ದುರ್ಗಾದೇವಿ ಜಾತ್ರೆ: ಸಂಭ್ರಮದ ಮೆರವಣಿಗೆ, ಕಲಾತಂಡಗಳಿಗೆ ಸನ್ಮಾನ
ಆಲಮೇಲ 06 : ನಗರದಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವ ಭಕ್ತಿ ಹಾಗೂ ಸಂಭ್ರಮದಿಂದ ನಡೆಯಿತು. ದೇವಿ ಗುಡಿ ಆವರಣದಲ್ಲಿ ಭವ್ಯ ಮಂಟಪ ನಿರ್ಮಿಸಿ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ನೈವೇದ್ಯ ಸಮರ್ಿಸಿ ದೇವಿಯ ದರ್ಶನ ಪಡೆದರು. ಕಲಾವಿದರು ದೇವಿಯ ಭಜನೆ ಹಾಗೂ ಭಕ್ತಿಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಬಳಿಕ ದುರ್ಗಾದೇವಿಯ ಭವ್ಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಭಕ್ತರ ಜಯಘೋಷದ ನಡುವೆ ದೇವಾಲಯ ತಲುಪಿತು. ಜಾತ್ರೆಯಲ್ಲಿ 15ರಿಂದ 20 ಕಲಾತಂಡಗಳು ಭಾಗವಹಿಸಿ ಸಾಂಪ್ರದಾಯಿಕ ಕಲೆಗಳನ್ನು ಪ್ರದರ್ಶಿಸಿದವು. ಕಲಾತಂಡಗಳಿಗೆ ಮಾಜಿ ಶಾಸಕ ರಮೇಶ್ ಬೂಸನೂರ ಅವರು 30 ಸಾವಿರ ಪ್ರೋತ್ಸಾಹಧನ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರು, ವ್ಯಾಪಾರಸ್ಥರು ಹಾಗೂ ಗೋಂಧಳಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.