ಶಿಗ್ಗಾವ್

26ರಿಂದ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ

26ರಿಂದ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ

ಲೋಕದರ್ಶನ ವರದಿ 

ಶಿಗ್ಗಾವಿ 19: ಪಟ್ಟಣದ ಐತಿಹಾಸಿಕ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಸಮಿತಿ ಶಿಗ್ಗಾವಿ ಮತ್ತು ಗಂಜೀಗಟ್ಟಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಶರನ್ನವರಾತ್ರಿ ಅಣಗವಾಗಿ ಶ್ರೀದೇವಿ ಮಹಾ ಪುರಾಣ ಪ್ರವಚನ ಸೆ. 26 ರಿಂದ ಅ. 4 ರವರೆಗೆ ಪ್ರತಿ ನಿತ್ಯ ಸಂಜೆ 6 ರಿಂದ 10 ರವರೆಗೆ ನಡೆಯಲಿದೆ. 

ಪ್ರವಚನ ಉದ್ಘಾಟನೆ ಸಮಾರಂಭದ ಸಾನಿದ್ಯ ಗಂಜೀಗಟ್ಟಿಯ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸುವರು, ಸಮ್ಮುಖವನ್ನು ವಿರಕ್ತಮಠದ ಸಂಗನಬಸವ ಮಹಾ ಸ್ವಾಮೀಜಿ ವಹಿಸುವರು, ಜಾತ್ರಾ ಮಹೋತ್ಸವ ಅಧ್ಯಕ್ಷತೆಯನ್ನ ಸಮಿತಿ ಗೌರವಾಧ್ಯಕ್ಷ ಮಂಜುನಾಥ ಕುನ್ನೂರ, ಕಾರ್ಯಕ್ರಮ ಉದ್ಘಾಟನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇರವೇರಿಸುವರು, ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಸಮಿತಿ ಅಧ್ಯಕ್ಷ ಭರಮಜ್ಜ ನವಲಗುಂದ, ಕೋಶಾಧ್ಯಕ್ಷ ಟಿ.ವ್ಹಿ.ಸುರಗೀಮಠ, ಉಪಾಧ್ಯಕ್ಷರಾದ ಎಸ್‌.ಪಿ.ಜೋಶಿ, ಸಿದ್ದಾರ್ಥಗೌಡ ಪಾಟೀಲ, ಪಕ್ಕೀರಜ್ಜ ಯಲಿಗಾರ, ಸೇರಿದಂತೆ ಇತರರು ಪಾಲ್ಗೋಳ್ಳುವರು. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಾದ ಸಿದ್ದೇಶ್ವರ ಶಾಸ್ತ್ರೀಗಳಿಂದ ಪ್ರತಿದಿನ ದೇವಿ ಪುರಾಣ ಪ್ರವಚನ ಜರುಗಲಿದೆ, ಸಂಗೀತ ಸೇವೆ ಶಿವಾನಂದ ಮಂದೇವಾಲ, ಬಸವರಾಜ ಚಲಗೇರಿ ತಬಲಾ ಸಾಥ ನೀಡುವರು ಎಂದು ಸಮಿತಿಯ ಸದಸ್ಯರು ಪ್ರಕಟಣೆಗೆ ಕೋರಿದ್ದಾರೆ. 


ಸುದ್ದಿ ಓದಿ