ಜಮಖಂಡಿ

ಇಂದಿನ ಮಕ್ಕಳಿಗೆ ಶಿಕ್ಷಣವೇ ಸಂಪತ್ತು: ಶಾಸಕ ಗುಡಗುಂಟಿ

ಇಂದಿನ ಮಕ್ಕಳಿಗೆ ಶಿಕ್ಷಣವೇ ಸಂಪತ್ತು: ಶಾಸಕ  ಗುಡಗುಂಟಿ

ಲೋಕದರ್ಶನ ವರದಿ,

ಜಮಖಂಡಿ 26: ಇಂದಿನ ಮಕ್ಕಳಿಗೆ ಶಿಕ್ಷಣವೇ ಸಂಪತ್ತು, ಶಿಕ್ಷಣವಿಲ್ಲದ್ದರೇ ಜೀವನ ನಡೆಸುವದೇ ದುಸ್ತರ. ಪಾಲಕರು ಮಕ್ಕಳಿಗಾಗಿ ಯಾವುದೇ ಆಸ್ತಿ ಮಾಡದೇ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ದೇಶದ ಉತ್ತಮ ಪ್ರಜೆಗಳನ್ನು ನಿರ್ಮಿ ಸಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ತಾಲೂಕಿನ ಜಂಬಗಿ ಬಿ.ಕೆ. ಗ್ರಾಮದಲ್ಲಿ ಡಾ.ರಾಧಾಕೃಷ್ಣನ್ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಅಂದಾಜು 8 ಲಕ್ಷ ವೆಚ್ಚದಲ್ಲಿ 12 ಶಾಲಾ ಕೊಠಡಿಗಳನ್ನು ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಾನ್ಯತೆಯಿದೆ. ಶಿಕ್ಷಣ ವಂಚಿತರು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಬಡತನ ಇದ್ದರೂ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುವ ಮೂಲಕ ಉತ್ತಮ ಭವಿಷ್ಯ ರೂಪಿಸಬೇಕು. ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತರುವ ಕೆಲಸದಲ್ಲಿ ತೊಡಗಬೇಕು ಎಂದರು.

ವೇದಿಕೆಯಲ್ಲಿ ಉತ್ತರಪ್ರಾಂತ ಸಂಘ ಸಂಚಾಲಕ ಅರವಿಂದರಾಯ ದೇಶಪಾಂಡೆ, ಜಿಲ್ಲಾ ಸಹಸಂಚಾಲಕ ಬಾಳಾ ಸಾಹೇಬ ಕುಲಕರ್ಣಿ , ಮಾಜಿ ಶಾಸಕ ಶ್ರೀಕಾಂತ ಕುಲಕಣರ್ಿ, ಡಾ.ಉಮೇಶ ಮಹಾಬಳಶೆಟ್ಟಿ, ಅಜಯ ಕಡಪಟ್ಟಿ, ಮಹಾದೇವ ನ್ಯಾಮಗೌಡ, ಡಾ. ರಾಕೇಶ ಲಾಡ, ಡಾ.ವಿಜಯಲಕ್ಷ್ಮೀ ತುಂಗಳ, ಸುರೇಶಗೌಡ ಪಾಟೀಲ, ಗ್ರಾ.ಪಂ.ಅಧ್ಯಕ್ಷ ಶಿವಲಿಂಗ ತೇಲಿ, ಎನ್.ಸಿ.ನಾಯಿಕ ಅನೇಕರು ಇದ್ದರು.



ಸುದ್ದಿ ಓದಿ