ರಾಷ್ಟ್ರೀಯ

ಅರುಣಾಚಲ ಪ್ರದೇಶದಲ್ಲಿ ಕಂಪನ, ಹಾನಿ ವರದಿಯಿಲ್ಲ

ಅರುಣಾಚಲ ಪ್ರದೇಶದಲ್ಲಿ ಕಂಪನ,  ಹಾನಿ ವರದಿಯಿಲ್ಲ

ಇಟಾನಗರ, ಆಗಸ್ಟ್ 24: ಅರುಣಾಚಲ ಪ್ರದೇಶದಲ್ಲಿ ಸೋಮವಾರ ಮುಂಜಾನೆ ಅಂಜಾವ್  ಎಂಬಲ್ಲಿ  ಭೂಮಿ ಕಂಪಿಸಿರುವುದು ಸ್ಥಳೀಯ ಜನರ ಅನುಭವಕ್ಕೆ ಬಂದಿದೆ .

ರಿಕ್ಟರ್ ಮಾಪನದಲ್ಲಿ ಕಂಪನದ  ತೀವ್ರತೆ 3.7 ಎಂದು  ದಾಖಲಾಗಿದೆ.  ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್ಸಿಎಸ್) ಈ ಕುರಿತು ಟ್ವೀಟ್ ಮಾಡಿದೆ.  

ಅರುಣಾಚಲ ಪ್ರದೇಶದ ಚಾಂಗ್ಲಾಂಗ್ನ 15 ಕಿ.ಮೀ ದೂರದಲ್ಲೂ   ಭೂಕಂಪನ ಸಂಭವಿಸಿದೆ. ಆದರೆ ಈ ಕಂಪನಗಳಿಂದ ಯಾವುದೇ ಅಪಾಯವಾಗಿರುವ ಬಗ್ಗೆಯಾಗಲಿ, ಅಥವಾ    ಪ್ರಾಣ  ಹಾನಿ,  ಆಸ್ತಿ ಪಾಸ್ತಿಗೆನಷ್ಟವಾಗಿರುವ ಬಗ್ಗೆ ಈವರೆಗೆ ವರದಿಯಾಗಿಲ್ಲ ಎಂದೂ ತಿಳಿದು ಬಂದಿದೆ. 

ಸುದ್ದಿ ಓದಿ