ಬೈಲಹೊಂಗಲ

ಸಂಗೀತಾಸಕ್ತ ಗಾಯಕರ ಆಡೀಶನ್‍ಗೆ ಚಾಲನೆ

ಸಂಗೀತಾಸಕ್ತ ಗಾಯಕರ ಆಡೀಶನ್‍ಗೆ ಚಾಲನೆ

ಬೈಲಹೊಂಗಲ 4:  ತಾಲೂಕಿನ ಬೆಳವಡಿ ಮಲ್ಲಮ್ಮನ ಉತ್ಸವ ನಿಮಿತ್ತವಾಗಿ ಇಲ್ಲಿನ ಶಾರದಾ ಸಂಗೀತ ಪಾಠಶಾಲೆ ಹಾಗೂ ಭವಾನಿ ಮೆಲೋಡೀಸ್ ವತಿಯಿಂದ ಆಯೋಜಿಸಲಾಗಿರುವ ವಾಯ್ಸ್ ಆಫ್ ಬೆಳವಡಿ ಸಂಗೀತ ಗಾಯನ ಸ್ಪರ್ಧೆಯು ಬುಧವಾರ ವಿವಿಧ ಭಾಗಗಳ ಸಂಗೀತಾಸಕ್ತ ಗಾಯಕರ ಆಡೀಶನ್‍ಗೆ ಚಾಲನೆ ನೀಡಲಾಯಿತು.

ಗ್ರಾಪಂ ಸದಸ್ಯ ಬಸಯ್ಯಸ್ವಾಮಿ ವಿರಕ್ತಮಠ ಸಾನಿಧ್ಯ ವಹಿಸಿದ್ದರು. ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರ ಕರೀಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಸಂಗೀತ ಗಾಯನ ಹಾಗೂ ಟ್ರ್ಯಾಕ್ ಸಿಂಗಿಂಗ್ ಸ್ಪರ್ಧೆಗಳು ಇತ್ತೀಚೆಗೆ ಹಳ್ಳಿ ಹಳ್ಳಿಗೂ ವ್ಯಾಪಿಸಿ ನೂರಾರು ಪ್ರತಿಭಾನ್ವಿತ ಸಂಗೀತ ಸಾಧಕರು ಹುಟ್ಟುವಂತಾಗಿದೆ. ವೀರ ರಾಣಿ ಬೆಳವಡಿ ಮಲ್ಲಮ್ಮನ ಐತಿಹಾಸಿಕ ನಾಡಿನಲ್ಲಿ ಈ ಸಂಗೀತ ಸ್ಪರ್ಧೆ ನಡೆಯುತ್ತಿರುವುದು ಅಭಿಮಾನದ ಸಂಗತಿ. ಇಲ್ಲಿ ಭಾಗವಹಿಸುವ ಸಂಗೀತ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಲಿ ಎಂದರು. 

ವೇದಿಕೆ ಮೇಲೆ ಉತ್ತರ ಕರ್ನಾಟಕ ಜಾನಪದ ಕಲಾವಿದ ಬಸವರಾಜ ನರೇಂದ್ರ ಡಾ.ಎ.ಬಿ.ಪಾಟೀಲ, ಉದಯ ಚಿಕ್ಕಮಠ, ಈರಣ್ಣ ಕರೀಕಟ್ಟಿ, ವೀರೇಶ ಕಾಡೆಶನವರ ಇದ್ದರು.

ಗದಗ, ಧಾರವಾಡ, ಹಾವೇರಿ, ಬೆಳಗಾವಿ, ಬಾಗಲಕೋಟಿ ಸೇರಿದಂತೆ ವಿವಿದ ಜಿಲ್ಲೆಗಳ ಸಂಗೀತಾಸಕ್ತ ಸ್ಪರ್ಧಿಗಳು ಆಡಿಶನ್ ನಲ್ಲಿ ಭಾಗವಹಿಸಿದ್ದರು.

ಸಂಘಟಕರಾದ ಸಚಿನ ಹುಂಬಿ, ಸಂಕೇತ ಬಡಿಗೇರ, ಫಕ್ಕೀರ ಉಳ್ಳಿಗೇರಿ, ವಿಠ್ಠಲ ತುರಾಯಿ, ಶ್ರೀಮಂತ ಬಡಿಗೇರ, ಮಂಜುನಾಥ ಮುರಗೋಡ, ಪ್ರಜ್ವಲ ಹೊಸಮಠ, ಅನಿಲ ಕರೀಕಟ್ಟಿ ಉಪಸ್ಥಿತರಿದ್ದರು. ಬಾಬು ಖಂಡೋಜಿ ನಿರೂಪಿಸಿ ವಂದಿಸಿದರು.

ಸುದ್ದಿ ಓದಿ