ರಾಣೆಬೆನ್ನೂರ

120 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

120 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ರಾಣೇಬೆನ್ನೂರ 27: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅ.28 ರಂದು ನಗರಕ್ಕೆ ಆಗಮಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿ ದ್ದಾರೆಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. 

ನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಅಂದು ಮಧ್ಯಾಹ್ನ 1 ಗಂಟೆಗೆ ನಗರ ದ ಹೊರವಲಯದಲ್ಲಿ ಹೆಲಿಪ್ಯಾಡ ನಲ್ಲಿ ಬಂದಿಳಿದು ಅನಂತರ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಯಲ್ಲಿ ಪಾಲ್ಗೊಳ್ಳುವರು ಎಂದರು. 

ಅಂದಾಜು 116 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾ ಗಿರುವ 24*7 ನಿರಂತರ ನೀರು ಸರಬ ರಾಜು ಯೋಜನೆ ಹಾಗೂ ನೀರು ಶುದ್ಧೀಕರಣ ಘಟಕವನ್ನು ಉದ್ಘಾ ಟಿಸುವರು. ಇದೇ ಸಂದರ್ಭದಲ್ಲಿ 6ಕೋಟಿ ರೂ.ವೆಚ್ಚದಲ್ಲಿ ಎಪಿಎಂಸಿ ಯಲ್ಲಿ ನಿರ್ಮಿಸಿರುವ ಸಮುದಾಯ ಭವನ, ನಗರಸಭೆಯ ನವೀಕರಣ ಗೊಂಡ ಭವನ, ರೈತ ಸಂಪರ್ಕ ಕೇಂದ್ರ, ಅಂಗನ ವಾಡಿ, ಶಾಲಾ ಕಟ್ಟಡ, ಕುಪ್ಪೇಲೂರ ಪ್ರಾಥಮಿಕ ಆರೋಗ್ಯ ಕೇಂದ್ರ, ಕಮದೋಡ, ಚಳಗೇರಿ, ಕರೂರು ಮತ್ತು ನಗರದ ದೊಡ್ಡಕೆರೆಗಳಿಗೆ ನೀರು ತುಂಬಿ ಸುವ,ಪಿಯು ಕಾಲೇಜ, ಜಲಜೀವನ ಮಿಷನ್, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಗಳನ್ನು ಮುಖ್ಯಮಂತ್ರಿ ಗಳು ಉದ್ಘಾಟಿಸಲಿದ್ದಾರೆ ಎಂದರು. 

ಸಚಿವರಾದ ಬಿ.ಸಿ. ಪಾಟೀಲ, ಬೈರತಿ ಬಸವರಾಜ, ಎಸ್‌.ಟಿ. ಸೋಮಶೇಖರ, ಗೋವಿಂದ ಕಾರಜೋಳ, ಎಂಟಿಬಿ ನಾಗರಾಜ ಸೇರಿದಂತೆ ಮತ್ತಿರರು ಆಗಮಿಸುವುರೆಂದು ಅವರು ತಿಳಿಸಿದರು.  ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ,  ನಗರಯೋಜನ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಸಾರಿಗೆ ಸಂಸ್ಥೆ ನಿರ್ದೇಶಕ ಸಂತೋಷ ಕುಮಾರ ಪಾಟೀಲ, ನಗರಸಭೆ ಸದಸ್ಯರಾದ ಗಂಗಮ್ಮ ಹಾವನೂರ, ಮಲ್ಲಣ್ಣ ಅಂಗಡಿ, ಮಂಜುಳಾ ಹತ್ತಿ, ಪ್ರಕಾಶ ಪೂಜಾರ, ನಾಗರಾಜ ಪವಾರ, ನ್ಯಾಯವಾದಿಗಳಾದ ಎಸ್‌.ಎಸ್‌. ರಾಮಲಿಂಗಣ್ಣನವರ, ಮಂಜುನಾಥ ಓಲೇಕಾರ, ಕೆ. ಶಿವಲಿಂಗಪ್ಪ, ದೀಪಕ್ ಹರಪನ ಹಳ್ಳಿ, ಬಸವ ರಾಜ ಚಳಗೇರಿ, ಸಿದ್ದು ಚಿಕ್ಕಬಿದರಿ ಸೇರಿದಂತೆ ಮತ್ತಿತರರು ಇದ್ದರು. 


ಸುದ್ದಿ ಓದಿ