ಚಿಕ್ಕೋಡಿ

ಧುಳಗನವಾಡಿಯಲ್ಲಿ ಕೋವಿಡ್ ಲಸಿಕೆಗೆ ಚಾಲನೆ

ಧುಳಗನವಾಡಿಯಲ್ಲಿ ಕೋವಿಡ್ ಲಸಿಕೆಗೆ ಚಾಲನೆ
ಚಿಕ್ಕೋಡಿ: ತಾಲೂಕಿನ ಧುಳಗನವಾಡಿ ಗ್ರಾಮದಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ರಾವಣ್ಣ ಖೋತ ಚಾಲನೆ ನೀಡಿದರು

ಚಿಕ್ಕೋಡಿ 23: ತಾಲೂಕಿನ ಧುಳಗನವಾಡಿ ಗ್ರಾಮದಲ್ಲಿ ಬ್ರಹ್ಮದೇವರ ದೇವಾಲಯದ ಆವರಣದಲ್ಲಿ ಗ್ರಾಮಸ್ಥರಿಗೆ ಕೋವಿಡ್‌-19 ಲಸಿಕೆ ಹಾಕಿಸುವ ಕಾರ್ಯಕ್ರಮ ಜರುಗಿತು.  

ಗ್ರಾಮದ ಹಿರಿಯರಾದ ರಾವಣ್ಣ ಖೋತ ಇವರು ಜ್ಯೋತಿ ಬೆಳಗಿಸಿ ಸ್ವತಃ ಲಸಿಕೆಯನ್ನು ಹಾಕಿಸಿಕೊಂಡು ಮಾತನಾಡಿದ ಅವರು, ಇತ್ತಿಚೆಗೆ ಕೊರೊನಾ ವೈರಸ್ ಎರಡನೆ ಅಲೆಯಲ್ಲಿ ಜನಸಮೂಹದಲ್ಲಿ ಕಾಣಿಸಿಕೊಳ್ಳುತ್ತಿದ್ದು ಪ್ರತಿಯೊಬ್ಬರು ಮುಂಜಾಗ್ರತೆ ಎಚ್ಚರ ವಹಿಸಿ ಸಾಮಾಜಿಕ ಅಂತರ ಕಾಯ್ದು ಕಡ್ಡಾಯವಾಗಿ ಮಾಸ್ಕ ಧರಿಸಬೇಕೆಂದರು. 

ಮೇಲ್ವಿಚಾರಕಿ ಲತಾ ಬಿ. ಚೌಗಲಾ ಮಾತನಾಡಿ ಪ್ರತಿಯೊಬ್ಬರು ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು ಮತ್ತು ಮಹಾಮಾರಿ ಕೋರೊನ ದೂರ ಮಾಡಲು ಈ ಲಸಿಕೆ ಹಾಕಿಸಿಕೊಳ್ಳಲು ಯಾರು ಹಿಂಜರಿಯಬೇಡಿ ಎಲ್ಲರೂ ಕೈ ಜೋಡಿಸಿ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಬೇಕೆಂದರು.  

ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಎಸ್‌. ಎಮ್‌. ದಾವಣೆ ಗ್ರಾಮಸ್ಥರಿಗೆ ಲಸಿಕೆ ನೀಡಿದರು. ಶಿಬಿರದಲ್ಲಿ ಆಶಾಕಾರ್ಯಕರ್ತರಾದ ರೀನಾ ಖಿಲಾರೆ, ಸವಿತಾ ಕಡಗಾಂವೆ, ನೀತಾಶ್ರೀ ಕಡಗಾಂವೆ, ಅಂಗನವಾಡಿ ಕಾರ್ಯಕರ್ತರಾದ ಸುರೇಖಾ ಮಗದುಮ್ಮ, ಶೋಭಾ ಚಿಕ್ಕೋಡೆ ಉಪಸ್ಥಿತರಿದ್ದರು. ರಾಣಿ ಮಾನೆ ಸ್ವಾಗತಿಸಿದರು, ಅರುಣಾ ಚಿಕ್ಕೋಡೆ ವಂದಿಸಿದರು. 


ಸುದ್ದಿ ಓದಿ