ಚಿಕ್ಕೋಡಿ

ಪ್ರಸಕ್ತ ಸಾಲಿನ ಕಬ್ಬು ಅರಿಯುವ ಹಂಗಾಮಿಗೆ ಚಾಲನೆ

ಪ್ರಸಕ್ತ ಸಾಲಿನ ಕಬ್ಬು ಅರಿಯುವ ಹಂಗಾಮಿಗೆ ಚಾಲನೆ

ಮಾಂಜರಿ 12:  ಬೆಳಗಾವ್ ಬಿಜಾಪುರ್ ಬಾಗಲಕೋಟ ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯದ ಕೆಲವು ಪ್ರದೇಶಗಳಲ್ಲಿ ನೆರೆಹಾವಳಿ ಅತಿವೃಷ್ಟಿ ಹಾಗೂ ಇನ್ನಿತರ ಕಾರಣಗಳಿಂದ ಕಬ್ಬು ಬೆಳೆ ಕಡಿಮೆಯಾಗಿದೆ, ಆದರೂ ಕೂಡ ಪ್ರಸಕ್ತ  ಸಾಲಿನಲ್ಲಿ ಶಿವಶಕ್ತಿ ಸಕ್ಕರೆ ಕಾರ್ಖಾನೆಯೂ ಸುಮಾರು 30 ಲಕ್ಷ ಟನ್ ಕಬ್ಬು ನುರಿಯುವ ಗುರಿ ಹೊಂದಲಾಗಿದೆ ಎಂದು ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆಯ ಮಾಲೀಕ ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಡಾ ಪ್ರಭಾಕರ್ ಕೋರೆ ಇವರು ಹೇಳಿದರು ಅವರು ಎಂದು ರಾಯಬಾಗ್ ತಾಲೂಕಿನ ಸೌಂದತ್ತಿ ಗ್ರಾಮದ ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಹಂಗಾಮಿನ ಬಾಯ್ಲರ್ ಅಗ್ನಿ ಪ್ರದೀಪನ ಹಾಗೂ ಕಬ್ಬ ಮುರಿಯುವ  ಹಂಗಾಮಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. 

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಿಡಸೋಶಿ ಪರಮಪೂಜ್ಯ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿಗಳು ವಹಿಸಿದ್ದರು ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸಕ್ಕರೆ ಕಾರ್ಖಾನೆಯ ಮಹಾಮಂಡಲ ನವದೆಹಲಿಯ ನಿರ್ದೇಶಕರಾದ ಅಮಿತ್ ಕೋರೆ ಶ್ರೀಮತಿ ಆಶಾ ತಾಯಿ ಕೋರೆ ದೀಪತಿ   ಕೋರೆ ಆರಾಧ್ಯ ರಾಯಬಾಗ್ ಶಾಸಕ ದುರ್ಯೋಧನ ಐಹೊಳೆ ವಿಧಾನಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ್ ಕಮಟಗಿಮಠ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕೋರೆ ಉಪಾಧ್ಯಕ್ಷರಾದ ತಾತ್ಯಾಸಾಹೇಬ್ ಕಾಟೇ ನಿರ್ದೇಶಕರಾದ ಬನವನೇ ಹಾಜರಿದ್ದರು ಪ್ರಸಕ್ತ ಸಾಲಿನ ಕಬ್ಬು ಅರಿಯುವ  ಹಂಗಾಮಣ ಪ್ರಾರಂಭದಲ್ಲಿ  ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆಯ ಕಾರ್ಯಾಲಯ ಮುಖ್ಯಸ್ಥರಾದ ಬಿ ಎ ಪಾಟೀಲ್ ಮತ್ತು ಅವರ ಧರ್ಮಪತ್ನಿಯ ಹಸ್ತದಿಂದ ಹೋಂ ವಾಹನ ಮತ್ತು ಪೂಜಾ ಸಮಾರಂಭವನ್ನು ನೆರವೇರಿಸಲಾಯಿತು ಕಾರ್ಖಾನೆಯ ಕಾರ್ಯಕ್ಷೇತ್ರದಲ್ಲಿ ಉತ್ತಮವಾದ ಕಬ್ಬು ಬೆಳೆಯುವದರಿಂದ ಈ ವರ್ಷ ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆಯ ಹೆಚ್ಚಿನ ಕಬ್ಬ ಅರಿಯುವ ಗುರಿಯನ್ನು ಹೊಂದಲಾಗಿದ್ದು ಇದಕ್ಕಾಗಿ ಕಾರ್ಖಾನೆಯ ಕಾರ್ಯಕ್ಷೇತ್ರದ ಎಲ್ಲ ಕಬ್ಬು ಬೆಳೆಗಾರ ರೈತರು ತಮ್ಮ ಹೊಲಗದ್ದೆಗಳಲ್ಲಿ ಬೆಳೆದ ಕಬ್ಬನ್ನು ನಮ್ಮ ಸಕ್ಕರೆ ಕಾರ್ಖಾನೆಗೆ ನೀಡಿ ಸಹಕರಿಸಬೇಕೆಂದು ಅವರು ಕರೆ ಮಾಡಿದರು ಇದೇ ವೇಳೆ ಸಕ್ಕರೆ ಕಾರ್ಖಾನೆಯ ಆವರನಲ್ಲಿ ಅತ್ಯಾಧುನಿಕವಾದ ಕಬ್ಬು ತೂಕದ ಯಂತ್ರವನ್ನು ಡಾ ಪ್ರಭಾಕರ್ ಕೋರೆ ಪರಮಪೂಜ್ಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಗಳು ಅಮಿತ್ ಕೋರೆ ಹಾಗೂ ಇನ್ನಿತರ ಗಣ್ಯರ ಹಸ್ತದಿಂದ ಉದ್ಘಾಟಿಸಲಾಯಿತು. 

 ಈ ಕಾರ್ಯಕ್ರಮಕ್ಕೆ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಅಜಿತ್ ರಾವ್ ದೇಸಾಯಿ ಅನ್ನ ಸಾಹೇಬ್ ಪಾಟೀಲ್ ಚೇತನ್ ಪಾಟೀಲ್ ಅನ್ನ ಸಾಹೇಬ್ ಇಂಗಳೇ ಮಹಾವೀರ ಮಿರ್ಜಿ ಮಹಾವೀರ ಕಾತ್ರಾಳೆ ಭರಮಗೌಡ ಪಾಟೀಲ್ ಮಲ್ಲಪ್ಪ ಮೈಶಾಳೆ ಅಂಕಲಿಯ ಸುರೇಶ್ ಪಾಟೀಲ್ ತುಕಾರಾಂ ಪಾಟೀಲ್ ಪಿಂಟು ಹಿರೇಕುರುಬರ್ ಡಾಕ್ಟರ್ ಸುಕುಮಾರ್ ಚೌಗುಲೆ ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆ ಎಲ್ಲ ವಿಭಾಗಗಳ ಮುಖ್ಯಸ್ಥ ಹಾಗೂ ಕಾರ್ಮಿಕ ವರ್ಗದವರು ಹಾಜರಿದ್ದರು. 


ಸುದ್ದಿ ಓದಿ