ರಾಣೆಬೆನ್ನೂರ

ದುರ್ಗಾದೇವಿ ಜಾತ್ರಾ ಮಹೋತ್ಸವ ಮೆರಗು ನೀಡಿದ ನಾಸೀಕ್ ಡೋಲು ಕಲಾ ತಂಡ

ದುರ್ಗಾದೇವಿ ಜಾತ್ರಾ ಮಹೋತ್ಸವ ಮೆರಗು ನೀಡಿದ ನಾಸೀಕ್ ಡೋಲು ಕಲಾ ತಂಡ

ರಾಣಿಬೆನ್ನೂರ 16:  ಜಾತ್ರೆ, ಉತ್ಸವ ಹಬ್ಬ ಹರಿದಿನಗಳು ಮತ್ತು ವಿಶೇಷ ಉತ್ಸವದ ಮೆರವಣಿಗೆಗೆ ಜನಪದ ವಾಧ್ಯಗಳು ಅತ್ಯಂತ ಮೆರಗು ನೀಡುವುದರ ಜೊತೆಗೆ ಜಾತ್ರೋತ್ಸವಕ್ಕೆ ವಿಶೇಷತೆ ತರುವ ವಾಧ್ಯ ಮೇಳಗಳಾಗಿವೆ. ಅಂತಹ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿ ಉಳಿಸಿ, ಬೆಳೆಸುವ ಕಾರ್ಯದಲ್ಲಿ ಜಾತ್ರಾ ಸಮಿತಿಗಳು ಸಂಘ ಸಂಸ್ಥೆಗಳು ಮಾಡಲು ಮುಂದಾಗಬೇಕಾದ ಇಂದಿನ ಅಗತ್ಯವಿದೆ ಎಂದು ಶ್ರೀ ದುರ್ಗಾ ದೇವಿ ಜಾತ್ರಾ ಕಮಿಟಿಯ ಅಧ್ಯಕ್ಷ ಆರ್‌.ಕೆ.ನ್ಯಾಮತಿ ಹೇಳಿದರು.  

ಅವರು ರಟ್ಟಿಹಳ್ಳಿ ತಾಲೂಕಿನ ಸರ್ವಜ್ಞನ ಮಾಸೂರು ಕೊಪ್ಪದ ಕೇರಿ ಶ್ರೀ ದುರ್ಗಾ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಕಮಿಟಿ ಆಯೋಜಿಸಿದ್ದ ಶ್ರೀ ದುರ್ಗಾದೇವಿ ಮೂರ್ತಿಯ ಭವ್ಯ ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತೀಯ ಪರಂಪರೆಯಲ್ಲಿ ಯಾವುದೇ ಜಾತ್ರೆ ಉತ್ಸವಗಳಿಗೆ ಡೊಳ್ಳು, ಹಗ್ಗ ಜಗ್ಗಲಿಗೆ, ಬ್ರಾಸ್ ಬಾಂಡ್, ಭಜನೆ, ಜನಪದ ಕಲಾ ತಂಡಗಳು, ಕೋಲಾಟ, ನೃತ್ಯ, ಮತ್ತಿತರ ವೈವಿದ್ಯಮಯ ಸಾಂಸ್ಕೃತಿಕ ಚಟುವಟಿಕೆಗಳು ಜಾತ್ರಗೆ ಪೂರಕವಾಗಿ ತನ್ನ ಪಾರಂಪರಿಕ ವೈಭವ, ಮೆರಗು ನೀಡುತ್ತಲಿದೆ ಎಂದು ಇತಿಹಾಸವನ್ನು ಸ್ಮರಿಸಿ ಮಾತನಾಡಿದ, ನ್ಯಾಮತಿ ಅವರು ಕಲೆ ಮತ್ತು ಕಲಾವಿದರು ಈ ದೇಶದ ಸಂಸ್ಕೃತಿಯ ಹರಿಕಾರರಾಗಿದ್ದಾರೆ ಎಂದರು.  

ಮೆರವಣಿಗೆಯಲ್ಲಿ ಬೆಳಗಿನ ಜಾವದ ವರೆಗೂ ಪಾಲ್ಗೊಂಡಿದ್ದ ಹನುಮಂತಪ್ಪ ಸಾವಕ್ಕನವರ ಅವರ ನಾಸೀಕ್ ಡೋಲು ಕಲಾ ತಂಡ ಮತ್ತು ಜೋಹಿಸರಹಳಹಳ್ಳಳ್ಳಿ ಗ್ರಾಮದ ಕೋಟೇಪ್ಪ ಮ್ಯಾಗೇರಿ, ಅವರ ಭಜಂತ್ರಿ ಮೇಳವು ಜಾತ್ರಾ ಮೆರವಣಿಗೆಗೆ ರಂಗು ನೀಡಿದ್ದವು. ಮರವಣಿಗೆಯುದ್ದಕ್ಕೂ ಕಾರ್ಯದರ್ಶಿ ರೇವಣೆಪ್ಪ ಕೆಂಪರಂಗಪ್ಪನವರ, ಉಪಾಧ್ಯಕ್ಷ ಪುಟ್ಟಪ್ಪ ನೆಗಳೂರು, ಸದಸ್ಯರಾದ ದೇವರಾಜ ಮಾಳಗಿ, ಕಾಳಪ್ಪ ಕಮ್ಮಾರ, ಸುರೇಶ ಬಡಿಗೇರ ಸೇರಿದಂತೆ ಮತ್ತಿತರ ಗಣ್ಯರು, ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು. 


ಸುದ್ದಿ ಓದಿ