಶಾಂತಮ್ಮ, ಗಣೇಶ ರೊಕಡೆ, ಬಸವರಾಜ ನಾಶಿಪುಡಿ, ನಿಂಗರಾಜ ಗುಂಡ್ಯಾಗೋಳ, ಬಸನಗೌಡ ಪಾಟೀಲ್ ನಾಗೇಶ ಮಾಳಿ ಮುಂತಾದವರು ಉಪಸ್ಥಿತರಿದ್ದರು.(ಫೋಟೊ 4)