ರಾಷ್ಟ್ರೀಯ

ಇಸ್ರೊದಿಂದ ಇಂದು ಇಒಎಸ್01 ಉಪಗ್ರಹ ಉಡಾವಣೆ

ಇಸ್ರೊದಿಂದ ಇಂದು ಇಒಎಸ್01 ಉಪಗ್ರಹ ಉಡಾವಣೆ

ನವದೆಹಲಿ, ನ 7: ಪಿಎಸ್ ಎಲ್ ವಿ ಸಿ-49ರ  ರಾಕೆಟ್ ಮೂಲಕ ಭಾರತದ ಅತ್ಯುನ್ನತ ಎಲ್ಲಾ ಋತುಮಾನಗಳ  ಇಒಎಸ್ 1 ಭೂ ವೀಕ್ಷಣಾ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ಇಸ್ರೊ ಇಂದು ಉಡಾವಣೆ ಮಾಡಲಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್  ಧವನ್ ಬಾಹ್ಯಾಕಾಶ ಕೇಂದ್ರದಿಂದ ಅಪರಾಹ್ನ 3.2 ನಿಮಿಷಕ್ಕೆ ಉಪಗ್ರಹ ಉಡ್ಡಯನವಾಗಲಿದೆ ಎಂದು ಇಸ್ರೊ ಹೇಳಿದೆ.

ಇಸ್ರೊದ 51ನೇ ಮಿಷನ್ ನಡಿ ಇತರ 9 ಗ್ರಾಹಕ ಉಪಗ್ರಹಗಳನ್ನು ಕೂಡ ಉಡಾವಣೆ ಮಾಡಲಾಗುತ್ತಿದೆ.  ಇಒಎಸ್ 01 ಉಪಗ್ರಹವು ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣೆ ಕಾರ್ಯಗಳಿಗೆ ಭೂವೀಕ್ಷಣೆ ಸ್ಯಾಟಲೈಟ್ ನೆರವಾಗಲಿದೆ.

ವಿದೇಶಿ ಗ್ರಾಹಕ ಸ್ಯಾಟಲೈಟ್ ಗಳು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ನ ಜತೆಗಿನ ವಾಣಿಜ್ಯ ಒಪ್ಪಂದದಡಿ ಉಡಾವಣೆಯಾಗಲಿವೆ.ಉಡಾವಣೆಗೆ ನಿನ್ನೆ ಮಧ್ಯಾಹ್ನ 1.2ಕ್ಕೆ ಇಳಿ ಎಣಿಕೆ ಕಾರ್ಯ ಆರಂಭವಾಗಿದೆ.

ಸುದ್ದಿ ಓದಿ