ಮಕ್ಕಳ ಬೌದ್ದಿಕ ಬೆಳೆವಣಿಗೆಗೆ ಶಿಕ್ಷಣ ನೆರವಾಗುವದು : ವಿಶ್ವನಾಥ
ಹೊಸಪೇಟೆ : ಮಕ್ಕಳ ಬೌದ್ದಿಕ ಬೆಳೆವಣಿಗೆಗೆ ಹಾಗು ಸಾಮಾಜಿಕ ಬೆಳವಣಿಗೆ ಶಾಲಾಪೂರ್ವ ಶಿಕ್ಷಣ ನೆರವಾಗುವದು ಎಂದು ಮಲಪನ ಗುಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ್ ವಿಶ್ವನಾಥ ಹೇಳಿದರು.
ಮಲಪನಗುಡಿ ಗ್ರಾಮದಲ್ಲಿ ಗುರುವಾರ ಅಂಗನವಾಡಿ ಕಾರ್ಯಕರ್ತೆಯರಿಗೆ ೩ನೇ ಹಂತದ ಶಾಲಾಪೂರ್ವ ಶಿಕ್ಷಣದ ಬಲವರ್ಧನೆ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತಾನಾಡಿದ ಅವರು ಅಂಗನವಾಡಿ ಕಾರ್ಯಕರ್ತೆಯರು ತಾಯಿ ಹೌದು ಶಿಕ್ಷಕಿ ಹೌದು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹನುಮಂತಪ್ಪ ಮಾತಾಡಿ ಈ ಶಿಕ್ಷಣದಿಂದ ಮಕ್ಕಳಲ್ಲಿ ಬಲವರ್ಧನೆ ಆಗುವದು. ಈ ಶಿಕ್ಷಣ ಭದ್ರ ಬುನಾದಿ ಆಗುವುದು ಎಂದರು. ಪ್ರಾಸ್ಥಾವಿಕವಾಗಿ ಮಾತಾಡಿದ ಮೇಲ್ವಿಚಾರರಾದ ಶ್ರೀಮತಿ L.D ನದಾಫ್ ಇವರು ಶಿಶು ಅಭಿರುದ್ದಿ ಯೋಜನೆಗಳ ವಿವರ ನೀಡಿದರು. ಶೀಮತಿ ಕಸ್ತುರಿ ಪ್ರಾಥಿಸಿದರು. ಮೇಲ್ವಿಚಾರಕಾದ ಉಷಾ ವಂದಿಸಿದಿದರು .