ಬದುಕನ್ನು ರೂಪಿಸಲು ಶಿಕ್ಷಣ ಅಗತ್ಯ: ಡಾ. ಪಿ.ಜಿ. ಕೆಂಪನ್ನವರ
Education is necessary to shape life: Dr. P.G. Kempannavara
ಕಾಗವಾಡ 22: ಶಿಕ್ಷಕ, ಪಾಲಕ, ವಿದ್ಯಾರ್ಥಿ ಮತ್ತು ಶಿಕ್ಷಣ ಸಂಸ್ಥೆ ಭವಿಷ್ಯದ ಭದ್ರ ಬುನಾದಿಗೆ ನಾಲ್ಕು ಆಧಾರ ಸ್ತಂಭಗಳಿದ್ದಂತೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿ ಸಮೂಹವು ಸದಾ ಹಸನ್ಮುಖಿಗಳಾಗಿ ಕಲಿಕೆಯನ್ನು ಸಮರಾ್ಣ ಭಾವದಿಂದ ಕಲಿತು ಬದುಕನ್ನು ರೂಪಿಸಿಕೊಳ್ಳಬೇಕೆಂದು ಬೆಳಗಾವಿಯ ಸಾಹಿತಿ ಡಾ.ಪಿ.ಜಿ. ಕೆಂಪನ್ನವರ ತಿಳಿಸಿದ್ದಾರೆ.
ಅವರು, ಶುಕ್ರವಾರ ದಿ. 22 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಪ್ರಾಯೋಜಿತ 2025-26ನೇ ಶೈಕ್ಷಣಿಕ ಸಾಲಿನ ಕಾಲೇಜು ಒಕ್ಕೂಟ ಹಾಗೂ ಕರ್ನಾಟಕ ಸಾಂಸ್ಕ್ರತಿಕ ಸಂಘದ ಉದ್ಫಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಮಹಾವಿದ್ಯಾಲಯದ ಆಡಳಿತಾಧಿಕಾರಿ ಮೇ. ವ್ಹಿ.ಎಸ್. ತುಗಶೆಟ್ಟಿ ಮಾತನಾಡಿದರು. ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎ.ಎಂ. ಜಕ್ಕಣ್ಣವರ ಸಂಪಾದಿತ ರಾಣಿ ಚನ್ನಮ್ಮಾ ವಿವಿಯ ಬಿ.ಎಸ್ಸಿ-1 ನೇ ಸೆಮಿಸ್ಟರನ ಕನ್ನಡ ಭಾಷೆಯ ಸಾಹಿತ್ಯ ಸೊಬಗು-1 ಹಾಗೂ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಎ.ಟಿ. ಪಾಟೀಲ ಸಂಪಾದಿತ ಬಿ.ಎಸ್ಸಿ-3ನೇ ಸೆಮಿಸ್ಟರನ ಗದ್ಯ ಪ್ರಭಾ ಪಠ್ಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಹಿರಿಯ ಪತ್ರಕರ್ತ ಸುಕುಮಾರ ಬನ್ನೂರೆ ಅವರಿಗೆ ಅಂತರಾಷ್ಟ್ರೀಯ ಅಲೈಯನ್ಸ ಕ್ಲಬ್‌ನಿಂದ ಮಿಡಿಯಾ ರತ್ನ ಪ್ರಶಸ್ತಿ ಲಭಿಸಿದ ಪ್ರಯುಕ್ತ ಮತ್ತು ಈ ವರ್ಷದ ಆದರ್ಶ ವಿದ್ಯಾರ್ಥಿ-ವಿದ್ಯಾರ್ಥಿನಿ ಸೇರಿದಂತೆ ವಿದ್ಯಾರ್ಥಿ ಪರಿಷತ್ತಿನ ನೂತನ ಪದಾಧಿಕಾರಿಗಳು ಹಾಗೂ ವಿವಿಧ ಸಮಿತಿಗಳ ವಿದ್ಯಾರ್ಥಿ ಕಾರ್ಯದರ್ಶಿಗಳಿಗೆ ಸನ್ಮಾನಿಸಲಾಯಿತು.
ಪ್ರಾಚಾರ್ಯ ಡಾ.ಎಸ್.ಪಿ. ತಳವಾರ, ಪ್ರೊ. ಬಿ.ಎ. ಪಾಟೀಲ, ಪ್ರೊ. ಬಿ.ಡಿ. ಧಾಮಣ್ಣವರ. ಡಾ.ಚಂದ್ರಶೇಖರ ವೈ., ಪ್ರೊ. ಎ.ಎ. ಪಾಟೀಲ, ಪ್ರೊ. ವ್ಹಿ.ಬಿ. ಬುರ್ಲೆ, ಪ್ರೊ. ಎಸ್.ಡಿ. ಬಿರಾದಾರ ಪ್ರೊ. ಎನ್.ಎಂ. ಬಾಗೇವಾಡಿ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಯವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 