ಸವದತ್ತಿಯ ಬಿಇಓ ಕಾರ್ಯಾಲಯದಲ್ಲಿ ಶಿಕ್ಷಣ ಅದಾಲತ್
ಲೋಕದರ್ಶನ ವರದಿ
ಸವದತ್ತಿ 26: ತಾಲೂಕಾ ಹಂತದಲ್ಲಿ ಶಿಕ್ಷಕರ ಮತ್ತು ಇಲಾಖಾ ಕುಂದುಕೊರತೆಗಳು ಹಾಗೂ ದೂರುಗಳನ್ನು ನಿವಾರಿಸಿ, ಶಿಕ್ಷಕರಿಗೆ ನ್ಯಾಯಯುತವಾಗಿ ಸಿಗಬೇಕಾದ ಸರಕಾರಿ ಸೌಲಭ್ಯಗಳನ್ನು ಒದಗಿಸಲು ಅಕ್ಟೋಬರ 30 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸವದತ್ತಿಯಲ್ಲಿ ಶಿಕ್ಷಣ ಅದಾಲತ್ (ಕಡತ ವಿಲೇವಾರಿ) ಏರ್ಪಡಿಸಲಾಗಿದೆ ಎಂದು ಬಿಇಓ ಎಮ್.ಎನ್.ದಂಡಿನ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಕರು ತಮ್ಮ ತಮ್ಮ ಸೌಲಭ್ಯ, ಕುಂದುಕೊರತೆಗಳು ಹಾಗೂ ದೂರುಗಳನ್ನು ಅ.27 ರ ಒಳಗಾಗಿ ಬಿಇಓ ಕಾರ್ಯಾಲಯಕ್ಕೆ ಒಂದು ಅರ್ಜಿಯೋಂದಿಗೆ ಸಲ್ಲಿಸಲು ತಿಳಿಸಲಾಗಿದೆ. ತಾಲೂಕಿನ ಎಲ್ಲಾ ಶಿಕ್ಷಕರು ಈ ಶಿಕ್ಷಣ ಅದಾಲತ್ತಿನ ಸೌಲಭ್ಯವನ್ನು ಪಡೆಯಲು ಕೋರಲಾಗಿದೆ.