ಸಿರುಗುಪ್ಪ

ವಿದ್ಯಾರ್ಥಿಗಳ ಸೈಕಲ್ ಜಾಥಾಕ್ಕೆ ಚಾಲನೆ

ವಿದ್ಯಾರ್ಥಿಗಳ ಸೈಕಲ್ ಜಾಥಾಕ್ಕೆ ಚಾಲನೆ

ಸಿರುಗುಪ್ಪ 10: 18 ವರ್ಷ ಮೇಲ್ಪಟ್ಟವರ ನೋಂದಣಿಗೆ ಅವಕಾಶ, ಮತದಾನ ಗುರುತಿನ ಚೀಟಿ ಪಡೆಯಲು ವಿದ್ಯಾರ್ಥಿಗಳ ಸೈಕಲ್ ಜಾಥಾಕ್ಕೆ ತಹಸೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ಚಾಲನೆ. ಸಿರುಗುಪ್ಪ ಸದೃಢ ಪ್ರಜಾಪ್ರಭುತ್ವದ ನಿರ್ಮಾಣಕ್ಕೆ ದೇಶದ ಅಭಿವೃದ್ಧಿಗೆ ಪವಿತ್ರ ಹಕ್ಕನ್ನು ಚಲಾಯಿಸಲಿಕ್ಕೆ 18 ವರ್ಷ ಪೂರೈಸಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು ಎಂದು ತಹಸೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ಅವರು ನಗರದ ತಾಲ್ಲೂಕು ಕ್ರೀಡಾ ಮೈದಾನದಲ್ಲಿ ಮತದಾರರ  ಸಂಕ್ಷಿಪ್ತ ಪಟ್ಟಿ ಪರಿಷ್ಕರಣೆ ಬುಧವಾರ ಹಮ್ಮಿಕೊಂಡ ಸೈಕಲ್ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿ, ಹೆಸರು ನೋಂದಾಯಿಸಿಕೊಳ್ಳಲು ಈಗ ವರ್ಷಕ್ಕೆ 4ಬಾರಿ ಅವಕಾಶ ಯಾವುದೇ ಮತದಾರರು ಮತದಾನದಿಂದ ಹೊರಗುಳಿಯ  ಬಾರದು ಎಂಬ ಸದುದ್ದೇಶದಿಂದ ಒದಗಿಸಲಾಗುತ್ತದೆ ಎಂದರು. 

ತಾಲ್ಲೂಕ್ ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಮಡಗಿನ ಬಸಪ್ಪ ಮಾತನಾಡಿದರು. ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ ಈರಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ ಡಿ ಭಜಂತ್ರಿ, ಸಹಾಯಕ ಕೃಷಿ ನಿರ್ದೇಶಕ ಎಸ್ ಬಿ ಪಾಟೀಲ್, ಜಿಲ್ಲಾ ಸಾಕ್ಷರತಾ ಸಮಿತಿ ಕಾರ್ಯಕಾರಿ ಸದಸ್ಯ ಸಾಮಾಜಿಕ ಕಾರ್ಯಕರ್ತ ಎ ಅಬ್ದುಲ್ ನಬಿ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ