ಬೈಲಹೊಂಗಲ

ಬೆಂಬಲ ಬೆಲೆಯಡಿ ಖರೀದಿ ಪ್ರಕ್ರಿಯೆಗೆ ಚಾಲನೆ

ಬೆಂಬಲ ಬೆಲೆಯಡಿ ಖರೀದಿ ಪ್ರಕ್ರಿಯೆಗೆ ಚಾಲನೆ

ಬೈಲಹೊಂಗಲ : ತಾಲೂಕಿನ ದೊಡವಾಡ ಗ್ರಾಮದ ಸಂಗಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸರಕಾರದ  ಬೆಂಬಲ ಬೆಲೆಯಡಿ ತೆರೆಯಲಾಗಿರುವ ಕಡಲೆ ಕಾಳು ಹಾಗೂ ಬಿಳಿ ಜೋಳದ ಖರೀದಿ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡಲಾಯಿತು.ಸಂಘದ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ ಮಾತನಾಡಿ, ಕಡಲೆ ಕಾಳು  ಪ್ರತಿ ಕ್ವಿಂಟಲಗೆ 5100 ರೂ. ದರದಂತೆ ಪ್ರತಿ ಖಾತೆಗೆ 15 ಕ್ವಿಂಟಲ್ ಮಿತಿ ಮತ್ತು ಬಿಳಿ ಜೋಳ ಪ್ರತಿ ಕ್ವಿಂಟಲಗೆ 2640 ರೂ.ದರದಂತೆ ಪ್ರತಿ ಕಾತೆಗೆ 75 ಕ್ವಿಂಟಲ್ ಮಿತಿಯಲ್ಲಿ ಖರೀದಿಸಲಾಗುತ್ತಿದೆ. ಗ್ರಾಮೀಣ ಭಾಗದ ರೈತರು ಇದರ ಪ್ರಯೋಜನ ಪಡೆಯಬೇಕೆಂದರು.ತಾಲೂಕು ಸಹಾಯಕ ಕೃಷಿ ಅಧಿಕಾರಿ ಎಚ್.ಎಸ್.ಮಾಳಗಿ, ಸಂಘದ ಉಪಾಧ್ಯಕ್ಷ ಉದಯ ಕೊಟಬಾಗಿ, ನಿರ್ದೇಶಕರಾದ ನಾಗಪ್ಪ ಸವದತ್ತಿ, ವಿಠ್ಠಲ ಗಾಬಿ, ಈಶ್ವರ ಅಂದಾನಶೆಟ್ಟಿ, ಮಡಿವಾಳಪ್ಪ ವಿಭೂತಿ,  ಲಕ್ಕಪ್ಪ ಅಲಕ್ಕನವರ ಹಾಗೂ ಸಿಇಓ ಎಮ್.ಎಸ್.ಶಿಂಧೆ, ಸಿಬ್ಬಂದಿ ಮಡಿವಾಳಪ್ಪ ಭದ್ರಶೆಟ್ಟಿ ಇದ್ದರು.ಬೈಲಹೊಂಗಲ ತಾಲೂಕಿನ ದೊಡವಾಡ ಪಿಕೆಪಿಎಸ್ ನಲ್ಲಿ ಕಡಲೆ ಕಾಳು ಹಾಗೂ ಬಿಳಿಜೋಳ ಖರೀದಿ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆಗೆ ಮಂಗಳವಾರ ಚಾಲನೆ ನಿಡಲಾಯಿತು.

ಸುದ್ದಿ ಓದಿ