ರಾಷ್ಟ್ರೀಯ

ಮಧ‍್ಯ ಕಾಶ್ಮೀರ : ಡ್ರಗ್ ಪೆಡ್ಲರ್ ಬಂಧನ

ಮಧ‍್ಯ ಕಾಶ್ಮೀರ : ಡ್ರಗ್ ಪೆಡ್ಲರ್ ಬಂಧನ

ಶ್ರೀನಗರ, ಸೆ 15: ಮಧ್ಯ ಕಾಶ್ಮೀರ ಜಿಲ್ಲೆಯ ಬದ್ಗಾಂವ್ ನಲ್ಲಿ  ಜಮ್ಮುಕಾಶ್ಮೀರ ಪೊಲೀಸರು ಡ್ರಗ್ ಪೆಡ್ಲರ್ ನನ್ನು ಬಂಧಿಸಿ ನಿಷೇಧಿತ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ವಕ್ತಾರರು ಬುಧವಾರ ತಿಳಿಸಿದ್ದಾರೆ.

ಖಚಿತರ ಮಾಹಿತಿ ಮೇರೆಗೆ ರೂಪೋರಾ ಮತ್ತು ಕಥೈರ್ ಗುಂಡ್ ಕ್ರಾಸಿಂಗ್‌ನಲ್ಲಿ ಸ್ಥಾಪಿಸಿದ್ದ ಚೆಕ್ ಪಾಯಿಂಟ್ ನಲ್ಲಿ ಪೊಲೀಸರು ಓರ್ವ ವ್ಯಕ್ತಿಯೊಂದಿಗೆ ವಾಹನವನ್ನು ತಡೆಹಿಡಿದಿದ್ದರು.

ಆತನನ್ನು ಚಡೂರಾದ ಕುಜ್ವೆರಾ ನಿವಾಸಿ ಯೂನಿಸ್ ಜಬ್ಬರ್ ಎಂದು ಗುರುತಿಸಲಾಗಿದೆ. ವಾಹನವನ್ನು ಶೋಧಿಸಿದ ವೇಳೆ, ಏಳು ಚೀಲಗಳಲ್ಲಿ ಅಡಗಿಸಿಟ್ಟಿದ್ದ 72 ಕೆ.ಜಿ. ಮಾದಕ ಪದಾರ್ಥವನ್ನು ವಶಪಡಿಸಿಕೊಂಡು ಆತನನ್ನು ಬಂಧಿಸಿ ಪೊಲೀಸ್ ಠಾಣೆ ಚಡೂರಾಕ್ಕೆ ಸ್ಥಳಾಂತರಿಸಲಾಗಿದೆ.

"ಸಮಾಜವನ್ನು ಮಾದಕವಸ್ತು ಭೀತಿಯಿಂದ ಮುಕ್ತಗೊಳಿಸಲು ನಾಗರಿಕರ ಸಹಾಯ ಅಗತ್ಯವಿದೆ.  ತಮ್ಮ ನೆರೆಹೊರೆಯಲ್ಲಿ ಡ್ರಗ್ ಪೆಡ್ಲರ್ ಗಳಿದ್ದಲ್ಲಿ ಮಾಹಿತಿ ನೀಡಬೇಕು” ಎಂದು ಪೊಲೀಸ್ ವಕ್ತಾರರು ಮನವಿ ಮಾಡಿದ್ದಾರೆ.

ಸುದ್ದಿ ಓದಿ