ರೇನ್‌ಬೋ ವಸತಿಯುತ ಶಾಲೆಯ ಸಿಬಿಎಸ್‌ಇ ಪಠ್ಯಕ್ರಮ ಶಿಕ್ಷಣಕ್ಕೆ ಚಾಲನೆ
ರಾಣೀಬೆನ್ನೂರ 24: ಶಿಕ್ಷಣ ಪೂರಕವಾಗಿ ಪ್ರಸ್ಥುತ ಆಧುನಿಕ ಪಠ್ಯಕ್ರಮಗಳು ಆಯಾ ಹಂತದಲ್ಲಿ ಲಭ್ಯವಾಗಿರುತ್ತಿರುವುದು ಶೈಕ್ಷಣಿಕ ಅಭಿವೃದ್ಧಿಗೆ ಕಾರಣವಾಗುತ್ತಲಿದೆ. ಬದಲಾದ ಶೈಕ್ಷಣಿಕ ವಾತಾವರಣದಲ್ಲಿ ಇಂದಿನ ವಿದ್ಯಾರ್ಥಿ ಸಮುದಾಯ ಸಿದ್ಧಗೊಳ್ಳುವುದು ಅಗತ್ಯ. ಮತ್ತು ಅನಿವಾರ್ಯವಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಅವರು ಇಲ್ಲಿನ ಮಾಗೋಡ ಬಳಿಯ ರೇನ್‌ಬೋ ವಸತಿಯುತ ಸಾರ್ವಜನಿಕ ಶಾಲೆಯಲ್ಲಿ ಪರಿಪೂರ್ಣ ಟ್ರಸ್ಟ್ ಆಯೋಜಿಸಿದ್ದ ಸಿಬಿಎಸ್‌ಸಿ ಪಠ್ಯಕ್ರಮ ಆರಂಭಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಪಠ್ಯಕ್ರಮ ಹಾಗೂ ಪ್ರಸ್ತುತ ಸನ್ನಿವೇಶಗಳಲ್ಲಿ ಉದ್ಯೋಗ ಸೃಷ್ಟಿಗೆ ಬಹು ಮುಖ್ಯ ಕಾರಣವಾಗುತ್ತಲಿದೆ. ಈಗಾಗಿ ಸಿಬಿಎಸ್‌ಸಿ ಶಿಕ್ಷಣ ಪೂರೈಸಲು ಮುಂದಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ ಎನ್‌ಜೆ ಅವರು, ಸಿಬಿಎಸ್‌ಸಿ ಶಿಕ್ಷಣ ಪರಿಪೂರ್ಣ ಶಿಕ್ಷಣಕ್ಕೆ ಸಹಕಾರಿಯಾಗಿದೆ. ಬದಲಾವಣೆಗೆ ತಕ್ಕಂತೆ ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದು ಶೈಕ್ಷಣಿಕ ಪ್ರಗತಿ ಸಾಧಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ನಗರದ ಖ್ಯಾತ ವೈಧ್ಯ ಡಾ. ಬಸವರಾಜ ಕೇಲಗಾರ, ನ್ಯಾಯವಾಧಿ ಎಸ್‌ಎಸ್ ಶಿರಗಂಬಿ, ಪ್ರೊ. ಬಿ.ಬಿ.ನಂದ್ಯಾಲ. ಪ್ರೊ.ಎಸ್‌ಎಂ ಕಟ್ಟಿಮನಿ, ಪರಿಪೂರ್ಣ ಟ್ರಸ್ಟ್ ಅಧ್ಯಕ್ಷ ಡಾ.ಸುರೇಶ್ ಸಿ.ಟಿ, ಉಪಾಧ್ಯಕ್ಷ ಲಲಿತಾ ಸುರೇಶ್, ಖಜಾಂಚಿ ನಾಗರಾಜ ಎಸ್‌ಕೆ, ಕಾರ್ಯದರ್ಶಿ ಮಾಲತೇಶ್ ಐಕೆ, ಸದಸ್ಯರಾದ ವೀರಣ್ಣ ಸಿಟಿ, ಶಾರದಾ ವೀರಣ್ಣ, ಬಸವರಾಜ ಎನ್‌ಟಿ, ಶಾಂತಮ್ಮ ಐಕೆ, ರಾಘವೇಂದ್ರ ಐಕೆ ಸೇರಿದಂತೆ ಪ್ರಾಂಶುಪಾಲರು ಉಪನ್ಯಾಸಕರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಶಿಕ್ಷಕ ಜಗದೀಶ್ ಸ್ವಾಗತಿಸಿ ಸುನೀತಾ ನಿರೂಪಿಸಿ ವಂದಿಸಿದರು.