ದೇಶದ ಆರ್ಥಿಕ ಸ್ಥಿತಿ ಸುಧಾರಣೆ, ಜಿಡಿಪಿ ಏರಿಕೆ- ನಿರ್ಮಲಾ ಸೀತಾರಾಮನ್
ನವದೆಹಲಿ,ನವೆಂಬರ್ 12: ಕೋರೋನಾ ಸೋಂಕಿನಿಂದ ತತ್ತರಿಸಿದ್ದ ದೇಶದ ಆರ್ಥಿಕ ಪರಿಸ್ಥಿತಿ ನಿಧಾನವಾಗಿ ಚೇತರಿಕೆ ಕಾಣುತ್ತಿದೆ ಎಂದು ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಕಸ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಅರ್ಥ ವ್ಯವಸ್ಥೆ ಸುಧಾರಿಸಿಕೊಳ್ಳುತ್ತಿದೆ. ಜಿಡಿಪಿ ಸಂಗ್ರಹದಲ್ಲಿ ಏರಿಕೆಯಾಗುತ್ತಿದೆ ಎಂದರು.
"ಜಿಡಿಪಿ ಏರಿಕೆ ಅರ್ಥ ವ್ಯವಸ್ಥೆ ಸುಧಾರಣೆಯ ಸೂಚಕವಾಗಿದೆ. ವಿದ್ಯುತ್ ಬಳಕೆ ಶೇಕಡ 12%ರಷ್ಟು ಜಾಸ್ತಿಯಾಗಿದೆ. ಬ್ಯಾಂಕುಗಳ ಸಾಲ ನೀಡುವಿಕೆಯಲ್ಲೂ ಶೇ. 5.1ರಷ್ಟು ಸುಧಾರಣೆಯಾಗಿದೆ .ಒಂದು ದೇಶ ಒಂದು ಪಡಿತರ ಚೀಟಿ ಯೋಜನೆ ಯಶಸ್ವಿಯಾಗಿದೆ. ಸ್ವನಿಧಿ ಯೋಜನೆಯಡಿ 26.26 ಕೋಟಿ ರೂಪಾಯಿ ಸಾಲ ನೀಡಲಾಗಿದೆ.
ದೇಶ ಅಭಿವೃದ್ಧಿಯತ್ತ ಸಾಗಿದೆ ಎಂದರು. "ಬೀದಿ ಬದಿ ವ್ಯಾಪಾರಿಗಳಿಗೆ ಆತ್ಮ ನಿರ್ಭರ ನಿಧಿ ಯೋಜನೆ ಸಾಲ ನೀಡಲಾಗಿದೆ. ರೈತರಿಗೆ ನೀಡಿದ ಸಹಾಯದ ಬಗ್ಗೆ ಮಾತನಾಡಿದ ಅವರು, ನಬಾರ್ಡ್ ಮೂಲಕ ಹೆಚ್ಚುವರಿ ತುರ್ತು ಕೆಲಸಕ್ಕೆ ಬಂಡವಾಳ ನಿಧಿಯಿಂದ ರೈತರಿಗೆ 25,000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹೊಸ ಉದ್ಯೋಗಿಗಳಿಗೆ ಪಿಎಫ್ ಸಬ್ಸಿಡಿ ಸೌಲಭ್ಯವನ್ನು ಕೇಂದ್ರ ಘೋಷಣೆ ಮಾಡಿದೆ. ಮುಂದಿನ 2 ವರ್ಷ ಪಿಎಫ್ ಸಬ್ಸಿಡಿ ಮುಂದುವರೆಯಲಿದೆ 1 ಸಾವಿರ ಅಥವಾ ಅದಕ್ಕಿಂತ ಕಡಿಮೆ ನೌಕರರಿರುವ ಕಂಪನಿಗಳಿಗೆ ಈ ಸೌಲಭ್ಯ ಲಭ್ಯವಾಗಲಿದೆಎಂದೂ ಸಚಿವರು ಹೇಳಿದರು.