ರಾಷ್ಟ್ರೀಯ

ಲಡಾಖ್‍ನಲ್ಲಿ ಸಾಧಾರಣ ತೀವ್ರತೆಯ ಭೂಕಂಪನ

ಲಡಾಖ್‍ನಲ್ಲಿ ಸಾಧಾರಣ ತೀವ್ರತೆಯ ಭೂಕಂಪನ

ಶ್ರೀನಗರ, ಅಕ್ಟೋಬರ್ 6: ಕೇಂದ್ರಾಡಳಿತ ಪ್ರದೇಶ ಲಡಾಖ್‍ನಲ್ಲಿ ಮಂಗಳವಾರ ಬೆಳಿಗ್ಗೆ ಸಾಧಾರಣ ತೀವ್ರತೆಯ ಭೂಕಂಪನ ಸಂಭವಿಸಿದ್ದು, ಭಯ-ಭೀತರಾದ ಜನರು ಮನೆಗಳಿಂದ ಹೊರೆಗೆ ಬಂದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.   

ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆಯ ಕಂಪನ ಇಂದು ಬೆಳಿಗ್ಗೆ 5.15ಕ್ಕೆ ಸಂಭವಿಸಿದೆ. ನಿದ್ರೆಯಲ್ಲೇ ಇದ್ದ ಕೆಲವರು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಬಂದಿದ್ದಾರೆ. ಆದರೆ, ಭೂಕಂಪನದಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಭೂಕಂಪನದ ಕೇಂದ್ರಬಿಂದು ಲಡಾಕ್ ಪ್ರದೇಶದಲ್ಲಿ ಭೂಮಿಯ 10 ಕಿ.ಮೀ. ಆಳದಲ್ಲಿ ಕೇಂದ್ರೀಕೃತವಾಗಿದೆ .ಕಳೆದ ಒಂದು ತಿಂಗಳಿನಿಂದ ಲಡಾಖ್ ಪ್ರದೇಶದಲ್ಲಿ ಸುಮಾರು ಐದು ಬಾರಿ ಭೂಕಂಪನ ಉಂಟಾಗಿದ್ದು, ಕೇಂದ್ರಾಡಳಿತ ಪ್ರದೇಶದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. 

ಜನರು ಭಯಭೀತರಾಗಬಾರದು. ಭೂಕಂಪದ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರಾಡಳಿತ ಪ್ರದೇಶದ ಸರ್ಕಾರ ಹೇಳಿದೆ.

ಸುದ್ದಿ ಓದಿ