ಬರಗಾಲ ಪೀಡಿತ ತಾಲೂಕು ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸಬೇಕು: ವರುಣಗೌಡ್ರ
ಶಿಗ್ಗಾವಿ 11: ತಾಲೂಕಿನಲ್ಲಿ ಬರದಛಾಯೆ ಆವರಿಸಿದ್ದು ಸಮರ್ಕ ಮಳೆಯಿಲ್ಲದೆ ಈ ವರ್ಷ ವಾಡಿಕೆಯ ಮಳೆ ಬಿದ್ದಿಲ್ಲ ಆದ್ದರಿಂದ ತಾಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ ರಾಜ್ಯ ಸರ್ಕಾರಕೂಡಲೇ ಬರಗಾಲ ಪೀಡಿತ ತಾಲೂಕು ಘೋಷಣೆ ಮಾಡಿರೈತರ ನೆರವಿಗೆ ಧಾವಿಸಬೇಕು ಎಂದುರೈತ ಸೇನಾ ಕರ್ನಾಟಕ ಹಾವೇರಿ ಜಿಲ್ಲಾಅಧ್ಯಕ್ಷ ವರುಣಗೌಡ್ರ ಪಾಟೀಲ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜೂನ್ ತಿಂಗಳಿನಲ್ಲಿ ಮುಂಗಾರು ಪ್ರವೇಶಿಸಬೇಕಿತ್ತು ಆದರೆ ಜುಲೈ ತಿಂಗಳಲ್ಲಿ ಮಳೆಯಾಗಿದ್ದು ಕೆಲ ರೈತರು ಎರಡೆರಡು ಬಾರಿ ಬಿತ್ತನೆ ಮಾಡಿದ್ದು ಮತ್ತೆ ವರುಣ ಕೈಕೊಟ್ಟಿದ್ದು, ಮಳೆಯನ್ನು ನಂಬಿ ರೈತರು ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿ ಕೀಟ ನಾಶಕ ಕಳೆನಾಶಕ ನಿರ್ವಹಣೆ ಮಾಡಿದ್ದರು ಮಳೆ ಮಾತ್ರ ಸಮರಾ್ವಗಿ ಬರುತ್ತಿಲ್ಲ ಇದರಿಂದ ತಾಲೂಕಿನ ರೈತ ಸಮುದಾಯ ತೀವ್ರ ಆತಂಕದ ಸ್ಥಿತಿಯಲ್ಲಿದೆ ರೈತರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಸರ್ಕಾರ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮಳೆ ಬಾರದೇ ಇರುವುದರಿಂದ ಜನ, ಜಾನವಾರುಗಳು ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿವೆ. ಸರ್ಕಾರವು ಜಾನುವಾರುಗಳಿಗೆ ಮೇವನ್ನು ನೀಡುವ ರೈತರಿಗೆ ಮೇವು ಕಡಿಮೆ ಅವಧಿಯಲ್ಲಿ ಸಿಗುವ ಬೀಜಗಳನ್ನು ನೀಡುವ ಕಾರ್ಯ ಮಾಡಬೇಕು ಅಲ್ಲದೇ ಬೆಳೆ ವಿಮೆ ಕಂಪನಿಯವರು 25ಅ ಪ್ರತಿಶತ ಹಾನಿಯನ್ನು ರೈತರಿಗೆ ನೀಡಬೇಕು. ಹಾನಿಕೊಂಡಿರುವ ಬೆಳೆಯ ಸಂಪೂರ್ಣ ಮಾಹಿತಿರೈತ ಸಂಪರ್ಕ ಕೇಂದ್ರದ ಮೂಲಕ ಸಮಿಕ್ಷೆ ಮಾಡಿ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.