ಶಿಗ್ಗಾವ್

ಸ್ವಚ್ಛತಾ ಈ ಸೇವಾ ಕಾರ್ಯಕ್ರಮಕ್ಕೆ ಚಾಲನೆ

ಸ್ವಚ್ಛತಾ ಈ ಸೇವಾ ಕಾರ್ಯಕ್ರಮಕ್ಕೆ ಚಾಲನೆ

ಶಿಗ್ಗಾವಿ 05: ನಮ್ಮ ಆರೋಗ್ಯ ಚೆನ್ನಾಗಿರಬೇಕಾದರೇ ನಾವು ಮೊದಲಿಗೆ ಸ್ವಚ್ಛತೆಗೆ ಆದ್ಯತೆ ಕೊಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಹೇಳಿದರು. 

ಪುರಸಭೆಯ ಆವರಣದಲ್ಲಿ ಸ್ವಚ್ಛತಾ ಈ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪಟ್ಟಣದ ಸ್ವಚ್ಚತೆಗೆ ಬರಿ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ನಿರ್ವಹಣೆ ಪಾತ್ರ ಇರುವುದಿಲ್ಲ ಇಲ್ಲಿ ಮುಖ್ಯವಾಗಿ ಸಾರ್ವಜನಿಕರ ಸಹಭಾಗಿತ್ವ ಬಹು ಮುಖ್ಯ ಪಾತ್ರವಹಿಸುತ್ತದೆ ಅಲ್ಲದೇ ಸಾರ್ವಜನಿಕರಿಗೆ ಸ್ವಚ್ಚತೆ ಬಗ್ಗೆ ಜಾಗೃತಿ ಬಂದಲ್ಲಿ ಪಟ್ಟಣ ತನ್ನಷ್ಟಕ್ಕೆ ತಾನೇ ಸುಂದರಮಯವಾದ ಪಟ್ಟಣವಾಗುತ್ತದೆ ಎಂದರು. 

ಪುರಸಭೆ ಸದಸ್ಯ ಶ್ರೀಕಾಂತ ಬುಳ್ಳಕ್ಕನವರ ಮಾತನಾಡಿ ಸ್ವಚ್ಚತೆ ವೈಯಕ್ತಿಕ ಸ್ವಚ್ಚತೆಯಾಗದೇ ಮನೆಯ ಅಕ್ಕಪಕ್ಕ, ಸುತ್ತಮುತ್ತಲಿನ ಪರಿಸರವನ್ನು ನಾವು ಸ್ವಚ್ಚವಾಗಿಟ್ಟು ಕೊಂಡಾಗ ನಮ್ಮ ಬದುಕು ಸುಂದರಮಯ ಮತ್ತು ಆನಂದದಾಯಕ ಬದುಕಾಗುತ್ತದೆ ಅಲ್ಲದೇ ಯಾವುದೇ ರೋಗರುಜಿನಗಳು ನಮ್ಮ ಬಳಿ ವ್ಯಾಪಿಸುವುದಿಲ್ಲ ಎಂದರು. 

ಪುರಸಭೆ ಸದಸ್ಯರುಗಳು, ಪುರಸಭೆ ಅಧಿಕಾರಿಗಳಾದ ಶೈಲಜಾ ಪಾಟೀಲ, ವ್ಹಿ.ಎಸ್‌.ಪಾಟೀಲ, ಸತೀಶ ತಳವಾರ, ಗಿರಿಜಮ್ಮ ಕಮಡೊಳ್ಳಿ, ಯಲ್ಲಪ್ಪ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ