ರಾಷ್ಟ್ರೀಯ

ಕಾರ್ಮಿಕರ ಭವಿಷ್ಯ ನಿಧಿ ಬಡ್ಡಿದರ ಶೇ 8.5ಕ್ಕೆ ಇಳಿಕೆ: ಇಪಿಎಫ್ಒ ಸಭೆಯಲ್ಲಿ ನಿರ್ಧಾರ

ಕಾರ್ಮಿಕರ ಭವಿಷ್ಯ ನಿಧಿ ಬಡ್ಡಿದರ ಶೇ 8.5ಕ್ಕೆ ಇಳಿಕೆ: ಇಪಿಎಫ್ಒ ಸಭೆಯಲ್ಲಿ ನಿರ್ಧಾರ

ನವದೆಹಲಿ,ಮಾರ್ಚ್ 5  ಪ್ರಸಕ್ತ ಹಣಕಾಸು ವರ್ಷದಲ್ಲಿ ನೌಕರರ ಭವಿಷ್ಯ ನಿಧಿ ಮೇಲಿನ ಬಡ್ಡಿದರವನ್ನು ಶೇ .8.5 ಕ್ಕೆ ಇಳಿಸಲು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಗುರುವಾರ ನಿರ್ಧರಿಸಿದೆ.ಹೊಸ ಬಡ್ಡಿ ದರವು ಕಳೆದ ಹಣಕಾಸು ವರ್ಷದ ಬಡ್ಡಿದರದ ಶೇ 8.65ಕ್ಕಿಂತ ಶೇ 0.15 ರಷ್ಟು ಕಡಿತವಾಗಿದೆ.ಈ ನಿರ್ಧಾರವು ನಿವೃತ್ತಿ ನಿಧಿ ಯೋಜನೆಯ ಸುಮಾರು ಆರು ಕೋಟಿ ಚಂದಾದಾರರ ಮೇಲೆ ಪರಿಣಾಮ ಬೀರಲಿದೆ ಎಂದು ಕಾರ್ಮಿಕ ಸಚಿವಾಲಯದ ಅಧಿಕಾರಿಗಳ ಮೂಲಗಳು ತಿಳಿಸಿವೆ.ಇಪಿಎಫ್‌ಒನ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಕೇಂದ್ರ ಟ್ರಸ್ಟಿ (ಸಿಬಿಟಿ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ನೌಕರರ ಭವಿಷ್ಯ ನಿಧಿ (ಇಪಿಎಫ್) ದರವನ್ನು ಕಡಿತಗೊಳಿಸಲು ಸಿಬಿಟಿ ನಿರ್ಧರಿಸಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸಿಬಿಟಿ ಪ್ರಸ್ತಾವನೆಯನ್ನು ಅಖೈರುಗೊಳಿಸಲು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುವುದು. ಸಚಿವಾಲಯ ಒಪ್ಪಿಗೆ ನೀಡಿದ ನಂತರ ಬಡ್ಡಿ ಮೊತ್ತವನ್ನು ಚಂದಾದಾರರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಗಂಗ್ವಾರ್ ತಿಳಿಸಿದ್ದಾರೆ. ಈ ಮಧ್ಯೆ, ಸಿಬಿಟಿಯ ನಿರ್ಧಾರದ ಬಗ್ಗೆ ಸಭೆಯಲ್ಲಿ ತಮ್ಮ ಪ್ರತಿನಿಧಿಗಳು ಪ್ರತಿಭಟಿಸಿದ್ದು, ಬಡ್ಡಿದರವನ್ನು ಶೇ 8.65 ಕ್ಕೆ ಕಾಯ್ದುಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಆರ್‌ಎಸ್‌ಎಸ್‌ನ ಕಾರ್ಮಿಕ ಅಂಗಸಂಸ್ಥೆಯಾದ  ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಹೇಳಿದೆ.




ಸುದ್ದಿ ಓದಿ