ವಿವಿಧ ಕಾಮಗಾರಿಗಳಿಗೆ ಶಾಸಕ ಕೌಜಲಗಿ ಚಾಲನೆ
ಬೈಲಹೊಂಗಲ 21: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸರಕಾರದ ಮೇಲೆ ಒತ್ತಡ ತಂದು ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸಲಾಗುವದು ಎಂದು ಶಾಸಕ ಮಹಾಂತೇಶ್ ಕೌಜಲಗಿ ಹೇಳಿದರು.
ಅವರು ಸಮೀಪದ ಕರೀಕಟ್ಟಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಸಮಾರಂಭ ನೆರವೇರಿಸಿ, ಮಾತನಾಡಿ, ಗ್ರಾಮದ ಶ್ರೀ ಸಿದ್ಧ ಬಸವೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ 7 ಲಕ್ಷ ರೂ. ಗ್ರಾಮದೇವತೆಯ ದೇವಸ್ಥಾನದ ಅಭಿವೃದ್ದಿಗೆ 15 ಲಕ್ಷ ರೂ. ಪ್ರತಿ ಮನೆ ಮನೆಗೆ ಕುಡಿಯುವ ನೀರನ್ನು ಪೂರೈಸುವ ನಿಟ್ಟಿನಲ್ಲಿ ಜಲ ಜೀವನ ಮಶಿನ ಸೌಲಭ್ಯದಡಿಯಲ್ಲಿ 1 ಕೋಟಿ 92 ಲಕ್ಷ ರೂ. ಯೋಜನೆಗಳು ಜರುಗಲಿದ್ದು, ಗ್ರಾಮಸ್ಥರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಮಹಾರಾಜ ಹಂಜಗಿ, ಸಯ್ಯದ್ ಮೆಣಸಿನಕಾಯಿ, ಮುದುಕಪ್ಪ ಚವಾಣ, ಈರಪ್ಪ ವಿಜಾಪೂರ, ಅಪ್ಪಣ್ಣ ಕಿತ್ತೂರ, ಶಿವಾನಂದ ಹೊಂಗಲ, ಶಶಿಧರ ಮಟ್ಟಿ, ಅಶೋಕ ಉಪ್ಪಾರ. ಸಂಜೀವ ವಗ್ಗಣವರ,
ಜವಾಹರ ಉಪ್ಪಾರ, ಮುದಕಪ್ಪ ಕಡಕೋಳ, ಪುಂಡಲೀಕ ಗರಗದ, ಹಣಮಂತ ಹಕ್ಕಿ, ಶಿವಪ್ಪ ಮುದ್ದನಗೌಡರ, ರುದ್ರಪ್ಪ ಕರೀಕಟ್ಟಿ, ರುದ್ರಪ್ಪ ಹನಸಿ, ಸುಕ್ಕಪ್ಪ ದೊಡವಾಡ, ಅಪ್ಪಣ್ಣ ಹಂಜಗಿ, ಆನಂದ ಕಾಡನ್ನವರ, ಮನೋಹರ ವಿಭೂತಿ, ಚoಬಣ್ಣ ಮಟ್ಟಿ ಗ್ರಾಮಸ್ಥರು ಇದ್ದರು.