ರಾಷ್ಟ್ರೀಯ

ಪೊಲೀಸ್ ಕಸ್ಟಡಿಯಲ್ಲಿದ್ದ ಡ್ರಗ್ ಪೆಡ್ಲರ್ ಆತ್ಮಹತ್ಯೆ

ಪೊಲೀಸ್ ಕಸ್ಟಡಿಯಲ್ಲಿದ್ದ ಡ್ರಗ್ ಪೆಡ್ಲರ್ ಆತ್ಮಹತ್ಯೆ

ಶ್ರೀನಗರ, ನವೆಂಬರ್ 05: ಬಾರಾಮುಲ್ಲಾದ ಉತ್ತರ ಕಾಶ್ಮೀರ ಜಿಲ್ಲೆಯ ಸೊಪೋರ್‌ನ ಆಪಲ್ ಟೌನ್‌ಶಿಪ್‌ನಲ್ಲಿರುವ ಪೊಲೀಸ್ ಠಾಣೆಯಲ್ಲಿ 28 ವರ್ಷದ ಡ್ರಗ್ ಪೆಡ್ಲರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ. 

ಜಮ್ರೂದ್ ಅಹ್ಮದ್ ಗೊಜ್ರಿ ಎಂದು ಗುರುತಿಸಲ್ಪಟ್ಟ ಯುವಕನನ್ನು ಕಳೆದ ವಾರ ಸೊಪೋರ್‌ನಲ್ಲಿ 200 ಕ್ಯಾಸ್ಸುಲ್ ಆಫ್ ಸ್ಪಾಸ್ಮೋಪ್ರೊವಿಯನ್‌ನೊಂದಿಗೆ ಪೊಲೀಸರು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದರು. 

ಆರೋಪಿಯನ್ನು 2020 ರ ನವೆಂಬರ್ 15 ರವರೆಗೆ ನ್ಯಾಯಾಲಯವು ಮತ್ತೆ ಪೊಲೀಸ್ ಕಸ್ಟಡಿಗೆ ಕಳುಹಿಸಿತ್ತು. ಆದರೆ, ಬುಧವಾರ ರಾತ್ರಿ ಪೊಲೀಸ್ ಠಾಣೆಯಲ್ಲಿ ಲಾಕ್ ಅಪ್ ಒಳಗೆ ಆರೋಪಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಯಿತು.  ಆದರೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿ ಘಟನೆಯ ತನಿಖೆ ಆರಂಭಿಸಿದ್ದಾರೆ. ಎಲ್ಲಾ ಕಾನೂನು ಮತ್ತು ವೈದ್ಯಕೀಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ಶವವನ್ನು ಆತನ ಸಂಬಂಧಿಕರಿಗೆ ಕೊನೆಯ ವಿಧಿಗಳಿಗಾಗಿ ಹಸ್ತಾಂತರಿಸಲಾಗುವುದು ಎಂದು ತಿಳಿದುಬಂದಿದೆ. 

ಸುದ್ದಿ ಓದಿ