ರಾಣೆಬೆನ್ನೂರ

ದೇಶಿಯ ಆಕಳು ಮತ್ತು ಕರುಗಳ ಪ್ರದರ್ಶನಕ್ಕೆ ಚಾಲನೆ

ದೇಶಿಯ ಆಕಳು ಮತ್ತು ಕರುಗಳ ಪ್ರದರ್ಶನಕ್ಕೆ ಚಾಲನೆ

ರಾಣಿಬೆನ್ನೂರ 18:  ಹೈನುಗಾರಿಕೆಯಂತಹ ಉಪಕಸುಬು ಜೊತೆ ಕೃಷಿ ಮಾಡಿದಾಗ ರೈತರು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವ ಆರ್.ಶಂಕರ ಹೇಳಿದರು.

ತಾಲೂಕಿನ ಇಟಗಿ ಗ್ರಾಮದ ಗ್ರಾಪಂ ಆವರಣದಲ್ಲಿ ಜಿಪಂ, ತಾಪಂ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ ಇಟಗಿ ಆಶ್ರಯದಲ್ಲಿ ನಡೆದ ಮಿಶ್ರತಳಿ ಮತ್ತು ದೇಶಿಯ ಆಕಳು ಮತ್ತು ಕರುಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹೈನುಗಾರಿಕೆಯಲ್ಲಿ ಬರುವ ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡೆಸಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದರು.

ಶಾಸಕ ಅರುಣಕುಮಾರ ಪೂಜಾರ, ಧಾರವಾಡ ಕೆಎಂಫ್ ಅಧ್ಯಕ್ಷ ಬಸವರಾಜ ಅರಬಗೊಂಡ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಡಿ.ಸಿ ಮಾತನಾಡಿದರು. 

ಗ್ರಾಪಂ ಅಧ್ಯಕ್ಷೆ ಮಮತಾ ಕಮದೋಡ, ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ಜಿಪಂ ಸದಸ್ಯೆ ಮಂಗಳಗೌರಿ ಪೂಜಾರ, ಎಸ್.ಎಸ್. ರಾಮಲಿಂಗಣ್ಣನವರ, ಶಿವಾನಂದ ಕನ್ನಪ್ಪಳವರ, ಗಿರಿಜವ್ವ ಬ್ಯಾಲದಹಳ್ಳಿ, ಜೋಳಪ್ಪ ಕಸವಾಳ, ಕರಿಯಪ್ಪ ತೋಟಗೇರ, ರಾಜೇಂದ್ರ ಬಸೇನಾಯ್ಕರ,  ಡಾ. ನರೇಂದ್ರನಾಥ ಚೌಡಾಳ, ಡಾ. ಸುಮಂತಕುಮಾರ ಬಿ.ಕೆ, ಡಾ.ರಾಘವೇಂದ್ರ ಕಿತ್ತೂರ, ಡಾ. ರಂಗನಾಥ ಗುಡಿಸಾಗರ, ಡಾ. ಉಮೇಶ ಹೊನ್ನತ್ತಿ, ಡಾ. ಖಜಾ ನಿಜಾಮುದ್ದೀನ್, ಡಾ. ಪ್ರವೀಣ ಮರಿಗೌಡರ, ಡಾ. ನೀಲಕಂಠ ಅಂಗಡಿ, ಫಕ್ಕೀರಗೌಡ ರಾಮಲಿಂಗಣ್ಣನವರ, ಸುಭಾಸಗೌಡ ಕರೇಗೌಡರ ಇದ್ದರು.

ಸುದ್ದಿ ಓದಿ