ಬೈಲಹೊಂಗಲ

ಏ.13ರಿಂದ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವ

ಏ.13ರಿಂದ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವ

ಬೈಲಹೊಂಗಲ10: ಪಟ್ಟಣದ ಬಸವ ನಗರದ ಶ್ರೀಮಾತಾ ದುರ್ಗಾಪರಮೇಶ್ವರಿ ದೇವಸ್ಥಾನ ಜಾತ್ರಾ ಮಹೋತ್ಸವ ಏ.13ರಿಂದ 15ರವರೆಗೆ ನೆರವೇರಲಿದೆ. ನಾಡಿನ ವಿವಿಧ ಮಠಾಧೀಶರು, ಸಾಧುಸಂತರು, ಜನಪ್ರತಿನಿಧಿಗಳು, ಅಧಿಕಾರಿಗಳು, ಪ್ರತಿಭಾನ್ವಿತ ಕಲಾವಿದರುಗಳಿಗೆ ಆಮಂತ್ರಣ ನೀಡಲಾಗಿದ್ದು, ಭಕ್ತರ ಆಶಯದಂತೆ ಜಾತ್ರೆಯನ್ನು ವಿಜೃಂಭಣೆಯಿಂದ ನೆರವೇರಿಸಲಾಗುವುದು ಎಂದು ದೇವಸ್ಥಾನ ಧರ್ಮದರ್ಶಿ ಡಾ.ಮಹಾಂತಯ್ಯಶಾಸ್ತ್ರಿ ಅರಾದ್ರಿಮಠ ಹೇಳಿದರು. ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ವಿವಿಧ ಮಠಾಧೀಶರಿಗೆ ನೀಡಿ ಮಾತನಾಡಿದರು.ಕಳೆದ ವರ್ಷ ಕೋವಿಡ್ 19 ಹಿನ್ನಲೆಯಲ್ಲಿ ಜಾತ್ರೆಯನ್ನು ಅನಿವಾರ್ಯ ಕಾರಣದಿಂದ ಕೈ ಬಿಡಲಾಗಿತ್ತು. ಈ ವರ್ಷ ಸರ್ಕಾರದ ನಿರ್ದೇಶನ ಮೇರೆಗೆ, ಭಕ್ತರ ಆಶಯದಂತೆ ದೇವಿ ಜಾತ್ರೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಾತ್ರೆಗೆ ನಾಡಿನ ಹೆಸರಾಂತ ಕಲಾವಿದರು, ಗಾಯಕರು, ಜಗದ್ಗುರುಗಳು, ಮಠಾಧೀಶರು, ಅರ್ಚಕರು, ವೈದಿಕರು ಭಾಗವಹಿಸಲ್ಲಿದ್ದಾರೆ. ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. 500 ಜನ ಮಾಜಿ ಸೈನಿಕರ ದಂಪತಿಗಳಿಗೆ ವಿಶೇಷ ಗೌರವ ಸನ್ಮಾನ, ಈ ವರ್ಷದ ಶಾಂಭವಿ ಪ್ರಶಸ್ತಿಯನ್ನು ಸಂಗೀತ ನಿರ್ದೇಶಕ ಅರ್ಜುನ ಜನ್ಯಾ ಅವರಿಗೆ ನೀಡಲಾಗುತ್ತಿದೆ ಎಂದರು. ಜಾತ್ರಾ ಕಮೀಟಿ ಅಧ್ಯಕ್ಷ ರಾಜು ಕುಡಸೋಮಣ್ಣವರ, ಮಂಜುನಾಥ ಜ್ಯೋತಿ, ಬವರಾಜ ಕಟ್ಟಿಮನಿ, ಭಕ್ತರು ಇದ್ದರು. ಬೈಲಹೊಂಗಲ ಶ್ರೀಮಾತಾ ದುರ್ಗಾಪರಮೇಶ್ವರಿ ದೇವಸ್ಥಾನ ಜಾತ್ರಾ ಮಹೋತ್ಸವದ ಆಮಂತ್ರಣವನ್ನು ಧರ್ಮದರ್ಶಿ ಡಾ.ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಅವರು ಉಜ್ಜೆಯಿನಿ ಶ್ರೀಗಳಿಗೆ ನೀಡಿ ಆಹ್ವಾನಿಸಿದರು.

ಸುದ್ದಿ ಓದಿ