ಹಜರತ್ ಬಾಬಾ ಬಿಲನ್ ಸಾಹೇಬ ದರ್ಗಾ ದಾಸೋಹ ಕಟ್ಟಡ ಕಾಮಗಾರಿಗೆ ಚಾಲನೆ
ಚಿಕ್ಕೋಡಿ 17: ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರಯತ್ನದಿಂದ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಆರಾಧ್ಯದೈವ ಹಜರತ್ ಬಾಬಾ ಬಿಲನ್ ಸಾಹೇಬ ದರ್ಗಾದ ದಾಸೋಹದ ಕಟ್ಟಡ ಕಾಮಗಾರಿಗೆ ಆಶಾಜ್ಯೋತಿ ಬುದ್ದಿ ಮಾಂಧ್ಯ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ ಚಾಲನೆ ನೀಡಿದರು.
ನಂತರ ಸ್ಥಳೀಯ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೋಸಾಯಿಟಿ ಅಧ್ಯಕ್ಷರಾದ ರೇವಯ್ಯಾ ಹಿರೇಮಠ ಮಾತನಾಡಿ, ನಮ್ಮ ಗ್ರಾಮದ ಆರಾಧ್ಯದೈವ ಹಜರತ್ ಬಾಬಾ ಬಿಲನ್ ಸಾಹೇಬ ದರ್ಗಾಕ್ಕೆ ಒಂದು ದಾಸೋಹದ ಕಟ್ಟಡ ನಿರ್ಮಾಣವಾಗಬೇಕು ಎಂಬುದು ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ಬಳಿ ಮನವಿಯನ್ನು ಮಾಡಿಕೊಂಡಿದ್ದೇವು. ಆ ಮನವಿಗೆ ಸ್ಪಂದಿಸಿ ಹಜರತ್ ಬಾಬಾ ಬಿಲನ್ ಸಾಹೇಬ ದರ್ಗಾಕ್ಕೆ ದಾಸೋಹ ಕಟ್ಟಡ ಮಂಜೂರ ಮಾಡಿಸಿರುವುದು ಸಂತಸ ತಂದಿದೆ ಎಂದರು.
ಹಿರೇಕೋಡಿ ಗ್ರಾ.ಪಂ ಸದಸ್ಯ ಭರತ ದೇವಡಕರ ಮಾತನಾಡಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ಪ್ರಯತ್ನದಿಂದ ಹಜರತ್ ಬಾಬಾ ಬಿಲನ್ ಸಾಹೇಬ ದರ್ಗಾಕ್ಕೆ ದಾಸೋಹದ ಕಟ್ಟಡವನ್ನು ಮಂಜೂರು ಮಾಡಿದ್ದಾರೆ. ಇವತ್ತು ಈ ಕಾಮಗಾರಿಗೆ ಚಾಲನೆಯನ್ನು ನೀಡಿದ್ದೆವೆ ಎಂದರು.
ಬಾಬರ್ ಪಟೇಲ್, ಅನೀತಾ ದೇವಡಕರ, ಅನ್ಸಾರಿ ಮುಜಾವರ, ನಿಜಾಮ್ ಪಟೇಲ್, ರಾಜು ಬಾಳಿಕಾರಿ, ದಾದಾ ಪಟೇಲ್, ಸುಭಾಷ ಚೌಗಲಾ, ಅರವಿಂದ ಚೌಗಲಾ, ಶಬ್ಬಿರ ಗೌಂಡಿ, ಸಲಿಂ ಮುಜಾವರ, ನರಸಿಂಹ ದ್ರಾಕ್ಷೆ, ಅಣ್ಣಪ್ಪ ಮೊಳಕೆ, ಇಬ್ರಾಹಿಂ ಪಟೇಲ್, ಶಂಕರ ಮಾಯನ್ನವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.